ದಿನ ಭವಿಷ್ಯ: ಇವತ್ತು ಯಾರಿಗೆ ಶುಭ ಫಲ?
Daily Horoscope: ಇಂದು (ಬುಧವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ನಿಧಾನವಾಗಿ ಸಾಗಿ.. ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆ.. ಎಣಿಸಿದ ವೇಗದಲ್ಲಿ ಕಾರ್ಯ ಮುಗಿಸಲು ಎಲ್ಲರ ಸಹಕಾರ. ವಾಹನ ಚಾಲನೆಯಲ್ಲಿ ಎಚ್ಚರ. ವಸ್ತ್ರ ವ್ಯಾಪಾರಿಗಳಿಗೆ ವಿಶೇಷ ಲಾಭ. ಗಣಪತಿ ಅಥರ್ವಶೀರ್ಷ, ರಾಮ ಭುಜಂಗಪ್ರಯಾತ ಸ್ತೋತ್ರ, ಶನಿಮಹಾತ್ಮೆ ಓದಿ.
ವೃಷಭ:
ಸರ್ವರ ಸಹಕಾರದಿಂದ ಕಾರ್ಯ ಯಶಸ್ವಿ.. ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಆರೋಗ್ಯದ ಕುರಿತು ಸಕಾಲಿಕ ಜಾಗ್ರತೆ. ಉದ್ಯೋಗಾಸಕ್ತರಿಗೆ ನೌಕರಿ ಸಿಗುವ ಸೂಚನೆ. ವಿವಾಹಾಪೇಕ್ಷಿಗಳಿಗೆ ಶುಭ ಸೂಚನೆ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಆದಿತ್ಯ ಹೃದಯ ಓದಿ.
ಮಿಥುನ:
ಸತ್ವಪರೀಕ್ಷೆಯಲ್ಲಿ ಗೆದ್ದ ಉದ್ಯೋಗಸ್ಥರು.. ಉದ್ಯಮಿಗಳ ಕೀರ್ತಿ ವರ್ಧನೆಗೆ ಪೂರಕ ವಾತಾವರಣ. ಪಿತ್ರಾರ್ಜಿತ ಆಸ್ತಿಯಲ್ಲಿ ಫಸಲು ಹೆಚ್ಚಳ. ಪರಿಸರ ರಕ್ಷಣೆಗೆ ಶ್ರಮದಾನ. ಮನೆಮಂದಿಯ ನಡುವೆ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಕರ್ಕಾಟಕ:
ಆಯಕಟ್ಟಿನ ಸ್ಥಾನಗಳಲ್ಲಿ ಇರುವವರು ಎಚ್ಚರ.. ಹಿರಿಯರನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆ ನಿವಾರಣೆ. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ದೇವತಾರಾಧನೆ, ಸತ್ಸಂಗಗಳ ಕಡೆಗೆ ಸೆಳೆತ. ಆಭರಣ ತಯಾರಿ ಬಲ್ಲವರಿಗೆ ಉದ್ಯೋಗಾವಕಾಶ. ಗಣಪತಿ ಅಥರ್ವಶೀರ್ಷ, ಹನುಮಾನ್ ಚಾಲೀಸಾ, ಲಕ್ಷ್ಮೀಸ್ತೋತ್ರ ಓದಿ.
ಸಿಂಹ:
ಉದ್ಯೋಗ ಸಂಬಂಧ ಹೊಸ ಪ್ರಯೋಗಗಳು.. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಕೈತುಂಬಾ ಕೆಲಸ. ಮನೆಯವರೊಂದಿಗೆ ದೇವೀಕ್ಷೇತ್ರಕ್ಕೆ ಭೇಟಿ.ವಿದೇಶದಲ್ಲಿ ನೆಲೆಸಿರುವ ಮಿತ್ರನಿಂದ ಕರೆ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ದೇವೀಕವಚ ಓದಿ.
