Ramayana: ಬರೋಬ್ಬರಿ 1,000 ಕೋಟಿ ಕ್ಲಬ್‌ ಸೇರಿ ಬಿಡ್ತು!

Ramayana: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.

Nov 13, 2026 - 12:37
Nov 13, 2026 - 12:37
Ramayana: ಬರೋಬ್ಬರಿ 1,000 ಕೋಟಿ ಕ್ಲಬ್‌ ಸೇರಿ ಬಿಡ್ತು!

Ramayana: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ರಾಮಾಯಣ' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಪ್ರೇಕ್ಷಕರು ಕೂಡ ಮನಸೊತ್ತಿದ್ದಾರೆ.   

ಸ್ಯಾಕ್ನಿಲ್ಕ್ ಪ್ರಕಾರ, ಎಂಟನೇ ದಿನವಾದ ಗುರುವಾರದಂದು ಭಾರತದಲ್ಲಿ 24,042 ಶೋಗಳು ಪ್ರದರ್ಶನಗೊಂಡಿವೆ. ರೂ.53.50 ಕೋಟಿ ನೆಟ್ ಗಳಿಕೆಯಾಗಿದೆ. 

ಹಿಂದಿಯಲ್ಲಿ 19,464 ಪ್ರದರ್ಶನಗಳಿಂದ ರೂ.43.00 ಕೋಟಿ, ಕನ್ನಡದಲ್ಲಿ 922 ಪ್ರದರ್ಶನಗಳಿಂದ ರೂ.3.25 ಕೋಟಿ, ಮಲಯಾಳಂನಲ್ಲಿ 977 ಪ್ರದರ್ಶನಗಳಿಂದ ರೂ.2.80 ಕೋಟಿ, ತೆಲುಗಿನಲ್ಲಿ 1,783 ಪ್ರದರ್ಶನಗಳಿಂದ ರೂ.2.30 ಕೋಟಿ ಹಾಗೂ ತಮಿಳಿನಲ್ಲಿ 896 ಪ್ರದರ್ಶನಗಳಿಂದ ರೂ.2.15 ಕೋಟಿ ಕಲೆಕ್ಷನ್ ಮಾಡಿದೆ. 

ಇದರೊಂದಿಗೆ ವಿಶ್ವಾದ್ಯಂತದ ಒಟ್ಟು ರೂ.1,033.55 ಕೋಟಿ ಗ್ರಾಸ್ ಗಳಿಕೆ ಕಂಡಿದೆ. 

ಲಂಕೇಶ್ವರ ರಾವಣನಾಗಿ ಯಶ್ ಕಾಣಿಸಿಕೊಂಡಿದ್ದು, ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ ಅಭಿನಯಿಸಿದ್ದಾರೆ. ಸಾಯಿ ಪಲ್ಲವಿ ಸೀತೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 
 
ರವಿ ದುಬೈ, ಸನ್ನಿ ಡಿಯೋಲ್, ಸನ್ನಿ ಡಿಯೋಲ್, ಅರುಣ್ ಗೋವಿಲ್, ಲಾರಾ ದತ್ತಾ, ಅನುಪಮ್ ಖೇರ್, ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಫೈಸಲ್ ಮಲಿಕ್ ಮತ್ತು ವಿವೇಕ್ ಒಬೆರಾಯ್ ಮುಖ್ಯಭೂಮಿಕೆಯಲ್ಲಿದ್ದಾರೆ.
 
ನಿತೇಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. 'ಪ್ರೈಮ್ ಫೋಕಸ್ ಸ್ಟುಡಿಯೋಸ್' ಮಾಲೀಕ ನಮಿತ್ ಮಲ್ಹೋತ್ರಾ ಜೊತೆಗೂಡಿ, ತಮ್ಮದೇ ಸ್ವಂತ ಬ್ಯಾನರ್ 'ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್'ನಡಿ ಯಶ್, ಈ ಮೆಗಾ-ಬಜೆಟ್ ಸಿನಿಮಾವನ್ನು ನಿರ್ಮಿಸಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.