ಮೇಷ:
ವಿರಾಮವನ್ನು ಅರ್ಥಪೂರ್ಣವಾಗಿಸಿದ ಬೆಳಕಿನ ಹಬ್ಬ.. ಅಪೂರ್ವ ಸಾಧನೆ ಮಾಡಿದ ಹೆಗ್ಗಳಿಕೆ. ನಾವೇ ಸುಖಿಗಳೆಂಬ ಭಾವನೆ. ಉದ್ಯಮದ ನೌಕರರಿಗೆ ಹರ್ಷ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆರೋಗ್ಯ, ಉತ್ಸಾಹ.ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.
ವೃಷಭ:
ಇಡೀದಿನ ನಿಶ್ಚಿಂತೆಯಲ್ಲಿ ಯಾಪನೆ.. ಕೆಲಸಗಳು ಅರ್ಧದಲ್ಲಿ ನಿಲ್ಲದಂತೆ ಎಚ್ಚರ. ವ್ಯವಹಾರ ನಿಮಿತ್ತ ಪ್ರವಾಸ ಮುಂದಕ್ಕೆ. ಸಂಸಾರದಲ್ಲಿ ಎಲ್ಲರಿಗೂ ಸಮಾಧಾನದ ಅನುಭವ. ಸಣ್ಣ ಉದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಶುಭದಿನ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ರವಿಸ್ತೋತ್ರ ಓದಿ.
ಮಿಥುನ:
ಹಬ್ಬ ಆಚರಣೆಯೊಡನೆ ಕರ್ತವ್ಯದ ಕರೆಗೆ ಸ್ಪಂದನ.. ಸೇವಾ ಹಿರಿತನಕ್ಕೆ ಮಾನ್ಯತೆ. ಉದ್ಯಮಗಳ ನೌಕರರಿಗೆ ಹರ್ಷ. ಮಹಿಳೆಯರ ನೇತೃತ್ವದ ಗೃಹೋದ್ಯಮಗಳು ಪ್ರಗತಿಯಲ್ಲಿ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ. .ಗಣೇಶ ಕವಚ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.
ಕರ್ಕಾಟಕ:
ಸತ್ವಪರೀಕ್ಷೆಯ ಸನ್ನಿವೇಶಗಳು ಬರಲಿವೆ.. ಉದ್ಯೋಗಸ್ಥರಿಗೆ ವಿರಾಮದ ಸಂಭ್ರಮ. ಕೃಷ್ಯುತ್ಪನ್ನ ಮಾರಾಟದಿಂದ ಲಾಭ. ಉದ್ಯೋಗ ಬೇಟೆಯ ಪ್ರಯತ್ನ ಸಫಲ. ಹಿರಿಯರು, ಗೃಹಿಣಿಯರು, ಮಕ್ಕಳ ಆರೋಗ್ಯ ಉತ್ತಮ.ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.
ಸಿಂಹ:
ಒಡನಾಡಿಗಳೊಡನೆ ಹಬ್ಬದ ಸಂಭ್ರಮ.. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಬಂಧು ಜನರೊಡನೆ ಸೌಹಾರ್ದಕೂಟ. ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಮಾರಾಟದಿಂದ ಲಾಭ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ಅಷ್ಡಕ, ನರಸಿಂಹ ಕವಚ, ಲಕ್ಷ್ಮೀ ಸ್ತೋತ್ರ ಓದಿ.
ಕನ್ಯಾ:
ಹಬ್ಬದ ದಿನ ಮಹತ್ವದ ನಿರ್ಧಾರ.. ವಿದ್ಯುತ್ ಮತ್ತು ಇಲೆಕ್ಟ್ರಾನಿಕ್ಸ್ ವ್ಯಾಪಾರಿಗಳಿಗೆ ಉತ್ತಮ ಆದಾಯ. ಗೃಹೋತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ. ದೇವತಾ ಕಾರ್ಯಗಳಲ್ಲಿ ಪಾಲುಗೊಳ್ಳುವ ಆಸಕ್ತಿ. ಗಣೇಶ ಪಂಚರತ್ನ, ವೇದಸಾರ ಶಿವಸ್ತೋತ್ರ, ಅಷ್ಟಲಕ್ಷ್ಮೀ ಸ್ತೋತ್ರ ಓದಿ.