ಕನ್ಯಾ:
ಎಲೆಕ್ಟ್ರಾನಿಕ್ಸ್ , ಎಲೆಕ್ಟ್ರಿಕಲ್ಸ್ ವ್ಯಾಪಾರ ವೃದ್ಧಿ.. ವೃತ್ತಿ ಪರಿಣತಿ ಹೆಚ್ಚಿಸಿಕೊಳ್ಳಲು ನುರಿತವರ ಮಾರ್ಗದರ್ಶನ. ಕುಟುಂಬದ ಮನೆಯಲ್ಲಿ ವಿವಾಹ ಸಂಭ್ರಮ. ಮಕ್ಕಳ ಆತ್ಮವಿಶ್ವಾಸ ವೃದ್ಧಿಗೆ ಪ್ರಯತ್ನ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ತುಲಾ:
ನಿರಾಳವಾದ ಮನಸ್ಥಿತಿಯ ಅನುಭವ.. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ. ತಾಯಿಯ ಕಡೆಯ ಬಂಧುಗಳ ಆಗಮನ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ರಾಜರಾಜೇಶ್ವರೀ ಅಷ್ಟಕ ಓದಿ.
ವೃಶ್ಚಿಕ:
ಉದ್ಯೋಗಸ್ಥರಿಗೆ ಹರ್ಷದ ಸನ್ನಿವೇಶ.. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಹೊಲಿಗೆ ಕೆಲಸ ಬಲ್ಲವರಿಗೆ ಕೆಲಸಕ್ಕೆ ಕರೆ. ಉದ್ಯೋಗ ಅರಸುವ ಶಿಕ್ಷಿತರಿಗೆ ಮಾರ್ಗದರ್ಶನ. ಸಂಗೀತಾದಿ ಕಲೆಗಳ ಆಸ್ವಾದನೆಯಿಂದ ಆನಂದ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
ಧನು:
ಎಲ್ಲ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ.. ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಪಾಲುದಾರಿಕೆ ವ್ಯವಹಾರದಲ್ಲಿ ಶೀಘ್ರ ಪ್ರಗತಿ. ಉದ್ಯೋಗಾಸಕ್ತರಿಗೆ ಯೋಗ್ಯ ಅವಕಾಶ ಗೋಚರ. ಮನೆಯಲ್ಲಿ ಇಷ್ಟದೇವತಾರ್ಚನೆ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ಸೂರ್ಯಮಂಡಲ ಸ್ತೋತ್ರ ಓದಿ.
ಮಕರ:
ಸಂಸಾರ, ಉದ್ಯೋಗ ನಿರ್ವಹಣೆಯಲ್ಲಿ ತೃಪ್ತಿ.. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ವೃತ್ತಿಪರ ಉದ್ಯೋಗಸ್ಥರಿಗೆ ಸಮಯದ ಸವಾಲು. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ. ಕೆಲವರಿಗೆ ಅತಿಥಿ ಸತ್ಕಾರ ಯೋಗ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಕಾರ್ಯರಂಗದ ಕರೆಗಳಿಗೆ ಸ್ಪಂದನ.. ಉದ್ಯೋಗಸ್ಥರಿಗೆ ಹೊಸ ವಿಭಾಗಕ್ಕೆ ಪ್ರವೇಶ. ವೃತ್ತಿರಂಗದ ಮಿತ್ರರಿಂದ ಸಹಾಯಕ್ಕೆ ಕೋರಿಕೆ. ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸುವ ಒತ್ತಡ. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಶುಭ ದಿನ. ಗಣೇಶ ಅಷ್ಟಕ, ಕಾರ್ತಿಕೇಯ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಸಹಜವಾದ ಕೆಲಸಗಳ ಒತ್ತಡ.. ಜನಸೇವಾ ಕಾರ್ಯಗಳಿಗೆ ಪ್ರೋತ್ಸಾಹ. ಭೂಮಿ ಖರೀದಿ, ಮಾರಾಟದಲ್ಲಿ ಲಾಭ. ಗುರುಸಮಾನ ವ್ಯಕ್ತಿಯ ಮಾರ್ಗದರ್ಶನ. ಮಕ್ಕಳಿಗೆ ಧಾರ್ಮಿಕ ವಿಧಿಗಳಲ್ಲಿ ಶಿಕ್ಷಣ ನೀಡುವ ಕ್ರಮಗಳ ಶುಭಾರಂಭ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.