ಶ್ರೀ ಪಂಚಲಿಂಗೇಶ್ವರ ದೇಗುಲ: ಕಿನ್ನಿಮಾಣಿ–ಪೂಮಾಣಿ, ಪಿಲಿಚಾಮುಂಡಿ ದೈವಗಳ ಚಾವಡಿ ನಿರ್ಮಾಣಕ್ಕೆ ಭೂಮಿಪೂಜೆ
Sri Panchalingeshwara Temple: ನೂತನವಾಗಿ ನಿರ್ಮಾಣಗೊಳ್ಳಲಿರುವ ಕಿನ್ನಿಮಾಣಿ-ಪೂಮಾಣಿ ಹಾಗೂ ಪಿಲಿಚಾಮುಂಡಿ ದೈವಗಳ ಚಾವಡಿಯ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಯನ್ನು ಶನಿವಾರ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಪುತ್ತೂರು (ಈಶ್ವರಮಂಗಲ): ಇಲ್ಲಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ, ನೂತನವಾಗಿ ನಿರ್ಮಾಣಗೊಳ್ಳಲಿರುವ ಕಿನ್ನಿಮಾಣಿ-ಪೂಮಾಣಿ ಹಾಗೂ ಪಿಲಿಚಾಮುಂಡಿ ದೈವಗಳ ಚಾವಡಿಯ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆಯನ್ನು ಶನಿವಾರ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಬೆಳಗ್ಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ, ಕುಂಟಾರು ಗುರು ತಂತ್ರಿಗಳು ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಜರುಗಿಸಿದರು. ಶಿಲ್ಪಿ ರಮೇಶ್ ಕಾರಂತ್ ಬೆದ್ರಡ್ಕ ನೇತೃತ್ವದಲ್ಲಿ ನೂತನ ಚಾವಡಿಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಮಾಣಿಲತ್ತಾಯ, ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರತನ್ ಕುಮಾರ್ ನಾಯಕ್ ಕರ್ನೂರು ಗುತ್ತು, ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಉಪಾಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಆನಂದ ರೈ ಸಾಂತ್ಯ, ಸದಾಶಿವ ರೈ ನಡುಬೈಲು, ಅಚ್ಯುತ ಮಣಿಯಾಣಿ ಸಾಂತ್ಯ ಮತ್ತು ಕೋಶಾಧಿಕಾರಿ ದೀಪಕ್ ಮುಂಡ್ಯ ಉಪಸ್ಥಿತರಿದ್ದರು.
ಜಯಪ್ರಕಾಶ್ ಶೆಟ್ಟಿ ನೂಜಿಬೈಲು, ಸುರೇಶ್ ಆಳ್ವ ಸಾಂತ್ಯ, ಕೃಷ್ಣಪ್ರಸಾದ್ ಭಟ್ ಅಮ್ಮಂಕಲ್ಲು, ನವೀನ್ ಕೇಕುಣ್ಣಾಯ ಮುಂಡ್ಯ, ಗಿರೀಶ್ ರೈ ಮರಕ್ಕಡ, ರಾಮ್ ರತನ್ ನಾಯ್ಕ್ ಉಜಂಪಾಡಿ, ರಾಮ್ ಪ್ರಸಾದ್ ಆಳ್ವ ಮೇನಾಲ, ಪ್ರದೀಪ್ ರೈ ಮೇನಾಲ, ಕೃಷ್ಣ ರಾಜ್ ಭಂಡಾರಿ ಮೇನಾಲ, ವಿಕ್ರಂ ರೈ ಸಾಂತ್ಯ, ಪೂರ್ಣಚಂದ್ರ ರೈ ನೆಲ್ಲಿತಡ್ಕ, ಶರತ್ ರೈ ನೆಲ್ಲಿತಡ್ಕ, ಸತೀಶ್ ಸುರುಳಿಮೂಳೆ, ಹರೀಶ್ ರಾವ್ ಸಾಂತ್ಯ, ರಮಾನಂದ ಕೋರಿಗದ್ದೆ, ಗೌರೀಶ್ ಮುಂಡ್ಯ, ರಮೇಶ್ ಪೂಜಾರಿ ಮುಂಡ್ಯ, ಆನಂದ ಗೌಡ ಕೆಮ್ಮತ್ತಡ್ಕ, ಮೋಹನಾಂಗಿ ಬೀಜಂತ್ತಡ್ಕ, ಸವಿತಾ ರೈ ನೆಲ್ಲಿತಡ್ಕ, ಚಿನ್ಮಯ್ ಈಶ್ವರಮಂಗಲ, ಸನತ್ ರೈ ಮೂಡಾಯೂರು, ಬಾಲಕೃಷ್ಣ ರೈ ಮುನ್ನಗದ್ದೆ, ಅಮರನಾಥ ಆಳ್ವ, ಕೊರಗಪ್ಪ ನಾಯ್ಕ ಕಲ್ಲಾಜೆ, ದೇವಪ್ಪ ಪೂಜಾರಿ ಮಾಡದಗುಡ್ಡೆ, ಜಯಕರ ರೈ ಬಂಟುಕಲ್ಲು, ರಘುನಾಥ ರೈ ಬೆದ್ರಾಡಿ, ಜಯಂತ ರೈ ಮೇನಾಲ, ಶಿವರಾಮ ಕತ್ರಿಬೈಲು, ನಾರಾಯಣ ರೈ ಬೆದ್ರಾಡಿ ಹಾಗೂ ನಾರಾಯಣ ರೈ ಅಂಕೋತಿಮಾರು ಸೇರಿದಂತೆ ಹಲವು ಗಣ್ಯರು, ಸಮಿತಿ ಸದಸ್ಯರು ಮತ್ತು ಭಕ್ತಾದಿಗಳು ಕೂಡ ಇದ್ದರು.