ಯುಜಿನೀಟ್-2026: ಸೆ.24 ರಿಂದ 3ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ

UG NEET-2026: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಸೆ.24 ರಿಂದ ಶುರುವಾಗಲಿದೆ ಎಂದು ಕೆಇಎ ತಿಳಿಸಿದೆ.

Sep 23, 2026 - 20:26
ಯುಜಿನೀಟ್-2026: ಸೆ.24 ರಿಂದ 3ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಮೂರನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಸೆ.24 ರಿಂದ ಶುರುವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ಮೂರನೇ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ತಾವು ಸೇರಲು ಇಚ್ಛಿಸುವ ಕೋರ್ಸ್ ಶುಲ್ಕಗಳ ಆಧಾರದ ಮೇಲೆ ಸೆ.28 ರೊಳಗೆ ಕಾಷನ್ ಡೆಪಾಸಿಟ್ ಕಟ್ಟುವುದು ಕಡ್ಡಾಯವಾಗಿದೆ.

ಕಾಷನ್ ಡೆಪಾಸಿಟ್ ಕಟ್ಟಿದ ಅಭ್ಯರ್ಥಿಗಳಿಗೆ ಸೆ.25 ರಿಂದ 29 ರವರೆಗೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ. ಈ ಹಿಂದೆ ದಾಖಲಿಸಿದ್ದ ಆಪ್ಷನ್ಸ್ ಅನ್ನು ಪರಿಗಣಿಸುವುದಿಲ್ಲ. ಈ ಸುತ್ತಿನಲ್ಲಿ ಸೀಟು ಹಂಚಿಕೆ ಬಳಿಕ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಕಡ್ಡಾಯ ಎಂದು ಹೇಳಿದೆ.

ಯಾರೆಲ್ಲ ಅರ್ಹರು:

ಇದುವರೆಗೂ ಸೀಟು ಹಂಚಿಕೆಯಾಗದವರು, ಸೀಟು ಹಂಚಿಕೆ ನಂತರ ದಂಡ ಪಾವತಿಸಿರುವ ಅಭ್ಯರ್ಥಿಗಳು, ಸೀಟು ಹಂಚಿಕೆಯಾಗಿ ಈಗಾಗಲೇ ಪ್ರವೇಶ ಪಡೆದಿರುವ ಹಾಗೂ ಇನ್ನೂ ಉತ್ತಮ ಸೀಟಿಗೆ ಅಪ್ ಗ್ರೆಡೇಷನ್ ಮಾಡಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು 3ನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು.

ಯಾರು ಅರ್ಹರಲ್ಲ:

ಸೀಟು ಹಂಚಿಕೆ ನಂತರ ಯಾವುದೇ ಚಾಯ್ಸ್ ಆಯ್ಕೆ ಮಾಡದಿರುವ ಹಾಗೂ‌ ಚಾಯ್ಸ್-4 ಹಾಕಿ ಕೌನ್ಸೆಲಿಂಗ್‌ನಿಂದ ಹೊರ ಹೋಗಿರುವವರು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ.

ಕಾಷನ್ ಡೆಪಾಸಿಟ್ ವಿವರಗಳು: 

ರೂ.1,00,000 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್‌ನ ಸರ್ಕಾರಿ ಸೀಟುಗಳು ಹಾಗೂ ದಂತ ವೈದ್ಯಕೀಯ ಕೋರ್ಸ್‌ನ ಎಲ್ಲ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ.

ರೂ.12,00,000 ಕಾಷನ್ ಡೆಪಾಸಿಟ್ ಪಾವತಿಸುವ ಅಭ್ಯರ್ಥಿಗಳು ಜಿ (ಸರ್ಕಾರಿ) ಮತ್ತುಪಿ (ಪ್ರೆವೈಟ್) ಸೀಟುಗಳಿಗೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ.

ರೂ.25,00,000 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ಎಲ್ಲ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಬಹುದು.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಈಗಾಗಲೇ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಕಾಷನ್ ಡೆಪಾಸಿಟ್ ಕಟ್ಟುವ ಅಗತ್ಯ ಇರುವುದಿಲ್ಲ. ಇತರೆ ಕೋರ್ಸ್ ಗಳಿಗೆ ಪಾವತಿಸಿರುವ ಶುಲ್ಕ ವನ್ನು ಕಾಷನ್ ಡೆಪಾಸಿಟ್ ಎಂದು ಪರಿಗಣಿಸುವುದಿಲ್ಲ.

ಕಾಷನ್ ಡೆಪಾಸಿಟ್ ಮುಟುಗೋಲು:

ಮೂರನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದಲ್ಲಿ, ಅಭ್ಯರ್ಥಿಯು ಪಾವತಿಸಿದ್ದ ಕಾಷನ್ ಡೆಪಾಸಿಟ್ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೆಇಎ ತಿಳಿಸಿದೆ.  

ಹೆಚ್ಚಿನ ಮಾಹಿತಿಗೆ https://cetonline.karnataka.gov.in/kea/indexnewಗೆ ಸಂಪರ್ಕಿಸಿರಿ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.