ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?

Daily Horoscope: ಇಂದು (ಭಾನುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Nov 22, 2026 - 09:14
Nov 22, 2026 - 09:14
ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?

ಮೇಷ:

ವಿರಾಮದ ದಿನ ಒಟ್ಟಿನಲ್ಲಿ ಆನಂದ.. ಸಮಾಜದಲ್ಲಿ   ಬಾಂಧವರಿಂದ ಗೌರವ. ಕೆಲವರಿಗೆ ಭಾರೀ ವ್ಯಾಪಾರ. ದೂರ ದೇಶದಲ್ಲಿರುವ ಮಕ್ಕಳಿಂದ ಸಂತೋಷದ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.

ವೃಷಭ:

ವ್ಯವಹಾರಸ್ಥರಿಗೆ  ಅನುಕೂಲ.. ಖಾದಿ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ಶ್ರಮಿಕ ವರ್ಗಕ್ಕೆ ಅನುಕೂಲವಾದ ವಾತಾವರಣ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿ. ಕೇಟರಿಂಗ್ ವ್ಯವಹಾರಸ್ಥರಿಗೆ ಮಧ್ಯಮ ಲಾಭ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.

ಮಿಥುನ:

ಉದ್ಯೋಗಸ್ಥರ ಪಾಲಿಗೆ ನೆಮ್ಮದಿಯ ದಿನ.. ಮಾತಿನಲ್ಲಿ ತಪ್ಪದಂತೆ ಎಚ್ಚರಿಕೆ ಇರಲಿ.. ಹಿತಶತ್ರುಗಳ ವಿಷಯದಲ್ಲಿ ಎಚ್ಚರ ಇರಲಿ.  ಸ್ಪಷ್ಟ ವಿಚಾರ ಮಂಡನೆಯಿಂದ ಗೌರವ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

ಕರ್ಕಾಟಕ:

ಏಕನಿಷ್ಠೆಯ ದುಡಿಮೆಯಿಂದ  ಗುರಿ ಸಾಧನೆ.. ಉದ್ಯೋಗಸ್ಥರ ಆರ್ಥಿಕ ತೊಂದರೆ  ಪರಿಹಾರ. ಉದ್ಯಮಗಳಿಗೆ ಅನಾಯಾಸವಾಗಿ ನೆರವು. ಭ್ರಷ್ಟ ರಾಜಕಾರಣಿಗಳ ಕುತಂತ್ರ ಬಯಲು. ಮಹಿಳೆಯರ ಸ್ವೋದ್ಯೋಗ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಹನುಮತ್ಕವಚ ಓದಿ.

ಸಿಂಹ:

ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ.. ಹಲವು  ವ್ಯವಹಾರಗಳತ್ತ ಲಕ್ಷ್ಯ ಹರಿಸಲು ಒತ್ತಡ. ಉದ್ಯೋಗಸ್ಥರಿಗೆ ನಾಳೆಯ ಕೆಲಸಗಳ ಚಿಂತೆ. ಉದ್ಯಮದ ಸ್ವರೂಪ ಬದಲಾವಣೆಯ  ಪ್ರಕ್ರಿಯೆಗೆ ಚಾಲನೆ. ಸಿವಿಲ್ ಎಂಜಿನಿಯರರಿಗೆ ಅನುಕೂಲದ ದಿನ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಕನ್ಯಾ:

ಮನೆಯವರೊಂದಿಗೆ ಸಣ್ಣ ಪ್ರವಾಸ.. ಹೊಸ ಕಾರ್ಯಕ್ಷೇತ್ರದಲ್ಲಿ ಎಲ್ಲರ ಸಹಕಾರ. ಪ್ರತಿಭೆ  ಹಾಗೂ ಕಾರ್ಯನಿಷ್ಠೆಗೆ ಮಾಲಿಕರಿಂದ ಶ್ಲಾಘನೆ. ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆಯ  ಭರವಸೆ. ಕುಟುಂಬದ ಸದಸ್ಯರಿಗೆ ಆನಂದೋತ್ಸಾಹ. ಗಣೇಶ ತ್ರಿಶತಿ ಸ್ತೋತ್ರ, ರಾಮ ಭುಜಂಗಪ್ರಯಾತ ಸ್ತೋತ್ರ , ಲಕ್ಷ್ಮೀಸ್ತೋತ್ರ ಓದಿ.

ತುಲಾ:

ಉದ್ಯಮಿಗಳ ಪಾಲಿಗೆ ಕಡಿಮೆಯಾದ  ಪೈಪೋಟಿ.. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಸಕಾಲಿಕ ಮಾರ್ಗದರ್ಶನ. ಲೇವಾದೇವಿ ವ್ಯವಹಾರ ಬೇಡ. ಸಂಸಾರದಲ್ಲಿ ಹುಳಿ ಹಿಂಡುವವರಿಗೆ ಯೋಗ್ಯ ಪಾಠ. ಹಿರಿಯರ ಆಸ್ತಿ ಜೋಪಾನಕ್ಕೆ ಕ್ರಮ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ವೃಶ್ಚಿಕ: 

ಅನ್ಯಾನ್ಯ ವೃತ್ತಿಗಳವರಿಗೆ ಹಿತಾನುಭವ.. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿ ಇಲ್ಲ. ಸರಕಾರಿ ಅಧಿಕಾರಿಗಳ ಆತಂಕ ಕೊಂಚ ದೂರ. ಉನ್ನತ ರಾಜಕಾರಣಿಗಳಿಗೆ ಅಧಿಕಾರ ದಾಹ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಹನುಮಾನ್ ಚಾಲೀಸಾ, ಋಣಮೋಚನ ಮಂಗಲ ಸ್ತೋತಚರ ಓದಿ.

ಧನು:

ಉದ್ಯಮಶೀಲರ ಪ್ರತಿಭೆಗೆ ಪರೀಕ್ಷೆಯ ಅನುಭವ.. ಉದ್ಯೋಗ  ಘಟಕದ ಕಾರ್ಯ ಸುಧಾರಣೆಯ ತಯಾರಿ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಗಣಪತಿ ಅಥರ್ವಶೀರ್ಷ, ದತ್ತಪಂಜರ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

ಮಕರ:

ಸಂದಿಗ್ಧ ಪರಿಸ್ಥಿತಿಗಳಿಂದ ಸದ್ಯಕ್ಕೆ ಮುಕ್ತಿ.. ಉದ್ಯೋಗಸ್ಥರಿಗೆ ವಿರಾಮದ ಆನಂದ. ಬಂಧುವರ್ಗದಲ್ಲಿ ವೈಷಮ್ಯ ನಿವಾರಣೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿಗೆ ಧನವ್ಯಯ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಗಣೇಶ ಕವಚ, ಶಿವಪಂಚಾಕ್ಷರ. ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ.

ಉದ್ಯೋಗಸ್ಥರಿಗೆತಕ್ಕಮಟ್ಟಿಗೆ ನೆಮ್ಮದಿ.. ಸರಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿಗಳು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಗೆ ಯೋಜನೆ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತೃಪ್ತಿಯ ಅನುಭವ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

ಮೀನ:

ಸಮಾಜ ಬಾಂಧವರಿಂದ  ವಿಶೇಷ ಸಹಾಯ.. ಸೇವಾ ಕಾರ್ಯಗಳು ಅಬಾಧಿತವಾಗಿ ಮುಂದುವರಿಕೆ. ಸ್ವಂತ ಉದ್ಯಮ ಹೊಸ ರೂಪದಲ್ಲಿ  ಆರಂಭ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.