ಭಾರತದ ಇ-ಕಾಮರ್ಸ್ ರಫ್ತು ವಹಿವಾಟು ರೂ.2.49 ಲಕ್ಷ ಕೋಟಿಗೆ ಏರಿಕೆ: ಅಮೆಜಾನ್
Amazon: ಭಾರತದ ಇ-ಕಾಮರ್ಸ್ ರಫ್ತು ವಹಿವಾಟು ರೂ.2.49 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಅಮೆಜಾನ್ ತಿಳಿಸಿದೆ.
ನವದೆಹಲಿ: ಭಾರತದಿಂದ ಅಮೆಜಾನ್‌ನ ಜಾಗತಿಕ ಮಾರಾಟ ಕಾರ್ಯಕ್ರಮದ ಮೂಲಕ ನಡೆದ ಒಟ್ಟು ಇ-ಕಾಮರ್ಸ್ ರಫ್ತು ವಹಿವಾಟು ರೂ.2.49 ಲಕ್ಷ ಕೋಟಿ ( 27 ಬಿಲಿಯನ್ ಡಾಲರ್) ತಲುಪಿದೆ ಎಂದು ಕಂಪನಿ ಬುಧವಾರ ತಿಳಿಸಿದೆ.
ಕಳೆದ ಒಂದು ವರ್ಷದಲ್ಲಿ ರಫ್ತುದಾರರ ಸಂಖ್ಯೆ ಶೇ 20ರಷ್ಟು ಹೆಚ್ಚಾಗಿದೆ. 2015ರಲ್ಲಿ ಆರಂಭವಾದ ಈ ಕಾರ್ಯಕ್ರಮದಲ್ಲಿ ಇದುವರೆಗೆ 2.4 ಲಕ್ಷಕ್ಕೂ ಹೆಚ್ಚು ರಫ್ತುದಾರರು ನೋಂದಾಯಿಸಿಕೊಂಡಿದ್ದಾರೆ.
ಭಾರತದಲ್ಲಿ ತಯಾರಾದ ಒಂದು ಬಿಲಿಯನ್‌ಗೂ ಅಧಿಕ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿದ್ದಾರೆ. ದೇಶದ 28 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳ ರಫ್ತುದಾರರು ಇದರಲ್ಲಿ ಭಾಗಿಯಾಗಿದ್ದಾರೆ.