ನ.14 ರಂದು ಬೆಂಗಳೂರಿನಲ್ಲಿ ‘ಧನ್ಯವಾದ ಕರ್ನಾಟಕ’ ಕಾರ್ಯಕ್ರಮ

Bengaluru: ನ.14 ರಂದು ಬೆಂಗಳೂರಿನಲ್ಲಿ ಗೌರೀಶ್ ಅಕ್ಕಿ ಸ್ಟುಡಿಯೊ ಅರ್ಪಿಸುವ ‘ಧನ್ಯವಾದ ಕರ್ನಾಟಕ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Nov 13, 2026 - 18:54
Nov 13, 2026 - 18:55
ನ.14 ರಂದು ಬೆಂಗಳೂರಿನಲ್ಲಿ ‘ಧನ್ಯವಾದ ಕರ್ನಾಟಕ’ ಕಾರ್ಯಕ್ರಮ

ಬೆಂಗಳೂರು: ಗೌರೀಶ್ ಅಕ್ಕಿ ಸ್ಟುಡಿಯೊ ಅರ್ಪಿಸುವ ‘ಧನ್ಯವಾದ ಕರ್ನಾಟಕ’ ಕಾರ್ಯಕ್ರಮ ನ.14 ರಂದು ಶನಿವಾರ ಸಂಜೆ 6 ಗಂಟೆಗೆ ರೇಸ್ ಕೋರ್ಸ್ ರಸ್ತೆಯ ಫಾರ್ಚ್ಯೂನ್ ಪಾರ್ಕ್ ಜೆ.ಪಿ.ಸೆಲೆಸ್ಟಿಯಲ್‌ನಲ್ಲಿ ನಡೆಯಲಿದೆ.

ತಮ್ಮ ಮಾಧ್ಯಮ ಪಯಣಕ್ಕೆ ನಿರಂತರ ಪ್ರೋತ್ಸಾಹ ನೀಡಿ, ಬೆಂಬಲಿಸಿದ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, 10 ಲಕ್ಷ ಜನರ ಪ್ರಜ್ಞಾವಂತ ಸಮುದಾಯದ ಸಂಭ್ರಮಕ್ಕೆ ವೇದಿಕೆಯಾಗಲಿದೆ.

ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸಂಸದ ತೇಜಸ್ವಿ ಸೂರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ 10 ಸಾಧಕರಿಗೆ ‘ಕ್ಷ'ತ್ರಾಧಿಪತಿ ಎಕ್ಸಲೆನ್ಸ್ ಅವಾರ್ಡ್ಸ್–2026' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಕ್ಯೂ ಪ್ರಚಾರ ಡಿಜಿಟಲ್ ಮಾರ್ಕೆಟಿಂಗ್ ಆ್ಯಂಡ್ ಪಿಆರ್ ಸಂಸ್ಥೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.