ಮುಲ್ಕಿ: ರಸ್ತೆ ಕಾಮಗಾರಿ - ವಾಹನ ಸಂಚಾರ ನಿಷೇಧ

Mulki: ಕಾರ್ನಾಡು ಜಂಕ್ಷನ್‌ನಿಂದ ಮುಲ್ಕಿ ನಾರಾಯಣಗುರು ಸಂಕೀರ್ಣದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿರುವ ಹಿನ್ನೆಲೆ, ನ. 24 ರಿಂದ 2027ರ ಮಾ.23 ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

Nov 24, 2026 - 18:33
Nov 24, 2026 - 18:34
ಮುಲ್ಕಿ: ರಸ್ತೆ ಕಾಮಗಾರಿ - ವಾಹನ ಸಂಚಾರ ನಿಷೇಧ

ಮಂಗಳೂರು: ಬೆಳ್ತಂಗಡಿ-ಮೂಡುಬಿದಿರೆ-ಮುಲ್ಕಿ ರಾಜ್ಯ ಹೆದ್ದಾರಿ 70ರ ಕಾರ್ನಾಡು ಜಂಕ್ಷನ್‌ನಿಂದ ಮುಲ್ಕಿ ನಾರಾಯಣಗುರು ಸಂಕೀರ್ಣದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿರುವ ಹಿನ್ನೆಲೆ, ನ. 24 ರಿಂದ 2027ರ ಮಾ.23 ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಈ ಕುರಿತು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ. 

ಪರ್ಯಾಯ ಮಾರ್ಗವೇನು:

ಕಾರ್ನಾಡು ಜಂಕ್ಷನ್‍ನಿಂದ ಮುಲ್ಕಿ/ ಮಂಗಳೂರು ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ಕಾರ್ನಾಡು ಜಂಕ್ಷನ್‍ನಿಂದ ಕಾರ್ನಾಡು ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ-66ನ್ನು ಸಂಪರ್ಕಿಸಿ ಮುಲ್ಕಿ/ ಮಂಗಳೂರು ಕಡೆಗೆ ಸಂಚರಿಸಬೇಕು.

ಮಂಗಳೂರು ಕಡೆಯಿಂದ ಕಾರ್ನಾಡು/ ಕಿನ್ನಿಗೋಳಿ ಕಡೆಗೆ ತೆರಳುವವರು ರಾಷ್ಟ್ರೀಯ ಹೆದ್ದಾರಿಯ ಕಾರ್ನಾಡು ಬೈಪಾಸ್ ಬಳಿ ಬಲಕ್ಕೆ ತಿರುಗಿ ಕಾರ್ನಾಡು/ ಕಿನ್ನಿಗೋಳಿ ಕಡೆಗೆ ಹೊಗಬೇಕು. 

ಮುಲ್ಕಿ ಕಡೆಯಿಂದ ಕಿನ್ನಿಗೋಳಿ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳು ರಾಷ್ಟ್ರೀಯ ಹೆದ್ದಾರಿ -66ರ ಕಾರ್ನಾಡು ಬೈಪಾಸ್ ಮೂಲಕ ಕಾರ್ನಾಡು ಜಂಕ್ಷನ್‍ನ್ನು ಸಂಪರ್ಕಿಸಿ, ಕಿನ್ನಿಗೋಳಿ ಕಡೆಗೆ ಸಂಚರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.