ದಿನ ಭವಿಷ್ಯ: ಇವತ್ತು ಯಾರಿಗೆ ಶುಭ ಫಲ?

Daily Horoscope: ಇಂದು (ಶುಕ್ರವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Nov 20, 2026 - 09:45
Nov 20, 2026 - 09:45
ದಿನ ಭವಿಷ್ಯ: ಇವತ್ತು ಯಾರಿಗೆ ಶುಭ ಫಲ?

ಮೇಷ:

ಮಾತಿನಲ್ಲಿ ಸ್ಪಷ್ಟತೆ ಇರಲಿ.. ಎಲ್ಲ ಕಾರ್ಯಗಳಲ್ಲೂ ಜಯಭೇರಿ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಅಶಕ್ತರಿಗೆ ನೆರವಾಗುವ ಅವಕಾಶ. ಎಲ್ಲ ಬಗೆಯ ನಿರಾಶೆಗಳು ದೂರ. ಗಣೇಶ ಕವಚ, ವೇದಸಾರ ಶಿವಸ್ತೋತ್ರ, ಶನಿಮಹಾತ್ಮೆ ಓದಿ.

ವೃಷಭ:

ಹೊರಗೆ ಆಹಾರ, ಪಾನೀಯ ಸೇವನೆಯಲ್ಲಿ ಎಚ್ಚರ.. ಕನ್ಯಾನ್ವೇಷಿಗಳಿಗೆ ಶುಭ ವಾರ್ತೆ. ಅಲ್ಪಾವಧಿ ಹೂಡಿಕೆಗಳು ಬೇಡ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಲಾಭ. ಸ್ಟೇಶನರಿ, ಪುಸ್ತಕ ವ್ಯಾಪಾರಿಗಳಿಗೆ ಅನುಕೂಲ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.

ಮಿಥುನ:

ಮೋಸಗಾರರನ್ನು ಗುರುತಿಸಿ ದೂರವಿಡಿ.. ಅಧ್ಯಾತ್ಮ ಜೀವಿಗಳಿಗೆ ದೈವಿಕ ಅನುಭವ. ಗೃಹಿಣಿಯರಿಗೆ ತಕ್ಕಮಟ್ಟಿಗೆ ಕ್ಷೇಮದ ದಿನ. ಸಜ್ಜನರ ಸಹವಾಸದಿಂದ ಆನಂದ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಕರ್ಕಾಟಕ:

ಖೋಟಾ ವ್ಯವಹಾರಸ್ಥರನ್ನು ದೂರವಿಡಿ.. ಇಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಅನುಕೂಲ. ದೂರದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಹೋಟೆಲ್ ಉದ್ಯಮಿಗಳಿಗೆ ಗುಣಮಟ್ಟದ ಸವಾಲು. ತೋಟಗಾರಿಕೆ, ಜೇನು ವ್ಯವಸಾಯ ಹವ್ಯಾಸಕ್ಕೆ ಉತ್ತೇಜನ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಸಿಂಹ:

ಸದುದ್ದೇಶದ ಕಾರ್ಯಗಳಿಗೆ ಅಂತಿಮ ಜಯ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ಆಸ್ತಿ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಸರಕಾರಿ ನೌಕರರಿಗೆ ರಾಜಕಾರಣಿಗಳ ಕಾಟ. ರಾತ್ರಿಯ ಹೊತ್ತಿನಲ್ಲಿ ದೂರ ಪ್ರಯಾಣ ಬೇಡ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕನ್ಯಾ:

ಕನಿಕರಕ್ಕೆ ಗುರಿಯಾಗುವ ಸಂದರ್ಭದಿಂದ ಪಾರು.. ಹೊಲಿಗೆ, ಕಸೂತಿ ಬಲ್ಲವರಿಗೆ ಅದೃಷ್ಟದ ದಿನ. ಬಂಧುಗಳ ಮನೆಯ ಶುಭಕಾರ್ಯಕ್ಕೆ ಸಹಾಯ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ತೋಟಗಾರಿಕೆ ಬೆಳೆಗಳಿಂದ ಲಾಭ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ ಓದಿ.

