ಇಂದ್ರಪ್ರಸ್ಥ ವಿದ್ಯಾಲಯದ ಗವಿನ್ ರೇಶಿಮೆಗೆ ಪ್ರಮ ಅವಾರ್ಡ್
Prama Award-2026: ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ಗವಿನ್ ರೇಶಿಮೆಗೆ 'ಪ್ರಮ ಅವಾರ್ಡ್' ಲಭಿಸಿದೆ.
ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ ಗವಿನ್ ರೇಶಿಮೆ ಅವರು, ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಮಾಡಿದ ಸಾಧನೆಗಾಗಿ ಮಣಿಪಾಲದ ಡಾ.ಪಲ್ಲತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನೀಡಲಾಗುವ 'ಪ್ರಮ ಅವಾರ್ಡ್-2026'ಕ್ಕೆ ಭಾಜನರಾಗಿದ್ದಾರೆ.
ಈಚೆಗೆ ಮಣಿಪಾಲದ ಡಾಟ್‌ನೆಟ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.
ವಿದ್ಯಾರ್ಥಿಯ ಈ ಸಾಧನೆಗೆ ಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿ, ಇನ್ನಷ್ಟು ಪ್ರಶಸ್ತಿಗಳು ಲಭಿಸುವಂತೆ ಶುಭ ಹಾರೈಸಿದ್ದಾರೆ.