ಥೈಲ್ಯಾಂಡ್ನಲ್ಲಿ ಪುತ್ತೂರಿನ ವೆಲ್ತ್ ವಿಷನ್ಗೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳ ಗರಿ!
Puttur: ಥೈಲ್ಯಾಂಡ್ನಲ್ಲಿ ಪುತ್ತೂರಿನ ವೆಲ್ತ್ ವಿಷನ್ಗೆ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದಿವೆ.
ಪುತ್ತೂರು: ಗ್ರಾಮೀಣ ಪ್ರದೇಶದಲ್ಲಿ ಒಂದೇ ಒಂದು ಡೆಸ್ಕ್ನೊಂದಿಗೆ ಆರಂಭಗೊಂಡ ಹಣಕಾಸು ಸೇವಾ ಉದ್ಯಮವೊಂದು ಇಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿರುವುದು ಗಮನಾರ್ಹ ಸಾಧನೆಯಾಗಿದೆ.
ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ವೆಲ್ತ್ ವಿಷನ್ ಸಂಸ್ಥೆಯು ಆನಂದ್ ರಾಥಿ ಇನ್ವೆಸ್ಟ್ಮೆಂಟ್ ಸರ್ವೀಸಸ್ನ 'Business Partner Awards FY 2025-26' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ವಲಯದ ಎರಡು ಪ್ರಮುಖ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ.
ದಕ್ಷಿಣ ಭಾರತದ 'South Leads with Excellence' ವಿಭಾಗದಡಿ Overall Segment ಹಾಗೂ F&O Segment ವಿಭಾಗಗಳಲ್ಲಿ ವೆಲ್ತ್ ವಿಷನ್ ಈ ಸಾಧನೆ ಮಾಡಿದೆ.
ಅಕ್ಟೋಬರ್ 23ರಿಂದ 27ರವರೆಗೆ ಥೈಲ್ಯಾಂಡ್ನ ಪ್ರಸಿದ್ಧ ಪ್ರವಾಸಿ ತಾಣ ಫುಕೆಟ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಕ್ಟೋಬರ್ 23ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ದಶಕಗಳಿಗೂ ಅಧಿಕ ವೃತ್ತಿಪರ ಅನುಭವ ಹೊಂದಿರುವ ಸಂಸ್ಥೆಯು ಗ್ರಾಹಕ ಸ್ನೇಹಿ ಸೇವೆ ಮತ್ತು ವಿಶ್ವಾಸಾರ್ಹ ಹಣಕಾಸು ಮಾರ್ಗದರ್ಶನದ ಮೂಲಕ ಭಾರತ ಹಾಗೂ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು ಸೇರಿದಂತೆ 3,000ಕ್ಕೂ ಅಧಿಕ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಮುಂದಿನ ತಲೆಮಾರಿನ ಸದಸ್ಯರಾದ ಅವಿನಾಶ್ ಮತ್ತು ಪ್ರಜ್ವಲ್ ಅವರು ಈಕ್ವಿಟಿ ಹಾಗೂ ಮ್ಯೂಚುವಲ್ ಫಂಡ್ ವಿಭಾಗಗಳಲ್ಲಿ, ರಾಧಿಕಾ ಮತ್ತು ಅಶ್ವಿಕಾ ಅವರು ಫ್ರಂಟ್ ಆಫೀಸ್ ಹಾಗೂ ಗ್ರಾಹಕ ಸೇವಾ ವಿಭಾಗಗಳಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸಮರ್ಪಿತ ತಂಡದ ಸಹಕಾರದೊಂದಿಗೆ ಸಂಸ್ಥೆ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.
ದೀರ್ಘಕಾಲೀನ ಹಣಕಾಸು ಯೋಜನೆ, ಹೂಡಿಕೆ ಸಲಹೆ, ನಿವೃತ್ತಿ ಯೋಜನೆ ಮತ್ತು ಸಂಪತ್ತು ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ವೆಲ್ತ್ ವಿಷನ್, ಗ್ರಾಹಕರ ಆರ್ಥಿಕ ಭದ್ರತೆ ಹಾಗೂ ಭವಿಷ್ಯದ ಆರ್ಥಿಕ ಗುರಿಗಳಿಗೆ ಆದ್ಯತೆ ನೀಡುತ್ತಿದೆ.
ಸಂಸ್ಥೆಯ ಸ್ಥಾಪಕರಾದ ಮುರಳೀಧರ ಕೆ. ಅವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಎಂ.ಕಾಂ ಪದವಿ ಪಡೆದಿದ್ದು, ಹೂಡಿಕೆ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹಾಗೂ Certified Retirement Advisor ಸೇರಿದಂತೆ ವಿವಿಧ ವೃತ್ತಿಪರ ಅರ್ಹತೆಗಳನ್ನು ಹೊಂದಿದ್ದಾರೆ.
ಮಹಾನಗರಗಳ ಹಣಕಾಸು ಸಂಸ್ಥೆಗಳೊಂದಿಗೆ ಸ್ಪರ್ಧಿಸುತ್ತಾ ಪುತ್ತೂರಿನಂತಹ ಸಣ್ಣ ಪಟ್ಟಣದಿಂದ ಬೆಳೆದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ವೆಲ್ತ್ ವಿಷನ್ ಸಾಧನೆ ಗ್ರಾಮೀಣ ಉದ್ಯಮಶೀಲತೆಗೆ ಮಾದರಿಯಾಗಿದೆ. ದೃಢಸಂಕಲ್ಪ, ವೃತ್ತಿಪರತೆ ಮತ್ತು ಗ್ರಾಹಕರ ವಿಶ್ವಾಸವಿದ್ದರೆ ಭೌಗೋಳಿಕ ಮಿತಿಗಳನ್ನು ಮೀರಿ ಸಾಧನೆ ಮಾಡಬಹುದು ಎಂಬುದಕ್ಕೆ ಈ ಸಂಸ್ಥೆ ಸಾಕ್ಷಿಯಾಗಿದೆ.