Puttur: ವಿವೇಕಾನಂದ ಕಾಲೇಜು.. ಅರೋರಾ 2K26

Puttur: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿಜ್ಞಾನ ಸಂಘ ಹಾಗೂ ಇಂರ‍್ನಲ್ ಕ್ವಾಲಿಟಿ ಅಷ್ಯುರೆನ್ಸ್ ಸೆಲ್‌ನ ವತಿಯಿಂದ 'ಅರೋರಾ 2026' ಕಾರ್ಯಕ್ರಮ ನಡೆಯಿತು.

Nov 7, 2026 - 12:27
Puttur: ವಿವೇಕಾನಂದ ಕಾಲೇಜು.. ಅರೋರಾ 2K26

ಪುತ್ತೂರು: ನಮ್ಮಲ್ಲಿ ಮೂಡುವ ಹಲವು ಪ್ರಶ್ನೆಗಳಿಗೆ ಉತ್ತರ ನೀಡುವುದು ವಿಜ್ಞಾನ. ವಿಜ್ಞಾನ ಕ್ಷೇತ್ರವು ನಮಗೆ ಹೆಚ್ಚಿನ ಜ್ಞಾನವನ್ನು ಒದಗಿಸುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ವಿಜ್ಞಾನವು ಉತ್ತಮ ಕ್ಷೇತ್ರವಾಗಿದೆ ಎಂದು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ರಮ್ಯಶ್ರೀ ತಿಳಿಸಿದರು. 
 
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿಜ್ಞಾನ ಸಂಘ ಹಾಗೂ ಇಂರ‍್ನಲ್ ಕ್ವಾಲಿಟಿ ಅಷ್ಯುರೆನ್ಸ್ ಸೆಲ್‌ನ ವತಿಯಿಂದ ನಡೆದ 'ಅರೋರಾ 2026' ಪದವಿ-ಪೂರ್ವ ಅಂತರ ಕಾಲೇಜು ಮಟ್ಟದ ಸ್ಪರ್ಧೆಯನ್ನು ಉದ್ಘಾಟಿಸಿ, ಮಾತನಾಡಿದರು.
 
ಕಾಲೇಜಿನ ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ್ ಭಟ್ ಎಸ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಈ ಕಾರ್ಯಕ್ರಮವು ಒಂದು ಉತ್ತಮ ವೇದಿಕೆಯಾಗಿದೆ. ಇದು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ವಿಜ್ಞಾನ ಸಂಘದ ಅಧ್ಯಕ್ಷ ಶ್ರೀಜನ್, ಕಾರ್ಯದರ್ಶಿ ಅನರ್ಘ್ಯ ಜಿ ಮತ್ತು ಉಪಸ್ಥಿತರಿದ್ದರು. ಜೀವಿತಾ ಎಂ.ಆರ್ ಸ್ವಾಗತಿಸಿದರು. ತೃತೀಯ ವಿಜ್ಞಾನ ವಿಭಾಗದ ಹರ್ಷಿತಾ ವಂದಿಸಿದರು. 
 
ಒಟ್ಟು ಎಂಟು ಪದವಿ-ಪೂರ್ವ ವಿದ್ಯಾಸಂಸ್ಥೆಗಳ ನೂರಕ್ಕಿಂತ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳ್ತಂಗಡಿಯ ವಾಣಿ ಪದವಿ-ಪೂರ್ವ ಕಾಲೇಜು ಪ್ರಥಮ ಸ್ಥಾನವನ್ನು ಗಳಿಸಿದರೆ, ದ್ವಿತೀಯ ಸ್ಥಾನವನ್ನು ಪುತ್ತೂರಿನ ವಿವೇಕಾನಂದ ಕಾಲೆಜು ಪಡೆಯಿತು.
 
ಸಮಾರೋಪ ಸಮಾರಂಭ:
 
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎ ಮೋಹನ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ ವಿದ್ಯಾರ್ಥಿಗಳು ಕಾಲೇಜು ಅವಧಿಯಲ್ಲಿ ತಮ್ಮ ಆಲೋಚನಾ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
 
ಪದವಿ-ಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಶ್ರುತಿ ಎಂ.ಎಸ್ ಮಾತನಾಡಿ, ವಿಜ್ಞಾನದ ಬೆಳವಣಿಗೆಗೆ ವಿದ್ಯಾರ್ಥಿಗಳಲ್ಲಿ ವಿಭಿನ್ನ ದೃಷ್ಟಿಕೋನ ಅಗತ್ಯ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡಬೇಕು. ವಿದ್ಯಾರ್ಥಿಗಳು ಆ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಾಗ ಮಾತ್ರ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಸಾಧ್ಯವಾಗುತ್ತದೆ. ಸಮಾಜಕ್ಕೆ ಒಬ್ಬ ಉತ್ತಮ ಎಂಜಿನಿಯರ್ ಎಷ್ಟು ಮುಖ್ಯವೋ, ವಿಜ್ಞಾನಿಗಳೂ ಸಮಾಜಕ್ಕೇ ಅಷ್ಟೇ ಮುಖ್ಯ ಎಂದು ಹೇಳಿದರು.
 
ಕಾರ್ಯಕ್ರಮದಲ್ಲಿ ಸೈನ್ಸ್ ಎಸೋಸಿಯೇಶನ್ ಸಂಯೋಜಕಿ ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಸೌಮ್ಯ ಬಿ ಉಪಸ್ಥಿತರಿದ್ದರು. ತೃತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚೇತನ ಸ್ವಾಗತಿಸಿದರು. ಮನ್ವಿತಾ ಎಂ ವಂದಿಸಿದರು. ಅವನಿ ಕೆ ಕಾರ್ಯಕ್ರಮ ನಿರೂಪಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.