Karnataka FDA Job: 2,626 ಎಫ್‌ಡಿಎ ಹುದ್ದೆ.. ಡಿಗ್ರಿ ಪಾಸ್ ಆಗಿದ್ರೆ ಸಾಕು.. ಇಲ್ಲಿದೆ ಫುಲ್ ಡೀಟೇಲ್ಸ್

Karnataka FDA Job: ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. 2,626 ಎಫ್‌ಡಿಎ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.

Nov 4, 2026 - 10:00
Nov 4, 2026 - 10:04
Karnataka FDA Job:  2,626 ಎಫ್‌ಡಿಎ ಹುದ್ದೆ.. ಡಿಗ್ರಿ ಪಾಸ್ ಆಗಿದ್ರೆ ಸಾಕು.. ಇಲ್ಲಿದೆ ಫುಲ್ ಡೀಟೇಲ್ಸ್

ಬೆಂಗಳೂರು: ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ವಿವಿಧ ಇಲಾಖೆಯಲ್ಲಿ ಖಾಲಿಯಿರುವ 'ಗ್ರೂಪ್-ಸಿ' ಹುದ್ದೆಗಳನ್ನು ತುಂಬಾಲಾಗುತ್ತದೆ.

ಯಾವೆಲ್ಲ ಹುದ್ದೆಗಳಿವೆ: ಲೆಕ್ಕ ಸಹಾಯಕರು, ವಾರ್ಡನ್ (ಪುರುಷ)/ ವಾರ್ಡನ್ (ಮಹಿಳೆ), ನಿಲಯ ಮೇಲ್ವಿಚಾರಕರು (ಪುರುಷ)/ ನಿಲಯ ಮೇಲ್ವಿಚಾರಕರು (ಮಹಿಳೆ), ಪ್ರಥಮ ದರ್ಜೆ ಸಹಾಯಕ ಕಂ ಕಂಪ್ಯೂಟರ್ ಆಪರೇಟರ್, ನಿಲಯ ಪಾಲಕರು, ವಾಣಿಜ್ಯ ತೆರಿಗೆ ಪರಿವೀಕ್ಷಕರು, ಸಹಕಾರ ಸಂಘಗಳ ಲೆಕ್ಕಪರಿಶೋಧಕರು, ಪ್ರವಾಸೋದ್ಯಮ ಪ್ರಚಾರ ಅಧಿಕಾರಿ, ಸಹಾಯಕ/ ಪ್ರಥಮ ದರ್ಜೆ ಸಹಾಯಕರು/ ಉಪ ನೋಂದಣಾಧಿಕಾರಿ/ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1/ ಹಿರಿಯ ಪ್ರವಾಸಿ ಪ್ರವರ್ತಕರು.

ಒಟ್ಟು ಹುದ್ದೆ: 2,626 (ಉಳಿಕೆ ಮೂಲ ವೃಂದ - 2063 ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ - 563).

ಶಿಕ್ಷಣ: ಲೆಕ್ಕ ಸಹಾಯಕರು ಹುದ್ದೆಗೆ ಅಭ್ಯರ್ಥಿಗಳು ಬಿಕಾಂ/ ಬಿಬಿಎಂ ಅಥವಾ ಬಿಬಿಎ ಪದವಿ ಹೊಂದಿರಬೇಕು. ಯುಜಿಸಿಯಿಂದ ಮಾನ್ಯತೆ ಪಡೆದ ಯಾವುದೇ ತತ್ಸಮಾನ ವಿದ್ಯಾರ್ಹತೆಗಳನ್ನು ಹೊಂದಿರಬೇಕು.

ವಾರ್ಡನ್ (ಪುರುಷ & ಮಹಿಳೆ) ಮತ್ತು ನಿಲಯ ಮೇಲ್ವಿಚಾರಕರು (ಪುರುಷ & ಮಹಿಳೆ) ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಬಿ.ಇಡಿ ಪದವಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.