ತುಲಾ:
ಉದ್ಯೋಗ, ವ್ಯವಹಾರದ ಚಿಂತೆ ಬಿಟ್ಟು ಹಬ್ಬ ಆಚರಣೆ.. ನೌಕರ ವರ್ಗಕ್ಕೆ ಹರ್ಷ. ದೈವಾನುಗ್ರಹ ಪ್ರಾಪ್ತಿಗೆ ಸಾಧನೆ ಮುಂದುವರಿಕೆ. ಸಂಸಾರದಲ್ಲಿ ಸಾಮರಸ್ಯದ ವಾತಾವರಣ. ಕೇಟರಿಂಗ್ ವ್ಯವಹಾರಸ್ಥರು ಎಚ್ಚರ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ದತ್ತಾತ್ರೇಯ ಸ್ತೋತ್ರ ಓದಿ.
ವೃಶ್ಚಿಕ:
ಏರಿಳಿತವಿಲ್ಲದ ಬದುಕಿನಲ್ಲಿ ಹಬ್ಬದ ಸಂಭ್ರಮ.. ಸ್ವಂತ ಉದ್ಯಮದ ತೃಪ್ತಿಕರ ಬೆಳವಣಿಗೆ. ಪರಿಸರ ನೈರ್ಮಲ್ಯ ರಕ್ಷಣೆಯಲ್ಲಿ ಭಾಗಿ. ಹೂವು, ಹಣ್ಣು ವ್ಯಾಪಾರಿಗಳಿಗೆ ಲಾಭ. ಹಿರಿಯರು, ಮಹಿಳೆಯರು ಮತ್ತು ಮಕ್ಕಳಿಗೆ ಉಲ್ಲಾಸದ ವಾತಾವರಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಧನು:
ಮುಕ್ತ ಮನಸ್ಸಿನಿಂದ ಹಬ್ಬ ಆಚರಣೆ.. ಉದ್ಯೋಗ ಸ್ಥಾನದ ಚಿಂತೆ ಇಂದಿಲ್ಲ. ಸ್ವಂತ ಉದ್ಯಮ ಕ್ರಮವಾಗಿ ಅಭಿವೃದ್ಧಿ. ದೇವತಾರ್ಚನೆಯಿಂದ ನೆಮ್ಮದಿ ಪ್ರಾಪ್ತಿ. ಕೃಷಿ ಕ್ಷೇತ್ರದ ಪ್ರಯೋಗಗಳಲ್ಲಿ ಮುನ್ನಡೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ದೇವೀಸ್ತೋತ್ರ ಓದಿ.
ಮಕರ:
ಹಬ್ಬದಿಂದಾಗಿ ಸಮಸ್ಯೆಗಳಿಗೆ ತಾತ್ಕಾಲಿಕ ವಿರಾಮ.. ಉದ್ಯೋಗ ಕ್ಷೇತ್ರದ ಒತ್ತಡ ಕ್ರಮವಾಗಿ ನಿವಾರಣೆ. ಹೊಸ ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಮಕ್ಕಳ ವಿದ್ಯಾಭ್ಯಾಸದತ್ತ ಗಮನ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಹಬ್ಬದೊಡನೆ ಸೇವಾ ಕಾರ್ಯಗಳು.. ಸಹೋದ್ಯೋಗಿಗಳ ಆಗಮನ ಮನೆಯಲ್ಲಿ ದೇವತಾ ಕಾರ್ಯ. ವಿವಾಹಾಸಕ್ತರಿಗೆ ಯೋಗ್ಯ ಸಂಬಂಧ ಒದಗುವ ನಿರೀಕ್ಷೆ. ಗೃಹಿಣಿಯರ ಸ್ವಾವಲಂಬನೆ ಯೋಜನೆ ಪ್ರಗತಿ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಸ್ಥಗಿತಗೊಂಡ ಕಾರ್ಯಗಳ ಮುಂದುವರಿಕೆ.. ಎಲ್ಲೆಡೆ ಹಬ್ಬದ ಸಂಭ್ರಮ. ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಹಬ್ಬದ ಆನಂದ. ಸೇವಾರೂಪದ ವೃತ್ತಿಯಲ್ಲಿ ಮುನ್ನಡೆ. ಅನುಭವಿಗಳ ಸೇರ್ಪಡೆಯಿಂದ ಕಾರ್ಯಗಳಲ್ಲಿ ಜಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.