Brindavihari: ನಾಳೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬೃಂದಾವಿಹಾರಿ' ಬಿಡುಗಡೆ
Brindavihari: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ 'ಬೃಂದಾವಿಹಾರಿ' ಸಿನಿಮಾದ ನಾಳೆ (ನ.20) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
Brindavihari: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಹುನಿರೀಕ್ಷಿತ 'ಬೃಂದಾವಿಹಾರಿ' ಸಿನಿಮಾದ ನಾಳೆ (ನ.20) ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಈ ಮೊದಲು ಅ.16 ತೆರೆಗೆ ಬರಬೇಕಿತ್ತು. ಆದರೆ 'ಪ್ರೇಮದ ಊರಲಿ' ಚಿತ್ರದೊಂದಿಗೆ, ಬಾಕ್ಸ್ ಆಫೀಸ್ ಸಂಘರ್ಷ ತಪ್ಪಿಸಲು ಈ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು.
'ಬೃಂದಾವಿಹಾರಿ' ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ದೇವಿಕಾ ಭಟ್, ಮಾಳವಿಕಾ ಶರ್ಮಾ, ರಂಗಾಯಣ ರಘು, ಸಾಧು ಕೋಕಿಲ, ಅಚ್ಯುತ್ ಕುಮಾರ್, ಲಕ್ಷ್ಮೀ, ಅವಿನಾಶ್, ರಾಮ್ ಕುಮಾರ್, ಮಂಜು ಪಾವಗಡ ಹಾಗೂ ಜಗ್ಗಪ್ಪ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಶ್ರೀನಿವಾಸ್ ರಾಜು ಆಕ್ಷನ್ ಕಟ್ ಹೇಳಿದ್ದು, ಸಮೃದ್ಧಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಹೆಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಕ್ಯಾಮೆರಾ ವರ್ಕ್ ಮಾಡಿದ್ದು, ಕವಿರಾಜ್ ಮತ್ತು ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.