ಆ್ಯಪ್‌ಗಳಲ್ಲಿನ ಪ್ಯಾಕ್ ಮಾಡಿದ ಆಹಾರದಲ್ಲಿ ಅರ್ಧಕ್ಕಿಂತ ಹೆಚ್ಚು ಜಂಕ್ ಫುಡ್: ಸಮೀಕ್ಷೆ

Half Of Packaged Foods Sold On Q-Commerce Are Junk Food Survey: ಆ್ಯಪ್‌ಗಳಲ್ಲಿನ ಪ್ಯಾಕ್ ಮಾಡಿದ ಆಹಾರದಲ್ಲಿ ಅರ್ಧಕ್ಕಿಂತ ಹೆಚ್ಚು ಜಂಕ್ ಫುಡ್ ಎಂದು ಸಮೀಕ್ಷೆ ಹೇಳಿದೆ.

Nov 27, 2026 - 17:38
Nov 27, 2026 - 17:39
ಆ್ಯಪ್‌ಗಳಲ್ಲಿನ ಪ್ಯಾಕ್ ಮಾಡಿದ ಆಹಾರದಲ್ಲಿ ಅರ್ಧಕ್ಕಿಂತ ಹೆಚ್ಚು ಜಂಕ್ ಫುಡ್: ಸಮೀಕ್ಷೆ
ಚಿತ್ರಕೃಪೆ: https://www.indiatoday.in/

ನವದೆಹಲಿ: ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಮತ್ತು ಆನ್‌ಲೈನ್ ದಿನಸಿ ವೇದಿಕೆಗಳಲ್ಲಿ ಮಾರಾಟವಾಗುವ ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅನಾರೋಗ್ಯಕರವಾಗಿವೆ ಎಂದು ಲೋಕಲ್ ಸರ್ಕಲ್ಸ್ ಸಂಶೋಧನೆ ತಿಳಿಸಿದೆ. 

ನವೆಂಬರ್ 25ರ ಮಾಹಿತಿ ಆಧರಿಸಿದ ಸಮೀಕ್ಷೆಯ ಪ್ರಕಾರ, ಬ್ಲಿಂಕಿಟ್‌ನಲ್ಲಿ ಶೇ 58, ಜಿಯೋಮಾರ್ಟ್‌ನಲ್ಲಿ ಶೇ 55, ಜೆಪ್ಟೊದಲ್ಲಿ ಶೇ 54 ರಷ್ಟು ಉತ್ಪನ್ನಗಳು ಅಧಿಕ ಕೊಬ್ಬು, ಸಕ್ಕರೆ ಮತ್ತು ಉಪ್ಪು ಹೊಂದಿವೆ. 

ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಹಾಗೂ ಬಿಗ್‌ಬಾಸ್ಕೆಟ್‌ನಲ್ಲಿ ಈ ಪ್ರಮಾಣ ಶೇ 52ರಷ್ಟಿದೆ. ಫ್ಲಿಪ್‌ಕಾರ್ಟ್ ಮಿನಿಟ್ಸ್‌ನಲ್ಲಿ ಶೇ 48 ಹಾಗೂ ಅಮೆಜಾನ್ ನೌನಲ್ಲಿ ಶೇ 47ರಷ್ಟಿದೆ. ಇಂತಹ ಆಹಾರಗಳಿಗೆ ಆನ್‌ಲೈನ್‌ನಲ್ಲೂ ಕೆಂಪು ಎಚ್ಚರಿಕೆ ಲೇಬಲ್ ಕಡ್ಡಾಯಗೊಳಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.