ನವೆಂಬರ್‌ನಲ್ಲಿ Volkswagen ಕಾರುಗಳ ಮೇಲೆ ಭರ್ಜರಿ ಆಫರ್; iguan R-Line ಖರೀದಿಗೆ ₹6 ಲಕ್ಷದವರೆಗೆ ಡಿಸ್ಕೌಂಟ್ ಸೇಲ್
Volkswagen ನವೆಂಬರ್ ಕೊಡುಗೆಯಲ್ಲಿ Tiguan R-Line ಹಳೆಯ ಫೀಚರ್‌ಗಳ ಆವೃತ್ತಿಗೆ ಗರಿಷ್ಠ ರಿಯಾಯಿತಿ ಲಭ್ಯವಿದೆ. volkswagen: ಈ ಮಾದರಿಯ ವಾಹನ ಖರೀದಿದಾರರಿಗೆ ₹3.5 ಲಕ್ಷ ನಗದು ರಿಯಾಯಿತಿ ಹಾಗೂ ₹2 ಲಕ್ಷ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ₹50,000 ಪ್ರಯೋಜನವಿದ್ದು, ಒಟ್ಟು ಬರೋಬ್ಬರಿಗೆ ₹6 ಲಕ್ಷದವರೆಗೆ ಗ್ರಾಹಕರಿಗೆ ಡಿಸ್ಕೌಂಟ್ ಲಭ್ಯವಾಗಲಿದೆ.
ಬೆಂಗಳೂರು: ದೀಪಾವಳಿ ಸೇರಿದಂತೆ ಹಲವು ಹಬ್ಬಗಳ ಹಿನ್ನಲೆಯಲ್ಲಿ ಈ ನವೆಂಬರ್ ತಿಂಗಳಲ್ಲಿ ಹೊಸ ಕಾರು ಖರೀದಿಸಲು ಯೋಜಿಸುತ್ತಿರುವ ಗ್ರಾಹಕರಿಗೆ Volkswagen ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದೆ. ಕಂಪನಿಯ Taigun, Virtus, Tiguan R-Line ಮತ್ತು Tayron ಕಾರುಗಳ ಆಯ್ದ ಮಾದರಿಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ನಗದು ರಿಯಾಯಿತಿ, ಹಳೆಯ ಕಾರಿನ ಎಕ್ಸ್‌ಜೇಂಜ್ ಬೋನಸ್, ಲಾಯಲ್ಟಿ ಪ್ರಯೋಜನ ಹಾಗೂ ಕಾರ್ಪೊರೇಟ್ ಆಫರ್‌ಗಳು ಈ ಕೊಡುಗೆಯಲ್ಲಿ ಸೇರಿವೆ. ಮಾಡೆಲ್, ವೇರಿಯಂಟ್ ಮತ್ತು ಉತ್ಪಾದನಾ ವರ್ಷಕ್ಕೆ ಅನುಗುಣವಾಗಿ ರಿಯಾಯಿತಿಯ ಮೊತ್ತ ಕೂಡ ಕಾರುಗಳಿಂದ ಕಾರುಗಳಿಗೆ ಬದಲಾಗಲಿದೆ.
Tiguan R-Line ಮೇಲೆ ಗರಿಷ್ಠ ₹6 ಲಕ್ಷದ ಪ್ರಯೋಜನ
Volkswagen ನವೆಂಬರ್ ಕೊಡುಗೆಯಲ್ಲಿ Tiguan R-Line ಹಳೆಯ ಫೀಚರ್‌ಗಳ ಆವೃತ್ತಿಗೆ ಗರಿಷ್ಠ ರಿಯಾಯಿತಿ ಲಭ್ಯವಿದೆ. ಈ ಮಾದರಿಯ ವಾಹನ ಖರೀದಿದಾರರಿಗೆ ₹3.5 ಲಕ್ಷ ನಗದು ರಿಯಾಯಿತಿ ಹಾಗೂ ₹2 ಲಕ್ಷ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ₹50,000 ಪ್ರಯೋಜನವಿದ್ದು, ಒಟ್ಟು ಬರೋಬ್ಬರಿಗೆ ₹6 ಲಕ್ಷದವರೆಗೆ ಗ್ರಾಹಕರಿಗೆ ಡಿಸ್ಕೌಂಟ್ ಲಭ್ಯವಾಗಲಿದೆ. ಆದರೆ ಹೆಚ್ಚುವರಿ ₹50,000 ಪ್ರಯೋಜನ ಪಡೆಯಲು ಅನ್ವಯಿಸುವ ಅರ್ಹತಾ ಷರತ್ತುಗಳನ್ನು ಆಸಕ್ತ ಖರೀದಿದಾರರು ಸಮೀಪದ Volkswagen ಡೀಲರ್ ಬಳಿ ಖಚಿತಪಡಿಸಿಕೊಳ್ಳಬಹುದು.

Taigun ಖರೀದಿದಾರರಿಗೂ ವಿಶೇಷ ಕೊಡುಗೆ
2025ರ Taigun Topline 1.0 TSI ಮ್ಯಾನುವಲ್ ಮಾಡೆಲ್‌ಗೆ ಗರಿಷ್ಠ ₹2 ಲಕ್ಷ ನಗದು ರಿಯಾಯಿತಿ ನೀಡಲಾಗುತ್ತಿದೆ. ಅರ್ಹ ಗ್ರಾಹಕರಿಗೆ ₹30,000 ಎಕ್ಸ್‌ಚೇಂಜ್ ಬೋನಸ್ ಹಾಗೂ ₹40,000ವರೆಗೆ ಕಾರ್ಪೊರೇಟ್ ಪ್ರಯೋಜನ ದೊರೆಯಲಿದೆ. ಈ ಮೂಲಕ ಗ್ರಾಹಕರಿಗೆ ಒಟ್ಟು ಪ್ರಯೋಜನ ₹2.7 ಲಕ್ಷದವರೆಗೆ ಸಿಗಬಹುದು.
2025ರ Topline 1.0 TSI ಆಟೋಮ್ಯಾಟಿಕ್ ಮಾದರಿಗೆ ₹1.5 ಲಕ್ಷ ಹಾಗೂ 2026ರ ಆವೃತ್ತಿಗೆ ₹1 ಲಕ್ಷ ನಗದು ರಿಯಾಯಿತಿ ಘೋಷಿಸಲಾಗಿದೆ.
GT Plus ಸರಣಿಯಲ್ಲಿಯೂ ಉತ್ತಮ ಕೊಡುಗೆಗಳಿವೆ. 2025ರ GT Plus Chrome 1.5 TSI DSG ಮಾದರಿಗೆ ₹2 ಲಕ್ಷ ನಗದು ರಿಯಾಯಿತಿ ಲಭ್ಯವಿದೆ. GT Plus Chrome ಮತ್ತು GT Plus Sport ಮ್ಯಾನುವಲ್ ಆವೃತ್ತಿಗಳಿಗೆ ತಲಾ ₹1.51 ಲಕ್ಷ ರಿಯಾಯಿತಿ ನೀಡಲಾಗುತ್ತಿದೆ. 2025ರ GT Plus Sport 1.5 TSI DSG ಮಾದರಿಗೂ ₹1.51 ಲಕ್ಷ ನಗದು ರಿಯಾಯಿತಿ ಸಿಗಲಿದೆ.
ಇನ್ನು Comfortline 1.0 TSI ಮ್ಯಾನುವಲ್ ಮತ್ತು GT-Line ಸೇರಿದಂತೆ ಇತರ ಆಯ್ದ Taigun ಮಾದರಿಗಳಿಗೆ ₹50,000ರಿಂದ ₹80,900ವರೆಗೆ ನಗದು ರಿಯಾಯಿತಿ ಲಭ್ಯವಿದೆ.
ಖರೀದಿಗೂ ಮುನ್ನ ಗ್ರಾಹಕರ ಗಮನಕ್ಕೆ
ಅರ್ಹ Taigun ಮಾದರಿಗಳಿಗೆ ₹30,000 ಎಕ್ಸ್‌ಚೇಂಜ್ ಬೋನಸ್ ಹಾಗೂ ₹20,000 ಲಾಯಲ್ಟಿ ಪ್ರಯೋಜನವೂ ಲಭ್ಯವಿದೆ. ಗ್ರಾಹಕರ ವರ್ಗಕ್ಕೆ ಅನುಗುಣವಾಗಿ ₹5,000ರಿಂದ ₹40,000ವರೆಗೆ ಕಾರ್ಪೊರೇಟ್ ಆಫರ್ ನೀಡಲಾಗುತ್ತದೆ. ಆದರೆ ಲಾಯಲ್ಟಿ ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಒಟ್ಟಿಗೆ ಪಡೆಯಲು ಅವಕಾಶವಿಲ್ಲ.
ಈ ಕೊಡುಗೆಗಳು ಆಯ್ದ ವೇರಿಯಂಟ್‌ಗಳು ಮತ್ತು ಉತ್ಪಾದನಾ ವರ್ಷಗಳಿಗೆ ಮಾತ್ರ ಅನ್ವಯಿಸುತ್ತವೆ. ಆದ್ದರಿಂದ ಕಾರು ಖರೀದಿಸುವ ಮುನ್ನ ಉತ್ಪಾದನಾ ವರ್ಷ, ವೇರಿಯಂಟ್, ಎಕ್ಸ್‌ಚೇಂಜ್ ಅರ್ಹತೆ ಹಾಗೂ ಅನ್ವಯವಾಗುವ ರಿಯಾಯಿತಿಗಳ ಕುರಿತು ಸಮೀಪದ Volkswagen ಡೀಲರ್‌ಗಳಿಂದ ಮಾಹಿತಿ ಪಡೆಯಬಹುದು.