ತುಲಾ:

ಅನ್ಯಾಯವನ್ನು ಸಹಿಸುವುದಕ್ಕೆ ಮಿತಿ ಇರಬೇಕು.. ಕೆಲವು ವರ್ಗದ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ. ಲಲಿತಕಲೆಗಳಲ್ಲಿ ಪರಿಶ್ರಮ ಉಳ್ಳವರಿಗೆ ಸಂತೃಪ್ತಿ. ಸಾಮೂಹಿಕ ಪ್ರಾರ್ಥನೆಯಿಂದ ಸಮಾಜಕ್ಕೆ ಒಳಿತು. ಇರಲು ಸಾಮಗ್ರಿ ವ್ಯಾಪಾರದಲ್ಲಿ ಲಾಭ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ವೃಶ್ಚಿಕ:

ಉದ್ಯೋಗ, ಉದ್ಯಮಗಳಲ್ಲಿ ಸಾಮಾನ್ಯ ಮುನ್ನಡೆ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ದೂರದಲ್ಲಿರುವ ಬಂಧುಗಳ ಆಗಮನ. ಕೈಮಗ್ಗದ ಕೆಲಸ ಬಲ್ಲವರಿಗೆ ಅವಕಾಶ. ಗಣೇಶ ದ್ವಾದಶನಾಮ ಸ್ತೋತ್ರ, ಶಿವನಾಮಾವಲ್ಯಷ್ಟಕ, ರಾಮರಕ್ಷಾ ಸ್ತೋತ್ರ ಓದಿ.

ಧನು:

ನೆಲ, ಜಲ ಸಂರಕ್ಷಣೆಯ ಕಾರ್ಯಗಳಲ್ಲಿ ಭಾಗಿ.. ಸಹೋದ್ಯೋಗಿ ಮಿತ್ರರಿಗೆ  ಮಾರ್ಗದರ್ಶನ. ಸಣ್ಣ ಹೂಡಿಕೆಗಳಲ್ಲಿ ಸಾಮಾನ್ಯ ಲಾಭ.
ಶಿಕ್ಷಕ ವರ್ಗದ ಹಿತರಕ್ಷಣೆಗೆ ಪ್ರಯತ್ನ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ.

ಮಕರ:

ಹಠಾತ್ ಅನಾರೋಗ್ಯದಿಂದ ಚೇತರಿಕೆ.. ನಿತ್ಯೋಪಯೋಗಿ ಸಾಮಗ್ರಿ ವಿತರಕರಿಗೆ ಸಡಿಲಾದ ಪೂರೈಕೆ ಒತ್ತಡ. ಹಿರಿಯರ ಆರೋಗ್ಯ ಸುಧಾರಣೆ. ನಷ್ಟವಿಲ್ಲದ ಪರೋಪಕಾರ ಮಾಡುವ ಅವಕಾಶ. ದುರ್ಬೋಧನೆಗಳನ್ನು ನಿರ್ಲಕ್ಷಿಸಿರಿ. ಗಣೇಶ ಸ್ತೋತ್ರ, ಶಿವ ಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ:

ತಡೆಯಿಲ್ಲದ ಸಂಪದಭಿವೃದ್ಧಿ.. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮಗ್ನತೆ. ಯಂತ್ರೋಪಕರಣ ವ್ಯಾಪಾರಿಗಳ ಪಾಲಿಗೆ ಶುಭದಿನ. ಯುವಜನರ ಪಾಲುಗೊಳ್ಳುವಿಕೆಯಲ್ಲಿ ಶ್ರಮದಾನ. ಇಷ್ಟದೇವರ ದರ್ಶನದಿಂದ ಶುಭ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.

ಮೀನ:

ಉದ್ಯೋಗ, ವ್ಯವಹಾರಗಳಲ್ಲಿ ಅನುಕೂಲ.. ಬಂಧುವರ್ಗದ  ಮನೆಯ ಸಂಭ್ರಮದಲ್ಲಿ ಭಾಗಿ. ಹಿರಿಯರಿಗೆ ಪ್ರಾಚೀನ ಪದ್ಧತಿಯಿಂದ ಆರೋಗ್ಯ. ಬಂಗಾರದ ಕೆಲಸ ಬಲ್ಲವರಿಗೆ ಸದವಕಾಶ. ತಿಂಡಿ, ತಿನಿಸು ವ್ಯಾಪಾರಿಗಳಿಗೆ ಅನುಕೂಲದ ದಿನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.