SSC: 1,748 ಹುದ್ದೆ.. ಅರ್ಜಿ ಸಲ್ಲಿಸಲು ನಾಳೆಯೇ ಕಡೆ ದಿನ

SSC: ಜೂನಿಯರ್ ಎಂಜಿನಿಯರ್ & ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕಡೆ ದಿನವಾಗಿದೆ.

Sep 21, 2026 - 14:45
SSC: 1,748 ಹುದ್ದೆ.. ಅರ್ಜಿ ಸಲ್ಲಿಸಲು ನಾಳೆಯೇ ಕಡೆ ದಿನ

SSC: ಸ್ಟಾಫ್ ಸೆಲೆಕ್ಷನ್ ಕಮಿಷನ್, ಜೂನಿಯರ್ ಎಂಜಿನಿಯರ್ (Junior Engineer) ಹಾಗೂ ಸೈಂಟಿಫಿಕ್ ಅಸಿಸ್ಟೆಂಟ್ (Scientific Assistant) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ (ಸೆ.22) ಕಡೆ ದಿನವಾಗಿದೆ. 

ಒಟ್ಟು ಹುದ್ದೆ: ಬರೋಬ್ಬರಿ 1,748 ಹುದ್ದೆಗಳನ್ನು ತುಂಬಲಾಗುತ್ತದೆ. 

ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಪ್ಲೊಮಾ, ಬಿ.ಇ/ಬಿ.ಟೆಕ್ ಅಥವಾ ವಿಜ್ಞಾನ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಗರಿಷ್ಠ 30 ರಿಂದ 32 ವರ್ಷವಿದ್ದು, ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಅಭ್ಯರ್ಥಿಗಳಿಗೆ 5 ವರ್ಷ/ ಒಬಿಸಿಯವರಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ. 

ವೇತನ: ಆಯ್ಕೆಯಾದವರಿಗೆ ತಿಂಗಳಿಗೆ ರೂ.35,400 ರಿಂದ ರೂ.1,12,400 ರವರೆಗೆ ಸಂಬಳವಿದೆ.

ಕರ್ನಾಟಕ & ಕೇರಳದವರಿಗೆ ಪ್ರರೀಕ್ಷೆ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ಕಲಬುರಗಿ/ಗುಲ್ಬರ್ಗಾ, ಮಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಉಡುಪಿ, ಕಣ್ಣೂರು, ಕೊಟ್ಟಾಯಂ, ಕೋಝಿಕ್ಕೋಡ್, ತಿರುವನಂತಪುರಂ, ಎರ್ನಾಕುಲಂ, ಕೊಲ್ಲಂ, ತ್ರಿಶೂರ್, ಕವರಟ್ಟಿ ಮತ್ತು ಅಲಪ್ಪುಝಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಬಹುದು.

ಅರ್ಜಿ ಶುಲ್ಕ: ಇದರ ಪಾವತಿಗೆ ಸೆ.23ಕ್ಕೆ ಕೊನೆಯಾಗಲಿದ್ದು, ರೂ.100 ಇದೆ. ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. 

ಹೆಚ್ಚಿನ ಮಾಹಿತಿ: https://ssc.gov.in/

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.