Ramayana: ರೂ.400 ಕೋಟಿ ಕ್ಲಬ್‌ನತ್ತ!

Ramayana: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ' ಬಾಕ್ಸ್ ಆಫೀಸ್‌ನಲ್ಲಿ ಆರ್ಭಟಿಸುತ್ತಿದೆ.

Nov 8, 2026 - 17:30
Ramayana: ರೂ.400 ಕೋಟಿ ಕ್ಲಬ್‌ನತ್ತ!

Ramayana: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ' ಬಾಕ್ಸ್ ಆಫೀಸ್‌ನಲ್ಲಿ ಆರ್ಭಟಿಸುತ್ತಿದೆ. ಸ್ಯಾಕ್ನಿಲ್ಕ್ ಪ್ರಕಾರ, ಮೂರನೇ ದಿನವಾದ ಶನಿವಾರದಂದು ಭಾರತದಲ್ಲಿ 23,696 ಶೋಗಳು ಪ್ರದರ್ಶನಗೊಂಡಿದ್ದು, ರೂ.69.80 ಕೋಟಿ ನೆಟ್ ಗಳಿಕೆ ಕಂಡಿದೆ. 

ಹಿಂದಿ ಆವೃತ್ತಿ 19,927 ಪ್ರದರ್ಶನಗಳಿಂದ ರೂ.53.00 ಕೋಟಿ, ಕನ್ನಡ ಆವೃತ್ತಿ 907 ಪ್ರದರ್ಶನಗಳಿಂದ ರೂ.6.30 ಕೋಟಿ, ತೆಲುಗು ಆವೃತ್ತಿ 1,586 ಪ್ರದರ್ಶನಗಳಿಂದ ರೂ.6 ಕೋಟಿ, ತಮಿಳು ಆವೃತ್ತಿ 683 ಪ್ರದರ್ಶನಗಳಿಂದ ರೂ.2.50 ಕೋಟಿ ಹಾಗೂ ಮಲಯಾಳಂ ಆವೃತ್ತಿ 593 ಪ್ರದರ್ಶನಗಳಿಂದ ರೂ.2 ಕೋಟಿ ಕಲೆಕ್ಷನ್ ಮಾಡಿದೆ.
 
ಈ ಮೂಲಕ ವಿಶ್ವಾದ್ಯಂತದ ಒಟ್ಟು ರೂ.375.50 ಕೋಟಿ ಗ್ರಾಸ್ ಗಳಿಕೆಯಾಗಿದೆ. ಲಂಕೇಶ್ವರ ರಾವಣನಾಗಿ ಯಶ್ ಆರ್ಭಟಿಸಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದು, ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. 
 
ರವಿ ದುಬೈ, ಸನ್ನಿ ಡಿಯೋಲ್, ಸನ್ನಿ ಡಿಯೋಲ್, ಅರುಣ್ ಗೋವಿಲ್, ಲಾರಾ ದತ್ತಾ, ಅನುಪಮ್ ಖೇರ್, ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಫೈಸಲ್ ಮಲಿಕ್, ಶೋಭನಾ: ಕೈಕಸಿ, ವಿವೇಕ್ ಒಬೆರಾಯ್ ಹಾಗೂ ಮೊಹಿತ್ ರೈನಾ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. 
 
ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳಿದ್ದಾರೆ. 'ಪ್ರೈಮ್ ಫೋಕಸ್ ಸ್ಟುಡಿಯೋಸ್' ಮಾಲೀಕ ನಮಿತ್ ಮಲ್ಹೋತ್ರಾ ಜೊತೆಗೂಡಿ, ತಮ್ಮದೇ ಸ್ವಂತ ಬ್ಯಾನರ್ 'ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್'ನಡಿ ಯಶ್, ಈ ಬಿಗ್-ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.