ಬಪ್ಪಳಿಗೆ ಅಂಬಿಕಾ ಸಿ.ಬಿ.ಎಸ್.ಇ. ವಿದ‍್ಯಾಲಯದಲ‍್ಲಿ ತಾಲೂಕು ಮಟ್ಟದ ವಿಜ‍್ಞಾನ ವಸ‍್ತು ಪ್ರದರ್ಶನ

ವಿಜ‍್ಞಾನ ವಸ‍್ತುಪ್ರದರ್ಶನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ‍್ಥೆಗಳ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್.ನಟ‍್ಟೋಜ ಮಾತನಾಡಿ, ವಿದ‍್ಯಾರ್ಥಿಗಳು ಆತ್ಮಸ‍್ಥೈರ್ಯದೊಂದಿಗೆ ವೈಜ‍್ಞಾನಿಕ ಮನೋಭಾವ ಮತ‍್ತು ಕಾರ್ಯತಂತ್ರ ಮೂಡಿಸಿಕೊಳ್ಳಬೇಕು. ಸಿಕ‍್ಕಿರುವ ಅವಕಾಶಗಳನ‍್ನು ಸರಿಯಾಗಿ ಸದುಪಯೋಗಪಡಿಸಿಕೊಳ‍್ಳುವುದು ಅತಿ ಅವಶ್ಯ. ಸರಕಾರದ ಕಾರ್ಯಕ್ರಮಗಳನ‍್ನು ಬಳಸಿಕೊಂಡು ದೇಶವನ‍್ನು ಅಭಿವೃದ‍್ಧಿಯತ್ತ ಕೊಂಡೊಯ್ಯವ ಗುರಿಯೊಂದಿಗೆ ದೇಶದ ಶಕ‍್ತಿಯಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

Nov 12, 2026 - 18:47
Nov 12, 2026 - 18:47
ಬಪ್ಪಳಿಗೆ ಅಂಬಿಕಾ ಸಿ.ಬಿ.ಎಸ್.ಇ. ವಿದ‍್ಯಾಲಯದಲ‍್ಲಿ  ತಾಲೂಕು ಮಟ್ಟದ ವಿಜ‍್ಞಾನ ವಸ‍್ತು ಪ್ರದರ್ಶನ

