Sooraj Bolar: ತುಳು ಚಿತ್ರ ನಿರ್ದೇಶಕ ಸೂರಜ್ ಬೋಳಾರ್ ನಿಧನ
Sooraj Bolar: ತುಳು ಚಲನಚಿತ್ರ ನಿರ್ದೇಶಕ ಸೂರಜ್ ಬೋಳಾರ್ ಭಾನುವಾರ ನಿಧನರಾದರು.
ಬೆಂಗಳೂರು: ತುಳು ಚಲನಚಿತ್ರ ನಿರ್ದೇಶಕ ಸೂರಜ್ ಬೋಳಾರ್ (Suraj Bolar) ಭಾನುವಾರ ನಿಧನರಾದರು. ಆನಂದ ಬೋಳಾರ್ ಅವರ ಪುತ್ರರಾಗಿದ್ದು, ನಿರ್ದೇಶಕ, ನಟ ಮತ್ತು ಬರಹಗಾರರಾಗಿ ಗುರುತಿಸಿಕೊಂಡಿದ್ದರು.
ಸೂರಜ್ ಬೋಳಾರ್ 'ಪಟ್ಟೀಸ್ ಗ್ಯಾಂಗ್' ಹಾಗೂ 'ರಾಹುಕಳ ಗುಳಿಗಳಕಳ' ಎಂಬ ಎರಡು ತುಳು ಚಿತ್ರಗಳನ್ನು ನಿರ್ದೇಶಿಸಿದ್ದು, ಕರಾವಳಿ ಚಲನಚಿತ್ರೋದ್ಯಮದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದರು. ಅವರ ಹಠಾತ್ ನಿಧನವು ಕುಟುಂಬ, ಸ್ನೇಹಿತರು ಹಾಗೂ ಹಿತೈಷಿಗಳಿಗೆ ತೀವ್ರ ದುಃಖವನ್ನು ಉಂಟು ಮಾಡಿದೆ.
ಸೋಮವಾರ ಬೆಳಗ್ಗೆ 10 ರಿಂದ 11 ರವರೆಗೆ ಆಂಧ್ರಹಳ್ಳಿ ಮುಖ್ಯ ರಸ್ತೆಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಾಮಾಕ್ಷಿಪಾಳ್ಯದ ಹೊರ ವರ್ತುಲ ರಸ್ತೆಯಲ್ಲಿರುವ ಸುಮನಹಳ್ಳಿ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಿದೆ.