Premada Oorali: ಕನ್ನಡದ 'ಪ್ರೇಮದ ಊರಲಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಲ್ ಮಾಡುತ್ತಿದ್ದು, ಸೂಪರ್ ಹಿಟ್ ಆಗಿದೆ. ಈ ಮ್ಯೂಸಿಕಲ್ ರೋಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾಕ್ಕೆ ಪ್ರೇಕ್ಷಕರು ಕೂಡ ಜೈ ಎಂದಿದ್ದಾರೆ. ಸದ್ಯ ಈ ಸಿನಿಮಾ ರೂ.100 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ.
ಸ್ಯಾಕ್ನಿಲ್ಕ್ ಪ್ರಕಾರ, 25ನೇ ದಿನವಾದ ಸೋಮವಾರದಂದು ರೂ.3.25 ಕೋಟಿ ನೆಟ್ ಗಳಿಕೆ ಕಂಡಿದ್ದು, 925 ಶೋಗಳು ಪ್ರದರ್ಶನಗೊಂಡಿವೆ. ಈ ಮೂಲಕ ವಿಶ್ವಾದ್ಯಂತ ರೂ.97.02 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇದು ಹಳ್ಳಿಯೊಂದರ ತಂದೆ - ಮಗನ ಕಥೆಯಾಗಿದೆ. ಶ್ರೀಮಹದೇವ್, ರಂಗಾಯಣ ರಘು, ತಪಸ್ವಿನಿ ಪೂನಾಚ ರಾಮಿಕಾ ಶಿವು, ಗೋಪಾಲಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ಗಿರಿ, ಧರ್ಮಣ್ಣ ಕಡೂರು, ಮಿತ್ರ, ಇಳಾ ವಿಟ್ಲ, ಸುಶ್ಮಿತಾ, ಸುವಿಶ್ ಚಂದ್ರ, ಅಭಿಷೇಕ್ ಕಲ್ಮಾಣಿ ಹಾಗೂ ಅಭಿ ಮಹೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮನೋಜ್ ಕುಮಾರ್ ನಿರ್ದೇಶನ ಮಾಡಿದ್ದು, ವೆನಿಲ್ಲಾ ಎಂಟರ್‌ಟೈನ್‌ಮೆಂಟ್ಸ್ & ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಜಂಟಿಯಾಗಿ ನಿರ್ಮಿಸಲಾಗಿದೆ. ಸುನಾದ್ ಗೌತಮ್ ಮ್ಯೂಸಿಕ್ ನೀಡಿದ್ದು, ಈಗಾಗಲೇ ಸಿನಿಮಾದ ಹಾಡುಗಳು ಪ್ರೇಕ್ಷಕರ ಮನ ಗೆದ್ದಿವೆ. ರಾಜ್‌ಕಾಂತ್ ಎಸ್.ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ.