Miss Universe 2026: ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊಗೆ 'ಮಿಸ್ ಯೂನಿವರ್ಸ್' ಕಿರೀಟ

Miss Universe 2026: ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ 'ಮಿಸ್ ಯೂನಿವರ್ಸ್ 2026'ರ ವಿಜೇತರಾಗಿದ್ದಾರೆ.

Nov 25, 2026 - 13:38
Nov 25, 2026 - 13:39
Miss Universe 2026: ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊಗೆ 'ಮಿಸ್ ಯೂನಿವರ್ಸ್' ಕಿರೀಟ
ಚಿತ್ರಕೃಪೆ: https://eksukoon.com/

Miss Universe 2026: 'ಮಿಸ್ ಯೂನಿವರ್ಸ್ 2026'ಕ್ಕೆ ಅದ್ದೂರಿ ತೆರೆ ಬಿದ್ದಿದ್ದು, ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ವಿಜೇತರಾಗಿದ್ದಾರೆ. ಮೆಕ್ಸಿಕೊದ ಹಾಲಿ ಮಿಸ್ ಯೂನಿವರ್ಸ್ ಫಾತಿಮಾ ಬಾಷ್, ಜೆನ್ನಿಫರ್ ಅವರಿಗೆ ಕಿರೀಟವನ್ನು ತೊಡಿಸಿದರು.

ಸುಮಾರು 115 ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಿದ 27 ವರ್ಷದ ಜೆನ್ನಿಫರ್, ಅಂತಿಮವಾಗಿ 'ಮಿಸ್ ಯೂನಿವರ್ಸ್' ಆಗಿ ಹೊರಹೊಮ್ಮಿದ್ದಾರೆ. 

ಡೊಮಿನಿಕನ್ ಗಣರಾಜ್ಯದ ಮೆಲಿಸ್ಸಾ ನುನೆಜ್ ಮೊದಲ ರನ್ನರ್‌ಅಪ್ ಆಗಿದ್ದು, ವೆನೆಜುವೆಲಾದ ಕ್ಲಾರಾ ವೇಗಾಸ್ ಗೊಯೆಟ್ಜ್ ಎರಡನೇ ರನ್ನರ್‌ಅಪ್ ಆದರು.

ಜೆನ್ನಿಫರ್ ಬ್ಯಾರೆಟೊ ಗೆಲುವಿನೊಂದಿಗೆ, 'ಪೋರ್ಟೊ ರಿಕೊ' ಸದ್ಯ 6 ಬಾರಿ 'ಮಿಸ್ ಯೂನಿವರ್ಸ್' ಕಿರೀಟವನ್ನು ಗೆದ್ದಿದೆ. ಈ ಹಿಂದೆ, ಮಾರಿಸೋಲ್ ಮಲಾರೆಟ್ (1970) ಡೆಬೊರಾ ಕಾರ್ತಿ-ಡೆಯು (1985) ದಯಾನಾರಾ ಟೊರೆಸ್ (1993) ಡೆನಿಸ್ ಕ್ವಿನೋನ್ಸ್ (2001) ಹಾಗೂ ಜುಲೇಕಾ ರಿವೆರಾ (2006) ಪ್ರಶಸ್ತಿಯನ್ನು ಜಯಿಸಿದ್ದರು. 

ಇನ್ನು, ಭಾರತವನ್ನು ಪ್ರತಿನಿಧಿಸಿದ್ದ ಕೇರಳದ 19 ವರ್ಷದ ಕಾನೂನು ವಿದ್ಯಾರ್ಥಿನಿ ಕಜಿಯಾ ಲಿಜ್ ಮೆಜೊ, ಟಾಪ್ 30ರಲ್ಲಿ ಸ್ಥಾನ ಪಡೆದಿದ್ದರು. ಆದರೂ, ಟಾಪ್ 12ರಲ್ಲಿ ಅರ್ಹತೆ ಪಡೆಯಲು ವಿಫಲರಾದರು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.