ಮಂಗಳೂರು: ಬೃಹತ್ ಉದ್ಯೋಗ ಮೇಳ, ನೋಂದಣೆ ಹೇಗೆ?

Mangaluru: ನ.30 ರಂದು ಕರಾವಳಿ ಪ್ರದೇಶದ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ನೋಂದಣಿ ಹೇಗೆ ಮಾಡಬೇಕೆಂಬುದನ್ನು ಇಲ್ಲಿ ವಿವರಿಸಲಾಗಿದೆ.

Nov 26, 2026 - 20:49
Nov 26, 2026 - 20:49
ಮಂಗಳೂರು: ಬೃಹತ್ ಉದ್ಯೋಗ ಮೇಳ, ನೋಂದಣೆ ಹೇಗೆ?

ಮಂಗಳೂರು: ಕರಾವಳಿ ಪ್ರದೇಶದ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ ನ.30 ರಂದು ಬೆಳಗ್ಗೆ 9 ರಿಂದ 5 ಗಂಟೆಯವರೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.
 
ಉದ್ಯೋಗಾಕಾಂಕ್ಷಿಗಳು ನೋಂದಣಿಯಾಗಲು ವಿವಿಧ ಹಂತಗಳು: 
 
* ವೆಬ್‍ಸೈಟ್ https://yuvaudyogasethu.karnataka.gov.in/services/eventsಗೆ ಭೇಟಿ ನೀಡಿ. 
* ಅಭ್ಯರ್ಥಿ ಆಯ್ಕೆ ಕ್ಲಿಕ್ ಮಾಡಿ ನೋಂದಣಿ ಮಾಡಬೇಕು. 
* ಸಂಪರ್ಕ ಸಂಖ್ಯೆ ನೀಡಿ, ವಾಟ್ಸ್ಆಪ್ ಮೂಲಕ ಬರುವ ಒಟಿಪಿ ನಮೂದಿಸಬೇಕು. 
* ಅಭ್ಯರ್ಥಿಯ ಪ್ರೊಫೈಲ್ ವಿವರಗಳನ್ನು ಭರ್ತಿ ಮಾಡಿ, ಪೂರ್ತಿಗೊಳಿಸಬೇಕು.
 
ಉದ್ಯೋಗದಾತರಿಗೆ ನೋಂದಣಿಯ ಹಂತಗಳು:
 
* ವೆಬ್‍ಸೈಟ್ https://yuvaudyogasethu.karnataka.gov.in/services/eventsಗೆ ಭೇಟಿ ನೀಡಿ. 
* ಉದ್ಯೋಗದಾತ ಆಯ್ಕೆ ಕ್ಲಿಕ್ ಮಾಡಿ, ನೋಂದಣಿ ಮಾಡಿ. 
* ಸಂಪರ್ಕ ಸಂಖ್ಯೆ ನೀಡಿ, ವಾಟ್ಸ್ಆಪ್ ಮೂಲಕ ಬರುವ ಒಟಿಪಿ ನಮೂದಿಸಬೇಕು. 
* ಎಲ್ಲ ವಿವರಗಳನ್ನು ಭರ್ತಿ ಮಾಡಿ ಮತ್ತು ಉದ್ಯೋಗ ಪ್ರಕಟಣೆಯನ್ನು ಪೂರ್ತಿಗೊಳಿಸಬೇಕು.
 
ಈ ಉದ್ಯೋಗ ಮೇಳದಲ್ಲಿ ಸುಮಾರು 10,000 ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಮತ್ತು 200ಕ್ಕೂ ಹೆಚ್ಚಿನ ಉದ್ಯೋಗದಾತರು ಆಗಮಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 9606494308 ಸಂಪರ್ಕಿಸಬಹುದು  ಎಂದು  ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.