ವಿವೇಕಾನಂದ ಕಾಲೇಜು: ವಾಲ್ಮೀಕಿ ರಾಮಾಯಣ-ಲಕ್ಷ್ಮಣ ಅಂತರಂಗದ ಪ್ರಸ್ತುತಿ

Vivekananda College: ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಲ್ಮೀಕಿ ರಾಮಾಯಣದ ಪಾತ್ರವಾದ ಅಂತರಂಗ ನಿರೂಪಣೆ ಲಕ್ಷ್ಮಣ ಅಂತರಂಗ' ಎಂಬ ಕಾರ್ಯಕ್ರಮ ನಡೆಯಿತು.

Oct 29, 2026 - 14:11
ವಿವೇಕಾನಂದ ಕಾಲೇಜು: ವಾಲ್ಮೀಕಿ ರಾಮಾಯಣ-ಲಕ್ಷ್ಮಣ ಅಂತರಂಗದ ಪ್ರಸ್ತುತಿ

ಪುತ್ತೂರು: ರಾಮಾಯಣದಲ್ಲಿ ರಾಮ ಧರ್ಮದ ಪ್ರತೀಕವಾದರೆ, ಲಕ್ಷ್ಮಣ ತ್ಯಾಗದ ಪ್ರತೀಕ. ಲಕ್ಷ್ಮಣನ ಅಂತರಂಗ  ಶುದ್ಧವಾಗಿರುತ್ತದೆ. ಅವನಲ್ಲಿ ಯಾವುದೇ ಕಲ್ಮಶವಿಲ್ಲ. ಅರಮನೆಯ ಸುಖವನ್ನು ತ್ಯಜಿಸಿ ಸಹೋದರನಿಗಾಗಿ 14 ವರ್ಷ ವನವಾಸಕ್ಕೆ ಹೊರಡುವ ನಿರ್ಧಾರ ತೆಗೆದುಕೊಳ್ಳುವುದು ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ. ಇದಕ್ಕೆ ಶುದ್ಧ ಮನಸ್ಸಿನ ಜೊತೆಗೆ ನಮ್ಮ ಮನಸ್ಸು ಜ್ಞಾನದತ್ತ ಸಾಗಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಹೇಳಿದರು.
 
ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿವೇಕಾನಂದ ಸಂಶೋಧನಾ ಕೇಂದ್ರ, ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ, ಲಲಿತಕಲಾ ಸಂಘ, ಕನ್ನಡ ವಿಭಾಗ - ಕನ್ನಡ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಈಚೆಗೆ ನಡೆದ 'ವಾಲ್ಮೀಕಿ ರಾಮಾಯಣದ ಪಾತ್ರವಾದ ಅಂತರಂಗ ನಿರೂಪಣೆ ಲಕ್ಷ್ಮಣ ಅಂತರಂಗ' ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
 
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ, ಲಕ್ಷ್ಮಣನ ಆದರ್ಶ ಗುಣಗಳು, ಕರ್ತವ್ಯ ನಿಷ್ಠೆ, ಸಹೋದರ ಪ್ರೀತಿ ಹಾಗೂ ತ್ಯಾಗ ಮನೋಭಾವವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮಾಯಣದ ಪಾತ್ರಗಳು ಸಾರುವ ಮೌಲ್ಯಗಳು ಮತ್ತು ಸಂದೇಶಗಳು ನಮ್ಮ ಜೀವನಕ್ಕೆ ಸದಾ ಮಾರ್ಗದರ್ಶನ ನೀಡುವಂತಿರಬೇಕು ಎಂದರು.
 
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಎಸ್, ಸಂಶೋಧನಾ ಕೇಂದ್ರದ ನಿರ್ದೇಶಕಿ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ.ವಿಜಯಸರಸ್ವತಿ ಬಿ & ಕಾಲೇಜಿನ ವಿಶೇಷ ಅಧಿಕಾರಿ (ಆಡಳಿತ ವಿಭಾಗ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ ಮನಮೋಹನ್ ಎಂ ಉಪಸ್ಥಿತರಿದ್ದರು.
 
ವಿದ್ಯಾರ್ಥಿ ಹರ್ಷ ಶೆಟ್ಟಿ ಸ್ವಾಗತಿಸಿದರು. ರಮ್ಯಶ್ರೀ ಶಂಕರಿ ವಂದಿಸಿದರು. ಸುಮಾ ಭಟ್ ಸಿ.ಹೆಚ್ ನಿರೂಪಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.