ನ.22ಕ್ಕೆ 'ಮಣ್ಣ ಘಮದ ಸಾಹಿತ್ಯ ಸಂಭ್ರಮ' ದೃಶ್ಯಗೀತೆ ಬಿಡುಗಡೆ

Puttur: ನ.22 ರಂದು ಪುತ್ತೂರಿನಲ್ಲಿ 'ಮಣ್ಣ ಘಮದ ಸಾಹಿತ್ಯ ಸಂಭ್ರಮ' ದೃಶ್ಯಗೀತೆಯ ಬಿಡುಗಡೆ ಸಮಾರಂಭ ನಡೆಯಲಿದೆ.

Nov 20, 2026 - 09:05
Nov 20, 2026 - 09:05
ನ.22ಕ್ಕೆ 'ಮಣ್ಣ ಘಮದ ಸಾಹಿತ್ಯ ಸಂಭ್ರಮ' ದೃಶ್ಯಗೀತೆ ಬಿಡುಗಡೆ

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಪಾರ್ಥವಿ ಕ್ರಿಯೇಷನ್ಸ್ ಅರ್ಪಿಸುವ ಮತ್ತು ಮಿತ್ರಂಪಾಡಿ ಜಯರಾಮ್ ರೈ (ಅಬುಧಾಬಿ) ನಿರ್ಮಾಣದ 'ಮಣ್ಣ ಘಮದ ಸಾಹಿತ್ಯ ಸಂಭ್ರಮ' ದೃಶ್ಯಗೀತೆಯ ಬಿಡುಗಡೆ ಸಮಾರಂಭ ನ.22 ರಂದು ನಡೆಯಲಿದೆ.
 
'ಚಿಗುರೆಲೆ ಸಾಹಿತ್ಯ ಬಳಗ'ದ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ದೃಶ್ಯಗೀತೆಗೆ ನಾರಾಯಣ ಕುಂಬ್ರ ಸಾಹಿತ್ಯ ರಚಿಸಿದ್ದಾರೆ. ಗ್ರಾಮ ಸಾಹಿತ್ಯ ಸಂಭ್ರಮದ ಆಶಯ ಹಾಗೂ ಗ್ರಾಮೀಣ ಸಾಹಿತ್ಯದ ಸೊಗಡನ್ನು ಸಾರುವ ಉದ್ದೇಶದಿಂದ ಈ ದೃಶ್ಯಗೀತೆ ರೂಪುಗೊಂಡಿದೆ.
 
ಬೆಳಗ್ಗೆ 10.30ಕ್ಕೆ ಪುತ್ತೂರಿನ ದರ್ಬೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಬಿಡುಗಡೆ ಸಮಾರಂಭ ನಡೆಯಲಿದೆ. ದೃಶ್ಯಗೀತೆಯನ್ನು ಹಿರಿಯ ಸಾಹಿತಿ ಮತ್ತು ಸಾಹಿತ್ಯ ಪರಿಚಾರಕ ಡಾ.ಕೊಳ್ಚಪ್ಪೆ ಗೋವಿಂದ ಭಟ್ ಹೊರತರಲಿದ್ದಾರೆ.
 
ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಗಣೇಶ ಪಾಲೆಚ್ಚಾರು ಭಾಗವಹಿಸಲಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.