ರಾಜ್ಯದ 11 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಕ್ಯಾಬಿನೆಟ್ ಸ್ಥಾನಮಾನ
Karnataka: ರಾಜ್ಯ ಸರ್ಕಾರವು 11 ಶಾಸಕರನ್ನು ವಿವಿಧ ನಿಗಮ, ಮಂಡಳಿ ಮತ್ತು ಆಯೋಗಗಳ ಅಧ್ಯಕ್ಷರಾಗಿ ನೇಮಿಸಿ, ಮಂಗಳವಾರ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರವು 11 ಶಾಸಕರನ್ನು ವಿವಿಧ ನಿಗಮ, ಮಂಡಳಿ ಮತ್ತು ಆಯೋಗಗಳ ಅಧ್ಯಕ್ಷರಾಗಿ ನೇಮಿಸಿ, ಮಂಗಳವಾರ ಆದೇಶ ಹೊರಡಿಸಿದೆ. ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಯಾರಿಗೆ ಯಾವ ನಿಗಮ ಮಂಡಳಿ:
* ಕೆ.ಷಡಕ್ಷರಿ: ಅಧ್ಯಕ್ಷರು, ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ.
* ಪಿ.ಎಂ.ಅಶೋಕ್: ಅಧ್ಯಕ್ಷರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ.
* ಎ.ಆರ್.ಕೃಷ್ಣಮೂರ್ತಿ: ಅಧ್ಯಕ್ಷರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
* ಹಂಪನಗೌಡ ಬಾದರ್ಲಿ: ಅಧ್ಯಕ್ಷರು, ಕರ್ನಾಟಕ ರಾಜ್ಯ ಉಗ್ರಾಣ ನಿಗಮ.
* ಡಿ.ಜಿ.ಶಾಂತನ ಗೌಡ: ಅಧ್ಯಕ್ಷರು, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್
* ಜಿ.ಹೆಚ್. ಶ್ರೀನಿವಾಸ್: ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
* ಮಹಾಂತೇಶ ಕೌಜಲಗಿ: ಅಧ್ಯಕ್ಷರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ
* ಎಸ್.ಎನ್. ಸುಬ್ಬಾರೆಡ್ಡಿ: ಅಧ್ಯಕ್ಷರು, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್.
* ಎನ್.ಎಚ್. ಕೋನರೆಡ್ಡಿ: ಅಧ್ಯಕ್ಷರು, ಕರ್ನಾಟಕ ಕೃಷಿ ಬೆಲೆ ಆಯೋಗ.
* ಬಸನಗೌಡ ದದ್ದಲ್: ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ.
* ಅಲ್ಲಮಪ್ರಭು ಪಾಟೀಲ್: ಅಧ್ಯಕ್ಷರು, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ.