ಮಂಗಳೂರಿನಿಂದ ಬೆಂಗಳೂರಿಗೆ ಮೊದಲ ವಂದೇ ಭಾರತ್‌ ರೈಲು ಓಡಾಟಕ್ಕೆ ಮುಹೂರ್ತ ಫಿಕ್ಸ್‌; ನ.13ರಿಂದ ಸಂಚಾರ ಆರಂಭ

ಯಶವಂತಪುರ-ಮಂಗಳೂರು-ಮಡಗಾಂವ್‌(26655/26656) ಮಾರ್ಗವಾಗಿ ಸಂಚರಿಸುವ ಕರಾವಳಿ ಭಾಗದ ಮೊತ್ತ ಮೊದಲ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ.13ರಂದು ಬೆಂಗಳೂರಿನಿಂದ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಚಾಲನೆ ನೀಡಲಾಗುತ್ತಿದೆ. ಜತೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಈ ವಂದೇ ಭಾರತ್‌ ರೈಲಿಗೆ ಅದೇದಿನ ಮಧ್ಯಾಹ್ನ 2 ಗಂಟೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

Nov 11, 2026 - 22:43
Nov 11, 2026 - 23:05
ಮಂಗಳೂರಿನಿಂದ ಬೆಂಗಳೂರಿಗೆ ಮೊದಲ ವಂದೇ ಭಾರತ್‌ ರೈಲು ಓಡಾಟಕ್ಕೆ ಮುಹೂರ್ತ ಫಿಕ್ಸ್‌; ನ.13ರಿಂದ ಸಂಚಾರ ಆರಂಭ

ಮಂಗಳೂರು: ಇದೇ ಮೊದಲ ಬಾರಿಗೆ ಕಡಲನಗರಿ ಮಂಗಳೂರು(mangalore) ಹಾಗೂ ಬೆಂಗಳೂರು(bangalore) ನಡುವೆ ಅತಿ ವೇಗದಲ್ಲಿ ಸಂಚರಿಸುವ ವಂದೇ ಭಾರತ್‌ ರೈಲು ಸಂಚಾರಕ್ಕೆ ಇದೀಗ ಮುಹೂರ್ತ ಫಿಕ್ಸ್‌ ಆಗಿದೆ.  

ಯಶವಂತಪುರ-ಮಂಗಳೂರು-ಮಡಗಾಂವ್‌(26655/26656) ಮಾರ್ಗವಾಗಿ ಸಂಚರಿಸುವ ಕರಾವಳಿ ಭಾಗದ ಮೊತ್ತ ಮೊದಲ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ.13ರಂದು ಬೆಂಗಳೂರಿನಿಂದ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಚಾಲನೆ ನೀಡಲಾಗುತ್ತಿದೆ. ಜತೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಈ ವಂದೇ ಭಾರತ್‌ ರೈಲಿಗೆ ಅದೇದಿನ ಮಧ್ಯಾಹ್ನ 2 ಗಂಟೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಯಶವಂತಪುರದಿಂದ ಹೊರಟು ಮಂಗಳೂರಿಗೆ ತಲುಪಲಿದೆ. ಈ ಮಾರ್ಗದಲ್ಲಿ ಹಾಸನ, ಸಕಲೇಶಪುರ, ಕಬಕ-ಪುತ್ತೂರು ಹಾಗೂ ಮಂಗಳೂರಿನಲ್ಲಿ ನಿಲುಗಡೆ ನೀಡಲಿದೆ. ಅಲ್ಲಿಂದ ಈ ರೈಲು ಉಡುಪಿ ಮಾರ್ಗವಾಗಿ ಮಡಗಾಂವ್‌(ಗೋವಾ)ಗೆ ಸಂಚರಿಸಲಿದೆ. ಈ ಮೊದಲು ವಂದೇ ಭಾರತ್‌ ರೈಲು ಮಡಗಾಂವ್‌ ಹಾಗೂ ಮಂಗಳೂರು ನಡುವೆ ಸಂಚರಿಸುತ್ತಿತ್ತು.

