IPL ಹರಾಜಿಗೆ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್: ಮೂಲ ಬೆಲೆ ರೂ.30 ಲಕ್ಷ
IPL: ಐಪಿಎಲ್ ಆಟಗಾರರ ಹರಾಜಿಗೆ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೇರಿದಂತೆ 994 ಅನ್‌ಕ್ಯಾಪ್ಡ್ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.
IPL: ಗೋವಾದಲ್ಲಿ ಡಿ.16 ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿಗೆ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೇರಿದಂತೆ 994 ಅನ್‌ಕ್ಯಾಪ್ಡ್ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಭಾರತದ ಇತ್ತೀಚಿನ ಅಂಡರ್-19 ಏಷ್ಯಾಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ಯವೀರ್ ಮತ್ತು ಮೊಹಿತ್ ಉಲ್ವಾ ಅವರ ಮೂಲ ಬೆಲೆ ತಲಾ ರೂ.30 ಲಕ್ಷ ಆಗಿದೆ.
ಐದು ಪಂದ್ಯಗಳಲ್ಲಿ 361ಕ್ಕೂ ಹೆಚ್ಚು ರನ್ ಗಳಿಸಿದ್ದ ಆರ್ಯವೀರ್ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು. ಇಶಾಂತ್ ಶರ್ಮಾ ಮತ್ತು ನಿತೀಶ್ ರಾಣಾ ಅವರ ಮೂಲ ಬೆಲೆ ತಲಾ ರೂ.50 ಲಕ್ಷ ಆಗಿದೆ.