ದಿನ ಭವಿಷ್ಯ: ಇಂದು ಯಾರಿಗೆ ಶುಭ?

Daily Horoscope: ಇಂದು (ಮಂಗಳವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Oct 13, 2026 - 09:37
ದಿನ ಭವಿಷ್ಯ: ಇಂದು ಯಾರಿಗೆ ಶುಭ?

ಮೇಷ: 

ದೇಹ, ಮನಸ್ಸು ಎರಡಕ್ಕೂ ಶ್ರಮ ತರುವ ಚಟುವಟಿಕೆಗಳು.. ಬಂಧುಗಳಿಂದ ಅಪರೂಪದ ಭೇಟಿ. ಗೆಳೆಯನ ದೇವೀಪೂಜೆಯಲ್ಲಿ ಭಾಗಿ. ಕೃಷಿಭೂಮಿಯಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಕೆಲವರಿಗೆ ಅತಿಥಿ ಸತ್ಕಾರ ಯೋಗ. ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.

ವೃಷಭ:

ನಿಯೋಜಿತ ಕಾರ್ಯಗಳಿಗೆ ಪೂರ್ವಸಿದ್ಧತೆ.. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ನೆಮ್ಮದಿ. ಕುಟುಂಬಸಹಿತ ಊರಿನ ದೇವಾಲಯಕ್ಕೆ ಭೇಟಿ. ಗೃಹೋತ್ಪನ್ನ ಖಾದ್ಯ ಪದಾರ್ಥಗಳಿಗೆ ಅಧಿಕ ಬೇಡಿಕೆ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಮಿಥುನ:

ಸುಲಭವಾದ ಕೆಲಸಕಾರ್ಯಗಳು.. ಉದ್ಯಮಿಗಳಿಗೆ ಸಮಾಧಾನದ ಸಮಾಚಾರ. ವಸ್ತ್ರ, ಸಿದ್ಧ ಉಡುಪು , ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಶ್ರಮಜೀವಿಗಳ ಪಾಲಿಗೆ ಶುಭದಿನ. ಸಂಗೀತ ಶ್ರವಣ, ಭಜನೆ, ಸತ್ಸಂಗಗಳಲ್ಲಿ ಕಾಲಯಾಪನೆ. ಗಣೇಶ ಅಷ್ಟಕ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಕರ್ಕಾಟಕ:

ವ್ಯವಹಾರದ ಅಭಿವೃದ್ಧಿಯ ಕುರಿತು ಸವಿವರ ವಿಮರ್ಶೆ.. ಸಹೋದ್ಯೋಗಿಗಳಿಂದ ಸೌಹಾರ್ದ ಭೇಟಿ. ಗೃಹೋತ್ಪನ್ನಗಳಿಗೆ ವ್ಯಾಪಕ ಬೇಡಿಕೆ. ಮನೆಯಲ್ಲಿ ದೇವೀಪೂಜೆಯ ಸಂಭ್ರಮ. ಗುರುಸಮಾನ ವ್ಯಕ್ತಿಯ ಹಠಾತ್ ಆಗಮನ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಸಿಂಹ: 

ಸಮಾಜದ ಪ್ರಮುಖರೊಂದಿಗೆ ಸಮಾಲೋಚನೆ.. ದೂರದ ಊರಿನಿಂದ ಬಂಧುಗಳ ಆಗಮನ. ಪೂರ್ಣಗೊಳ್ಳದ ಕಾಮಗಾರಿಗಳ ಸಮಸ್ಯೆ. ಉದ್ಯೋಗಾಸಕ್ತರಿಗೆ ನೌಕರಿ ಹುಡುಕಲು ಸಹಾಯ. ಅವಿವಾಹಿತರಿಗೆ ಸರಿಯಾದ ಜೋಡಿ ಲಭ್ಯ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಇಂದ್ರಾಕ್ಷಿ ಸ್ತೋತ್ರ ಓದಿ.