ಯಶವಂತಪುರ-ಮಂಗಳೂರು-ಮಡಗಾಂವ್‌ ರೈಲು ಯಶವಂತಪುರದಿಂದ ಬೆಳಗ್ಗೆ 07:35ಕ್ಕೆ ಹೊರಟು, ಅದೇ ದಿನ ರಾತ್ರಿ 08:55 ಕ್ಕೆ ಮಡ್ಗಾಂವ್ ತಲುಪಲಿದೆ. ಈ ರೈಲು ಬೆಳಗ್ಗೆ ಹೊರಟು ಮಧ್ಯಾಹ್ನ ಸುಮಾರು 3 ಗಂಟೆಗೆ ಮಂಗಳೂರು ತಲುಪಲಿದೆ. ಅಂದರೆ ಸುಮಾರು 7ರಿಂದ 8 ತಾಸಿನಲ್ಲಿ ಮಂಗಳೂರಿಗೆ ರೈಲು ಕ್ರಮಿಸಲಿದ್ದು, ಬೆಂಗಳೂರು ಹಾಗೂ ಮಂಗಳೂರು ನಡುವೆ ಓಡಾಡುವ ನೂರಾರು ಪ್ರಯಾಣಿಕರಿಗೆ ಇದು ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಮಂಗಳೂರಿನಿಂದ ಮುಂದಕ್ಕೆ ಹೊರಟು ಈ ರೈಲು ಉಡುಪಿ, ಕುಂದಾಪುರ, ಕಾರವಾರ ಮಾರ್ಗವಾಗಿ ಮಡಗಾಂವ್‌ ತಲುಪಲಿದೆ.

ಮಂಗಳೂರಿನಿಂದ ಈಗಾಗಲೇ ತಿರುವನಂತಪುರಕ್ಕೆ ವಂದೇ ಭಾರತ್‌ ರೈಲು ಸಂಚರಿಸುತ್ತಿದೆ. ಅದೇರೀತಿ, ಮಂಗಳೂರಿನಿಂದ ಮಡಗಾಂವ್‌ಗೆ ಈಗಾಗಲೇ ಸಂಚರಿಸುವ ಈ ವಂದೇ ಭಾರತ್‌ ರೈಲನ್ನು ಮಂಗಳೂರಿನಿಂದ ಬೆಂಗಳೂರಿಗೆ ವಿಸ್ತರಿಸಲಾಗಿದೆ. ಇದರೊಂದಿಗೆ ಇದೀಗ, ರಾಜಧಾನಿ ಬೆಂಗಳೂರು ಹಾಗೂ ಮಂಗಳೂರು ನಡುವೆ ಮೊದಲ ಬಾರಿಗೆ ವಂದೇ ಭಾರತ್‌ ರೈಲು ಸಂಚರಿಸಲಿದೆ. ಇದು ವಿಮಾನಯಾನ ಹೊರತುಪಡಿಸಿ ಬೆಂಗಳೂರು ಹಾಗೂ ಮಂಗಳೂರು ನಡುವೆ ಬಹಳ ವೇಗವಾಗಿ ಸಂಚರಿಸುವ ಸಂಪರ್ಕ ವ್ಯವಸ್ಥೆಯಾಗಿ ಈ ವಂದೇ ಭಾರತ್‌ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

 ಮಂಗಳೂರು ರೈಲು ಸಂಪರ್ಕ ಜಾಲ ಬಲವರ್ಧನೆ

ಕರ್ನಾಟಕದ ವಾಣಿಜ್ಯದ ಹೆಬ್ಬಾಗಿಲು ಎಂದು ಕರೆಸಿಕೊಂಡಿರುವ ಮಂಗಳೂರು ರೈಲು ಜಾಲ ಇದೀಗ ಮತ್ತಷ್ಟು ಸುಧಾರಣೆ ಕಂಡಿದೆ. ಇತ್ತೀಚೆಗಷ್ಟೇ ಮಂಗಳೂರು ರೈಲು ವಿಭಾಗವನ್ನು ದಕ್ಷಿಣ ರೈಲ್ವೆಯಿಂದ ಬೇರ್ಪಡಿಸಿ ನೈರುತ್ಯ ವಲಯಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದಕ್ಕೆಲ್ಲ ಕಾರಣಕರ್ತರು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು. ಸಂಸದರಾಗಿ ಕ್ಯಾ. ಚೌಟ ಅವರು ದಕ್ಷಿಣ ಕನ್ನಡದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಗಮನಾರ್ಹ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಇದೀಗ ಸೇರ್ಪಡೆಯಾಗುತ್ತಿರುವುದೇ ಬೆಂಗಳೂರು-ಮಂಗಳೂರು-ಮಡಗಾಂವ್‌ ವಂದೇ ಭಾರತ್‌ ರೈಲು. ಏಕೆಂದರೆ, ಮಡಗಾಂವ್‌-ಮಂಗಳೂರು ರೈಲನ್ನು ಬೆಂಗಳೂರಿಗೆ ವಿಸ್ತರಿಸುವುದಕ್ಕೆ ಈ ಭಾಗದ ಜನರಿಂದ ಸಾಕಷ್ಟು ಬೇಡಿಕೆ ಬಂದಿತ್ತು. ಹೀಗಿರುವಾಗ, ಈ ಸೂಪರ್‌ಫಾಸ್ಟ್‌ ರೈಲು ಬೆಂಗಳೂರಿಗೆ ವಿಸ್ತರಿಸುವಲ್ಲಿ ಕ್ಯಾ. ಚೌಟ ಅವರ ಪ್ರಯತ್ನವೂ ಇದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.