Mookuthi Amman-2: ನ.6ಕ್ಕೆ ಮೂಕುತಿ ಅಮ್ಮನ್-2 ಸಿನಿಮಾ ರಿಲೀಸ್

Mookuthi Amman-2: ತಮಿಳು ಸಿನಿಮಾ 'ಮೂಕುತಿ ಅಮ್ಮನ್-2' ಇದೇ ನ.6 ರಂದು ದೀಪಾವಳಿ ಹಬ್ಬದ ಪ್ರಯುಕ್ತ, ವಿಶ್ವದಾದ್ಯಂತ ರಿಲೀಸ್ ಆಗಲಿದೆ.

Oct 24, 2026 - 15:46
Oct 24, 2026 - 15:48
Mookuthi Amman-2: ನ.6ಕ್ಕೆ ಮೂಕುತಿ ಅಮ್ಮನ್-2 ಸಿನಿಮಾ ರಿಲೀಸ್

Mookuthi Amman-2: ಲೇಡಿ ಸೂಪರ್‌ಸ್ಟಾರ್ ನಯನತಾರಾ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ 'ಮೂಕುತಿ ಅಮ್ಮನ್-2' ಇದೇ ನ.6 ರಂದು ದೀಪಾವಳಿ ಹಬ್ಬದ ಪ್ರಯುಕ್ತ, ವಿಶ್ವದಾದ್ಯಂತ ರಿಲೀಸ್ ಆಗಲಿದೆ. 
 
ಇತ್ತೀಚೆಗಷ್ಟೇ ಈ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಭಾರೀ ಕುತೂಹಲವನ್ನು ಮೂಡಿಸಿದ್ದು, ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. 
 
ನಯನತಾರಾ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಖಳನಾಯಕಿಯಾಗಿ ರೆಜಿನಾ ಕ್ಯಾಸಾಂಡ್ರಾ ಬಣ್ಣ ಹಚ್ಚಿದ್ದಾರೆ. ಹಾಸ್ಯ ನಟ ಯೋಗಿ ಬಾಬು ಹಾಗೂ ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 
ಇನ್ನುಳಿದಂತೆ ಊರ್ವಶಿ, ಸ್ನೇಹಾ, ಅಭಿನಯ, ಇನಿಯಾ ಹಾಗೂ ಅಜಯ್ ಘೋಷ್ ಮುಖ್ಯಭೂಮಿಕೆಯಲ್ಲಿದ್ದಾರೆ. 
 
ಖ್ಯಾತ ನಿರ್ದೇಶಕ ಸುಂದರ್ ಸಿ ಆಕ್ಷನ್ ಕಟ್ ಹೇಳಿದ್ದಾರೆ. ಹಿಪ್‌ಹಾಪ್ ತಮಿಳಾ ಸಂಗೀತ ನೀಡಿದ್ದು, ಗೋಪಿ ಅಮರನಾಥ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.