WhatsApp: ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. 'ಶೆಡ್ಯೂಲ್ಡ್ ಮೆಸೇಜಸ್' (Scheduled Messages) ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.
ಇದು ಐಒಎಸ್ (iOS) ಹಾಗೂ ಆಂಡ್ರಾಯ್ಡ್ (Android) ಮಾತ್ರವಲ್ಲದೆ, ವಾಟ್ಸ್‌ಆ್ಯಪ್ ಮೆಸೆಂಜರ್ (WhatsApp Messenger) ಅಪ್ಲಿಕೇಶನ್‌ನ ವೆಬ್ ಆವೃತ್ತಿಯಲ್ಲೂ ಬಳಕೆದಾರರಿಗೆ ಲಭ್ಯವಾಗುತ್ತಿದೆ.
ಇದರ ಮೂಲಕ ಬಳಕೆದಾರರು ತಮ್ಮ ಸಂದೇಶಗಳನ್ನು ಮೊದಲೇ ಬರೆದಿಟ್ಟು, ತಮಗೆ ಬೇಕಾದ ದಿನಾಂಕ ಹಾಗೂ ಸಮಯದಲ್ಲಿ ಅವುಗಳನ್ನು ಕಳುಹಿಸಬಹುದು.
ಬಳಕೆದಾರರು ವೈಯಕ್ತಿಕ (1:1) ಅಥವಾ ಗುಂಪು ಚಾಟ್‌ನಲ್ಲಿ10 ನಿಮಿಷಗಳಿಂದ ಹಿಡಿದು 14 ದಿನಗಳವರೆಗಿನ ಅವಧಿಯಲ್ಲಿ ಸಂದೇಶಗಳನ್ನು ಕಳುಹಿಸಲು ಶೆಡ್ಯೂಲ್ ಮಾಡಬಹುದು. ಸೆಂಡ್ (Send) ಬಟನ್‌ನ್ನು ದೀರ್ಘಕಾಲ ಒತ್ತುವ (Pess & Hold) ಮೂಲಕ, ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು.
ಸದ್ಯ, ಈ ವೈಶಿಷ್ಟ್ಯವು ಜಿಮೇಲ್ (Gmail), ಎಕ್ಸ್ (X) ಮತ್ತು ಇತರೆ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳಲ್ಲಿ ದೊರೆಯುತ್ತಿದೆ.