ಸುಪ್ರೀಂಕೋರ್ಟ್ ಮೊರೆ ಹೋದರೂ ಜಯ ದೇವಳದ್ದೇ: 65 ವರ್ಷಗಳ ಕಟ್ಟಡಗಳು ನೆಲಸಮ!
Kukke Subramanya: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಭಿವೃದ್ಧಿಗಾಗಿ ರೂಪಿಸಲಾದ ಯೋಜನೆಗೆ ಇದ್ದ ಅಡಚಣೆಯೂ ಕೊನೆಗೂ ನಿವಾರಣೆಯಾಗಿದೆ.
ಕಡಬ: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಭಿವೃದ್ಧಿಗಾಗಿ ರೂಪಿಸಲಾದ ಯೋಜನೆಗೆ ಇದ್ದ ಅಡಚಣೆಯೂ ಕೊನೆಗೂ ನಿವಾರಣೆಯಾಗಿದೆ. ರಥಬೀದಿ ಅಗಲೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಾದಿ ಸುಗಮವಾಗಿದೆ.
ಖಾಸಗಿ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ಹಿನ್ನೆಲೆ, ಸೆ.30 ರಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ಆರಂಭವಾಗಿದೆ
ರಥಬೀದಿ ಅಗಲೀಕರಣ, ಕಾಶಿಕಟ್ಟೆ ಮಾರ್ಗವಾಗಿ ಕುಮಾರಧಾರದವರೆಗೆ ದ್ವಿಪಥ ರಸ್ತೆ, ಚರಂಡಿ, ದೀಪಾಲಂಕಾರ ವ್ಯವಸ್ಥೆ ಹಾಗೂ ಆದಿ ಸುಬ್ರಹ್ಮಣ್ಯ ರಸ್ತೆಯ ಅಗಲೀಕರಣ ಒಳಗೊಂಡಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಈ ಯೋಜನೆಗೆ ಅಗತ್ಯವಿದ್ದ 1.52 ಎಕರೆ ಜಾಗದ ಸ್ವಾಧೀನ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದೆ. ಶ್ರೀನಿಕೇತನ ಕಟ್ಟಡ ಸೇರಿದಂತೆ ಹಲವು ಹಳೆಯ ಕಟ್ಟಡಗಳ ಮಾಲೀಕರು ಭೂಸ್ವಾಧೀನ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ ಹೈಕೋರ್ಟ್ ದೇವಾಲಯದ ಪರವಾಗಿ ತೀರ್ಪು ನೀಡಿದ್ದು, ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲಿ ತಿರಸ್ಕರಿಸಿಗೊಂಡಿದ್ದು, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಲಾಗಿದೆ.