Dhruva Sarja: 'ವಸುದೈವ ಕುಟುಂಬಕಂ'ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

Dhruva Sarja: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ವಸುದೈವ ಕುಟುಂಬಕಂ'ನ ಧಿಕೃತ ಟೈಟಲ್ ಟೀಸರ್‌ನ್ನು ಹೊರತರಲಾಗಿದೆ.

Oct 7, 2026 - 20:15
Dhruva Sarja: 'ವಸುದೈವ ಕುಟುಂಬಕಂ'ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

'ಪೊಗರು' ನಂತರ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹಾಗೂ ಖ್ಯಾತ ನಿರ್ದೇಶಕ ನಂದ ಕಿಶೋರ್ (Nanda Kishore) ಮತ್ತೆ ಜೊತೆಯಾಗುತ್ತಿದ್ದಾರೆ.

ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ವಸುದೈವ ಕುಟುಂಬಕಂ' (Vasudhaiva Kutumbakam) ಸಿನಿಮಾ ರೆಡಿಯಾಗುತ್ತಿದೆ. 

ಧ್ರುವ ಸರ್ಜಾರ ಹುಟ್ಟುಹಬ್ಬದ ಪ್ರಯುಕ್ತ (ಅ.6) ಈ ಚಿತ್ರದ ಅಧಿಕೃತ ಟೈಟಲ್ ಟೀಸರ್‌ನ್ನು ಹೊರತರಲಾಗಿದೆ. ಮೈರಾ ಕ್ರಿಯೇಷನ್ಸ್ ಬ್ಯಾನರ್‌ನಡಿ ಹರೀಶ್ ಪೆದ್ದಿ ನಿರ್ಮಿಸಿದ್ದಾರೆ. 

ಆ್ಯಕ್ಷನ್ ಪ್ರಿನ್ಸ್ ತಮ್ಮ ರೆಗ್ಯುಲರ್ ಮಾಸ್ ಶೈಲಿಯಿಂದ ಹೊರಬಂದಿದ್ದು, ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ವಿ.ಹರಿಕೃಷ್ಣ (V.Harikrishna) ಸಂಗೀತ ನೀಡುತ್ತಿದ್ದಾರೆ. 

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.