ಪುತ‍್ತೂರು: ನಗರದ ನಟ‍್ಟೋಜ ಫೌಂಡೇಶನ್ ಟ್ರಸ್ಟ್‌ ಮನ್ನಡೆಸುತ್ತಿರುವ ಬಪ್ಪಳಿಗೆಯಲ‍್ಲಿನ ಅಂಬಿಕಾ ಸಿ.ಬಿ.ಎಸ್.ಇ. ವಿದ‍್ಯಾಲಯದಲ‍್ಲಿ ಪುತ‍್ತೂರು ಕ‍್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಹಮ‍್ಮಿಕೊಂಡಿದ್ದ ತಾಲೂಕು ಮಟ್ಟದ ವಿಜ‍್ಞಾನ ವಸ‍್ತು ಪ್ರದರ್ಶನ ನಡೆದಿದ‍್ದು, ವೈಯಕ‍್ತಿಕ ವಿಭಾಗದಲ‍್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ‍್ಯಾರ್ಥಿ ಹೃಷಿಕೇಶ್ ಪ್ರಥಮ ಸ‍್ಥಾನ, ಗ್ರೂಪ್‌ ವಿಭಾಗದಲ‍್ಲಿ ಸುದಾನ ವಸತಿಯತ ಶಾಲೆಯ 8ನೇ ತರಗತಿ ವಿದ‍್ಯಾರ್ಥಿ ಸಮರ್ಥ್ ಸುಮಂತ್ ಮತ‍್ತು ಆರ್ಯನ್ ಪಿ.ಎಂ. ಪ್ರಥಮ ಸ‍್ಥಾನ ಪಡೆದರು. 
ವಿಜ‍್ಞಾನ ವಸ‍್ತುಪ್ರದರ್ಶನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ‍್ಥೆಗಳ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್.ನಟ‍್ಟೋಜ ಮಾತನಾಡಿ, ವಿದ‍್ಯಾರ್ಥಿಗಳು ಆತ್ಮಸ‍್ಥೈರ್ಯದೊಂದಿಗೆ ವೈಜ‍್ಞಾನಿಕ ಮನೋಭಾವ ಮತ‍್ತು ಕಾರ್ಯತಂತ್ರ ಮೂಡಿಸಿಕೊಳ್ಳಬೇಕು. ಸಿಕ‍್ಕಿರುವ ಅವಕಾಶಗಳನ‍್ನು ಸರಿಯಾಗಿ ಸದುಪಯೋಗಪಡಿಸಿಕೊಳ‍್ಳುವುದು ಅತಿ ಅವಶ್ಯ. ಸರಕಾರದ ಕಾರ್ಯಕ್ರಮಗಳನ‍್ನು ಬಳಸಿಕೊಂಡು ದೇಶವನ‍್ನು ಅಭಿವೃದ‍್ಧಿಯತ್ತ ಕೊಂಡೊಯ್ಯವ ಗುರಿಯೊಂದಿಗೆ ದೇಶದ ಶಕ‍್ತಿಯಾಗಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಎರಡು ವಿಭಾಗಗಳಲ‍್ಲಿ ಬಹುಮಾನ:
ವೈಯಕ‍್ತಿಕ ವಿಭಾಗದಲ‍್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ‍್ಯಾರ್ಥಿ ಹೃಷಿಕೇಶ್ ಪ್ರಥಮ ಸ‍್ಥಾನ, ಸುದಾನ ವಸತಿಯತ ಶಾಲೆಯ 9ನೇ ತರಗತಿ ವಿದ‍್ಯಾರ್ಥಿ ಆದಿತ್ಯ ಕೆ. ದ‍್ವಿತೀಯ ಸ‍್ಥಾನ, ಅಲಂಕಾರಿನ ಶ್ರೀ ದುರ್ಗಾಂಬಾ ಪ್ರೌಢಶಾಲೆಯ 8ನೇ ತರಗತಿ ವಿದ‍್ಯಾರ್ಥಿ ಅಲ‍್ವಿನ್ ಕೆ ಎಸ್ ತೃತೀಯ ಸ‍್ಥಾನ ಪಡೆದರು. 
ಗ್ರೂಪ್‌ ವಿಭಾಗದಲ‍್ಲಿ ಸುದಾನ ವಸತಿಯತ ಶಾಲೆಯ 8ನೇ ತರಗತಿಯ ಸಮರ್ಥ್ ಸುಮಂತ್ ಮತ‍್ತು ಆರ್ಯನ್ ಪಿ ಎನ್‌ ಪ್ರಥಮ ಸ‍್ಥಾನ, ಶ್ರೀರಾಮಕೃಷ್ಣ ಪ್ರೌಢಶಾಲೆಯ 10ನೇ ತರಗತಿಯ ಅಭಿಷೇಕ್ ಪ್ರಭು ಮತ‍್ತು ಉದಿತ್ ಟಿ ದ‍್ವಿತೀಯ ಸ‍್ಥಾನ, ಉಪ‍್ಪಿನಂಗಡಿಯ ಇಂದ್ರಪ್ರಸ್ಥ ವಿದ‍್ಯಾಲಯದ 9ನೇ ತರಗತಿಯ ಪ್ರಜ್ಞಾ ರಾವ್ ಮತ‍್ತು ಶ್ರವಣ್ ಕುಮಾರ್ ತೃತೀಯ ಸ‍್ಥಾನ ಪಡೆದುಕೊಂಡರು.
ಪುತ‍್ತೂರು ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಜಲಜಾಕ‍್ಷಿ, ಪುತ‍್ತೂರು ತಾಲೂಕಿನ ಶಿಕ್ಷಣ ಸಂಯೋಜಕರಾದ ಅಮೃತಾ ಕಲಾ, ಅಂಬಿಕಾ ವಿದ‍್ಯಾಲಯದ ಪ್ರಾಂಶುಪಾಲರಾದ ಮಾಲತಿ ಡಿ ಉಪಸ‍್ಥಿತರಿದ್ದರು. ಅಂಬಿಕಾ ವಿದ‍್ಯಾಲಯದ ಶಿಕ್ಷಕಿ ವೀಣಾ ಸರಸ್ವತಿ ನಿರೂಪಿಸಿದರು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.