Drishyam-3: ದೃಶ್ಯಂ-3 ಸಿನಿಮಾ ರೂ.400 ಕೋಟಿ ಕ್ಲಬ್ ಸೇರಿ ಬಿಡ್ತು!
Drishyam-3: ಬಾಲಿವುಡ್ ಸಿನಿಮಾ 'ದೃಶ್ಯಂ-3' ಬಾಕ್ಸ್ ಆಫೀಸ್‌ನಲ್ಲಿಯೂ ಭರ್ಜರಿ ಯಶಸ್ಸು ಕಾಣುತ್ತಿದೆ.
Drishyam-3: ಅಜಯ್ ದೇವಗನ್ ನಟನೆಯ ಬಾಲಿವುಡ್ ಸಿನಿಮಾ 'ದೃಶ್ಯಂ-3' ಇದೇ ಅ.2 ರಂದು ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್‌ನಲ್ಲಿಯೂ ಭರ್ಜರಿ ಯಶಸ್ಸು ಕಾಣುತ್ತಿದೆ.
ಸ್ಯಾಕ್ನಿಲ್ಕ್ ಪ್ರಕಾರ, ಭಾರತದಲ್ಲಿ 8 ದಿನವಾದ ಗುರುವಾರದಂದು ರೂ.14.50 ಕೋಟಿ ನೆಟ್ ಗಳಿಕೆ ಕಂಡಿದೆ. 14,583 ಶೋಗಳು ಪ್ರದರ್ಶನಗೊಂಡಿವೆ. ಈ ಮೂಲಕ ವಿಶ್ವಾದ್ಯಂತ ರೂ.407 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಈ ಚಿತ್ರದ ಕಥೆಯು ವಿಜಯ್ ಸಾಳಗಾಂವ್ಕರ್ ಹಾಗೂ ಆತನ ಕುಟುಂಬದ ಸುತ್ತ ಸುತ್ತುತ್ತದೆ. ಅಭಿಷೇಕ್ ಪಾಠಕ್ ಆಕ್ಷನ್ ಕಟ್ ಹೇಳಿದ್ದಾರೆ.
ಪನೋರಮಾ ಸ್ಟುಡಿಯೋಸ್ & ಸ್ಟಾರ್ ಸ್ಟುಡಿಯೋಸ್ 18 ಬ್ಯಾನರ್‌ನಡಿ ನಿರ್ಮಿಸಲಾಗಿದೆ. ಸುಧೀರ್ ಕೆ ಚೌಧರಿ ಕ್ಯಾಮೆರಾ ವರ್ಕ್ ಮಾಡಿದ್ದು, ರವಿ ಬಸ್ರೂರ್ ಹಾಗೂ ರೋಚಕ್ ಕೊಹ್ಲಿ ಮ್ಯೂಸಿಕ್ ನೀಡಿದ್ದಾರೆ.
ಟಬು, ಜೈದೀಪ್ ಅಹ್ಲಾವತ್, ಪ್ರಕಾಶ್ ರಾಜ್, ಶ್ರಿಯಾ ಸರನ್, ರಜತ್ ಕಪೂರ್, ಇಶಿತಾ ದತ್ತಾ ಮತ್ತು ಕಮಲೇಶ್ ಸಾವಂತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.