Canara Bank: ಕೆನರಾ ಬ್ಯಾಂಕ್‌ನಿಂದ 3,500 ಗ್ರಾಜುಯೇಟ್ ಅಪ್ರೆಂಟಿಸ್ ನೇಮಕಾತಿ.. ಅ.1 ರಿಂದ ಅರ್ಜಿ ಸಲ್ಲಿಕೆ ಶುರು

Canara Bank: ಕೆನರಾ ಬ್ಯಾಂಕ್ 3,500 ಗ್ರಾಜುಯೇಟ್ ಅಪ್ರೆಂಟಿಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

Sep 29, 2026 - 15:50
Canara Bank: ಕೆನರಾ ಬ್ಯಾಂಕ್‌ನಿಂದ  3,500 ಗ್ರಾಜುಯೇಟ್ ಅಪ್ರೆಂಟಿಸ್ ನೇಮಕಾತಿ.. ಅ.1 ರಿಂದ ಅರ್ಜಿ ಸಲ್ಲಿಕೆ ಶುರು

Canara Bank: ಕೆನರಾ ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. 3,500 ಗ್ರಾಜುಯೇಟ್ ಅಪ್ರೆಂಟಿಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅ.1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ 'ಪದವಿ' ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಜನವರಿ 1, 2023 ರಿಂದ ಸೆಪ್ಟೆಂಬರ್ 1, 2026ರ ನಡುವಿನ ಅವಧಿಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.

ಅಭ್ಯರ್ಥಿಗಳಿಗೆ  20 ರಿಂದ 28 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಅಭ್ಯರ್ಥಿಗಳಿಗೆ 5 ವರ್ಷ/ ಒಬಿಸಿಯವರಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ. 

ಕರ್ನಾಟಕದಲ್ಲಿ ಗರಿಷ್ಠ ಅಂದರೆ  581 ಹುದ್ದೆಗಳು ಖಾಲಿಯಿವೆ. ಉತ್ತರ ಪ್ರದೇಶದಲ್ಲಿ 409, ತಮಿಳುನಾಡಿನಲ್ಲಿ 391 ಆಂಧ್ರ ಪ್ರದೇಶದಲ್ಲಿ 247, ಕೇರಳದಲ್ಲಿ 240, ಮಹಾರಾಷ್ಟ್ರದಲ್ಲಿ 205, ಪಶ್ಚಿಮ ಬಂಗಾಳದಲ್ಲಿ 150, ತೆಲಂಗಾಣದಲ್ಲಿ 134, ಬಿಹಾರದಲ್ಲಿ 122, ಹರಿಯಾಣದಲ್ಲಿ 114 ಮಧ್ಯಪ್ರದೇಶದಲ್ಲಿ 110 ಹಾಗೂ ಒಡಿಶಾದಲ್ಲಿ 104 ಹುದ್ದೆಗಳಿವೆ.

ಅಭ್ಯರ್ಥಿಗಳನ್ನು 1 ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಜೊತೆಗೆ ತಿಂಗಳಿಗೆ ರೂ.16,650 ಸ್ಟೈಫಂಡ್ ಕೊಡಲಾಗುತ್ತದೆ.

ಎಲ್ಲಾ ಅಭ್ಯರ್ಥಿಗಳಿಗೆ ರೂ.500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಅಭ್ಯರ್ಥಿಗಳು ಮೊದಲು ಎನ್ಎಟಿಎಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಅಲ್ಲಿರುವ ಪ್ರೊಫೈಲ್‌ನಲ್ಲಿ ಪ್ರತಿಯೊಂದು ವಿವರಗಳನ್ನು ತುಂಬಬೇಕು. ರಿಜಿಸ್ಟರ್ ಐಡಿ ಪಡೆದ ಬಳಿಕ, ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಕೇರಿಯರ್ ವಿಭಾಗದ 'ಗ್ರಾಜುಯೇಟ್ ಅಪ್ರೆಂಟಿಸ್ ನೇಮಕಾತಿ-2026' ಲಿಂಕ್ ಓಪನ್ ಮಾಡಿ, ಅ.17 ರೊಳಗೆ ಅರ್ಜಿ ಹಾಕಬಹುದು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.