ಪ್ರಥಮ ದರ್ಜೆ ಸಹಾಯಕ ಕಂ. ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ ಪದವಿ ಮತ್ತು ಕರ್ನಾಟಕ ಸರ್ಕಾರದ ಅಥವಾ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಒಂದು ವರ್ಷದ ಕಂಪ್ಯೂಟರ್ ಕೋರ್ಸ್‌ನಲ್ಲಿ ಪ್ರಮಾಣ ಪತ್ರ ಪಡೆಯುವುದರೊಂದಿಗೆ, ಕಂಪ್ಯೂಟರ್ ಕಾರ್ಯದಲ್ಲಿ ಜ್ಞಾನವುಳ್ಳವರಾಗಿರಬೇಕು. 

ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗೆ ಅರ್ಥಶಾಸ್ತ್ರ ಅಥವಾ ಗಣಿತವನ್ನು ಒಂದು ವಿಷಯವಾಗಿ ಹೊಂದಿರುವ ಪದವಿಯನ್ನು ಹೊಂದಿರಬೇಕು ಅಥವಾ ವಾಣಿಜ್ಯಶಾಸ್ತ್ರದಲ್ಲಿ ಪದವಿಯನ್ನು ಹೊಂದಿರಬೇಕು. ಇಲ್ಲವೇ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಸಹಕಾರ ಸಂಘಗಳ ಲೆಕ್ಕಪರಿಶೋಧಕರು ಹುದ್ದೆಗೆ ಕಾನೂನು ರೀತ್ಯ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರ ಪದವಿ ಹೊಂದಿರಬೇಕು. ಅದರಲ್ಲಿ ಅಕೌಂಟೆನ್ಸಿ & ಆಡಿಟಿಂಗ್ ಅನ್ನು ಒಂದು ವಿಷಯವಾಗಿ ಓದಿರಬೇಕು.

ಪ್ರವಾಸೋದ್ಯಮ ಪ್ರಚಾರ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವವರೂ ಪ್ರವಾಸೋದ್ಯಮ, ಇತಿಹಾಸ,, ಪುರಾತತ್ವಶಾಸ್ತ್ರ ಅಥವಾ ಪತ್ರಿಕೋದ್ಯಮ ವಿಷಯಗಳಲ್ಲಿ ಪದವಿ ಹೊಂದಿರಬೇಕು. ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಹೋಟೆಲ್ ನಿರ್ವಹಣೆಯಲ್ಲಿ ಪಡೆದಿರಬೇಕು.

ಸಹಾಯಕ/ ಪ್ರಥಮ ದರ್ಜೆ ಸಹಾಯಕರು/ ಉಪ ನೊಂದಣಾಧಿಕಾರಿ/ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1/ ಹಿರಿಯ ಪ್ರವಾಸಿ ಪ್ರವರ್ತಕರು ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪೂರೈಸಿರಬೇಕು. 

ವಯಸ್ಸು: ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ನಿಯಮಾನುಸಾರ ಒಬಿಸಿಯವರಿಗೆ 3 ವರ್ಷ ಹಾಗೂ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ.

ವೇತನ: ಆಯ್ಕೆಯಾವರಿಗೆ ಮಾಸಿಕ ರೂ.44,245 ರಿಂದ 83,700 ವೇತನ ನೀಡಲಾಗುತ್ತದೆ. 

ಅರ್ಜಿ ಶುಲ್ಕ: ಸಾಮಾನ್ಯ, 2ಎ/ 2ಬಿ / 3ಎ / 3ಬಿ ಅಭ್ಯರ್ಥಿಗಳಿಗೆ ರೂ.750, ಪ್ರವರ್ಗ-1, ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕ, ತೃತೀಯ ಲಿಂಗ ಅಭ್ಯರ್ಥಿಗಳಿಗೆ ರೂ.500 ಮತ್ತು ವಿಶೇಷ ಚೇತನರಿಗೆ ರೂ.250 ಅರ್ಜಿ ಶುಲ್ಕವಿದೆ.

ಅರ್ಜಿ ಸಲ್ಲಿಸಲು ಕಡೆ ದಿನ: ನ.25ಕ್ಕೆ ಕೊನೆಯಾಗಲಿದೆ. ನ.26 ಅರ್ಜಿ ಶುಲ್ಕ ಪಾವತಿಗೆ ಕಡೆ ದಿನವಾಗಿದೆ.

ಹೆಚ್ಚಿನ ಮಾಹಿತಿ: https://cetonline.karnataka.gov.in/kea/indexnewನ್ನು ಸಂಪರ್ಕಿಸಬಹುದು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.