IPL: ಮುಂಬೈ ಇಂಡಿಯನ್ಸ್‌ಗೆ ಮತ್ತೆ ನಾಯಕನಾದ ರೋಹಿತ್ ಶರ್ಮಾ

IPL 2027: ಮುಂಬರುವ 2027ರ ಐಪಿಎಲ್ 20ನೇ ಆವೃತ್ತಿಗೆ ರೋಹಿತ್ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಮರಳಿದ್ದಾರೆ.

Nov 27, 2026 - 19:50
Nov 27, 2026 - 19:51
IPL: ಮುಂಬೈ ಇಂಡಿಯನ್ಸ್‌ಗೆ ಮತ್ತೆ ನಾಯಕನಾದ ರೋಹಿತ್ ಶರ್ಮಾ

IPL: ಮುಂಬರುವ 2027ರ ಐಪಿಎಲ್ 20ನೇ ಆವೃತ್ತಿಗೆ ರೋಹಿತ್ ಶರ್ಮಾ (Rohit Sharma) ಮತ್ತೆ ಮುಂಬೈ ಇಂಡಿಯನ್ಸ್ (MI) ತಂಡದ ನಾಯಕನಾಗಿ ಮರಳಿದ್ದಾರೆ. ಫ್ರಾಂಚೈಸಿ ಅಧಿಕೃತವಾಗಿ ಶುಕ್ರವಾರ ಈ ಘೋಷಣೆ ಮಾಡಿದೆ.

ಆಟಗಾರರ ವಿನಿಯಮ ಒಪ್ಪಂದದಡಿ ಹಾರ್ದಿಕ್ ಪಾಂಡ್ಯ, ಪಂಜಾಬ್ ಕಿಂಗ್ಸ್ (PBKS) ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆ, ರೋಹಿತ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.  

ಈ ಹಿಂದೆ, ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ, 2013, 2015, 2017, 2019 ಮತ್ತು 2020ರಲ್ಲಿ 5 ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದರು. 2013 ರಿಂದ 2023 ರವರೆಗೆ ನಾಯಕತ್ವದ ಜವಾಬ್ದಾರಿ ಹೊತ್ತಿದ್ದರು.

ಆ ಬಳಿಕ 2024ರ ಐಪಿಎಲ್ ಆರಂಭಕ್ಕೂ ಮುನ್ನ ಗುಜರಾತ್ ಟೈಟಾನ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ ಸೇರಿದ್ದ ಹಾರ್ದಿಕ್, ರೋಹಿತ್ ಶರ್ಮಾರ ಸ್ಥಾನವನ್ನು ತುಂಬಿದ್ದರು.

ರೋಹಿತ್ ನಾಯಕತ್ವದಲ್ಲಿ, 2020ರಲ್ಲಿ ಪ್ರಶಸ್ತಿ ಗೆದ್ದ ನಂತರ, ಮುಂಬೈ ತಂಡವು ಲೀಗ್‌ ಹಂತದಲ್ಲೇ ಕಳಪೆ ಪ್ರದರ್ಶನ ನೀಡಿತು. 2021ರಲ್ಲಿ 5ನೇ ಸ್ಥಾನ, 2022ರಲ್ಲಿ 10ನೇ ಸ್ಥಾನ ಪಡೆಯಿತು. 2023ರಲ್ಲಿ 'ಕ್ವಾಲಿಫೈಯರ್ 2' ಹಂತದಲ್ಲಿ ಹೊರಬಿದ್ದಿತ್ತು. ಹೀಗಾಗಿ, ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯು ನಾಯಕನನ್ನು ಬದಲಾಯಿಸಲು ತೀರ್ಮಾನಿಸಿತು.

ಆದರೆ, ಹಾರ್ದಿಕ್ ನಾಯಕತ್ವದಲ್ಲೂ ಮುಂಬೈ ತಂಡದ ಉತ್ತಮ ಪ್ರದರ್ಶನ ನೀಡಲಿಲ್ಲ. 2024ರಲ್ಲಿ 10ನೇ ಸ್ಥಾನ, 2025ರಲ್ಲಿ ಕ್ವಾಲಿಫೈಯರ್-2ರ ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಆ ಬಳಿಕ ಹೊರಬಿದ್ದಿತ್ತು. 2026ರಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಯಿತು.

'ಡೆಕ್ಕನ್ ಚಾರ್ಜರ್ಸ್' ತಂಡದೊಂದಿಗೆ ಐಪಿಎಲ್ ವೃತ್ತಿಜೀವನ ಪ್ರಾರಂಭಿಸಿದ ರೋಹಿತ್ ಶರ್ಮಾ, 281 ಪಂದ್ಯಗಳಿಂದ 7,329 ರನ್‌ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಮತ್ತು 49 ಅರ್ಧಶತಕಗಳು ಸೇರಿವೆ.

ಇನ್ನು, ಮುಂಬೈ ಇಂಡಿಯನ್ಸ್ ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರಂತಹ ಪ್ರಮುಖ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.