ವಿವೇಕಾನಂದ ಪದವಿ ಕಾಲೇಜಿನಲ್ಲಿ 'ಗುರುಅಭಿವಂದನೆ' ಕಾರ್ಯಕ್ರಮ

Vivekananda Degree College: ವಿವೇಕಾನಂದ ಪದವಿ ಕಾಲೇಜಿನಲ್ಲಿ 'ಗುರುಅಭಿವಂದನೆ' ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

Oct 20, 2026 - 20:08
ವಿವೇಕಾನಂದ ಪದವಿ ಕಾಲೇಜಿನಲ್ಲಿ 'ಗುರುಅಭಿವಂದನೆ' ಕಾರ್ಯಕ್ರಮ

ಪುತ್ತೂರು: ಒಬ್ಬ ಶಿಕ್ಷಕನಿಗೆ ಪ್ರತಿನಿತ್ಯ ಓದುವ ಹಂಬಲ ಅತಿಮುಖ್ಯ. ಉತ್ತಮ ಶಿಕ್ಷಕ ಹೆಚ್ಚಿನ ತಿಳುವಳಿಕೆ ಹೊಂದಿರಬೇಕು. ವಿದ್ಯಾರ್ಥಿಗಳಲ್ಲಿರುವ ಎಲ್ಲಾ ಗೊಂದಲಗಳನ್ನು ಪರಿಹರಿಸುವ ಸಾಮರ್ಥ್ಯ ಆತನಲ್ಲಿರಬೇಕು. ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬರಲಿರುವವರು ಆ ಹುದ್ದೆಯ ಬಗ್ಗೆ ಶ್ರದ್ಧೆ ಮತ್ತು ಗೌರವವನ್ನು ಹೊಂದಿರಬೇಕು ಎಂದು ವಿವೇಕಾನಂದ ಪದವಿ-ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಜೀವನ್ ದಾಸ್ ಹೇಳಿದರು.

ವಿವೇಕಾನಂದ ಪದವಿ ಕಾಲೇಜಿನ ಭವಿಷ್ ಘಟಕ ಹಾಗೂ ಕಲಾ, ವಿಜ್ಞಾನ, ವಾಣಿಜ್ಯ, ವ್ಯವಹಾರ ನಿರ್ವಹಣೆ & ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಸಹಯೋಗದಲ್ಲಿ, ಈಚೆಗೆ ನಡೆದ 'ಗುರುಅಭಿವಂದನೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರುಳಿಕೃಷ್ಣ ಕೆ.ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣವನ್ನು ಪಡೆಯುವುದು ಮಾತ್ರವಲ್ಲದೆ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಯುವಜನತೆ ಉತ್ತಮ ವ್ಯಕ್ತಿಗಳ ಜೀವನಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಭವಿಷ್ ಘಟಕದ ಸಂಯೋಜಕ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪ್ರಮೋದ್ ಎಂ.ಜಿ ಸ್ವಾಗತಿಸಿದರು. ಭವಿಷ್ ಘಟಕದ ಸಹ ಸಂಯೋಜಕಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಕವಿತಾ ವಂದಿಸಿದರು. ತೃತೀಯ ವರ್ಷದ ವಾಣಿಜ್ಯ ವಿಭಾಗದ ದೀಪ್ತಿ ಪ್ರಭು ಆಶಯಗೀತೆ ಹಾಡಿದರು, ತೃತೀಯ ಕಲಾ ವಿಭಾಗದ ಕೆ.ಕೃತಿಕಾ ನಿರೂಪಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.