ಕನ್ಯಾ:

ಹೆಚ್ಚು ಕೆಲಸಗಳು ಒಂದಷ್ಟು ಆನಂದ.. ಸ್ಥಳೀಯ ಅಭಿವೃದ್ಧಿ ಯೋಜನೆಗಳ ಕುರಿತು ಸಮಾಲೋಚನೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸ ಸಂಭವ. ಕೆಲವರಿಗೆ ಅನ್ನದಾನ  ಮಾಡುವ ಅವಕಾಶ. ಸಂಗೀತ ಶ್ರವಣ, ಸತ್ಸಂಗಗಳಿಗೆ ಸಮಯ ಹೊಂದಾಣಿಕೆ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ತುಲಾ:

ಉದ್ಯೋಗ, ವ್ಯವಹಾರಗಳಲ್ಲಿ ಆನಂದಾನುಭವ.. ಹಿರಿಯರ ಆರೋಗ್ಯ ಸುಧಾರಣೆ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ಭೇಟಿ. ಹತ್ತಿರದ ದೇವಮಂದಿರಕ್ಕೆ ಭೇಟಿ. ಸಂಸಾರದಲ್ಲಿ, ಅನುರಾಗ, ಆರೋಗ್ಯ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.

ವೃಶ್ಚಿಕ:

ಅನಿರೀಕ್ಷಿತ ಮೂಲಗಳಿಂದ ಧನಪ್ರಾಪ್ತಿ.. ಕಿರಿಯರಿಗೆ ಕೃಷಿಕ್ಷೇತ್ರದಲ್ಲಿ ಹೊಸ ಬದುಕಿನ ಆಶೆ. ಸಮಾಜಸೇವಾ ಕಾರ್ಯಗಳಲ್ಲಿ ಪಾಲುಗೊಳ್ಳಲು ಅವಕಾಶ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಮನೆಮಂದಿ ಒಂದಾಗಿ ಸ್ತೋತ್ರಪಠನ. ಗಣೇಶ ಅಷ್ಟಕ, ರಾಮ ಭುಜಂಗಪ್ರಯಾತ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಧನು:

ಅಭಿವೃದ್ಧಿ ಪರ್ವ ಶುಭಾರಂಭ.. ಸಹೋದ್ಯೋಗಿ ಮಿತ್ರರೊಂದಿಗೆ ಸಮಾಲೋಚನೆ. ಪರಿಸರ ಸ್ವಚ್ಛತೆಯ ಕಾರ್ಯಗಳಲ್ಲಿ ಪಾಲುಗೊಳ್ಳುವಿಕೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಕೃಷಿ ಸಂಬಂಧಿ ಉದ್ಯಮ ಪ್ರಗತಿ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ ಗೌರೀದಶಕ ಓದಿ.

ಮಕರ:

ಸಾಮೂಹಿಕ ದೇವತಾರ್ಚನೆಯಲ್ಲಿ ಪಾಲುಗೊಳ್ಳುವ ಸಂದರ್ಭ.. ಗುರುಸಮಾನ ವ್ಯಕ್ತಿಯಿಂದ ಮನೆಗೆ ಭೇಟಿ. ಧಾರ್ಮಿಕ ಗ್ರಂಥ ವಾಚನ, ಆಪ್ತ ಸಲಹೆಗೆ ಸಮಯ. ತಂದೆಯ ಕಡೆಯ ಬಂಧುಗಳ ಮನೆಯಲ್ಲಿ ದೇವಿ ಉಪಾಸನೆ. ಎಲ್ಲರಿಗೂ ಉತ್ತಮ ಆರೋಗ್ಯ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ:

ವೈವಿಧ್ಯಮಯ ಕಾರ್ಯಗಳಿಂದ ಮನೋಲ್ಲಾಸ.. ಹೊಸ ಕಾರ್ಯಗಳನ್ನು  ನಿರ್ವಹಿಸಲು ಆಹ್ವಾನ. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದನ. ಮನೆಯಲ್ಲಿ ಎಲ್ಲರಿಗೂ ಆರೋಗ್ಯ ಉತ್ತಮ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

ಮೀನ:

ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವ ಕ್ರಮ ಆರಂಭ.. ವೃತ್ತಿರಂಗದ ಮಿತ್ರರೊಡನೆ ಸಮಾಲೋಚನೆ. ಸರ್ಕಾರಿ ಇಲಾಖೆಗಳಿಂದ ಉತ್ತಮ ಸ್ಪಂದನ. ಆಸ್ಪತ್ರೆ, ಅನಾಥಾಲಯಗಳಿಗೆ ಭೇಟಿಯಿತ್ತು ಹಣ್ಣು, ಸಿಹಿತಿಂಡಿ ವಿತರಣೆ. ದಾಂಪತ್ಯ ಜೀವನ ಸುಖಮಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.