India vs Zimbabwe Women ODI: ನಾಳೆ ಮೊದಲ ಪಂದ್ಯ
India vs Zimbabwe Women ODI: ಭಾರತ ಮತ್ತು ಜಿಂಬಾಬ್ವೆ ಮಹಿಳಾ ತಂಡಗಳ ಮಧ್ಯೆ 3 ಪಂದ್ಯಗಳ ಏಕದಿನ ಸರಣಿಯು ನಾಳೆಯಿಂದ ಶುರುವಾಗಲಿದೆ.
India vs Zimbabwe Women ODI: ಭಾರತ ಮತ್ತು ಜಿಂಬಾಬ್ವೆ ಮಹಿಳಾ ತಂಡಗಳ ಮಧ್ಯೆ 3 ಪಂದ್ಯಗಳ ಏಕದಿನ (ODI) ಸರಣಿಯು ನಾಳೆಯಿಂದ (ಅ.23) ಶುರುವಾಗಲಿದೆ.
ಈಚೆಗೆ ಮುಕ್ತಾಯಗೊಂಡ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ 3-0 ಅಂತರದಿಂದ ಜಿಂಬಾಬ್ವೆಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಎಲ್ಲಾ ಏಕದಿನ ಪಂದ್ಯಗಳು ವಡೋದರಾದ ಬರೋಡಾ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ಕ್ರೀಡಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಪಂದ್ಯವು ಶುರುವಾಗಲಿದೆ.
ಸಂಭಾವ್ಯ ಪ್ಲೇಯಿಂಗ್ 11:
ಭಾರತ: ಸ್ಮೃತಿ ಮಂದಾನ (ನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ/ ಪ್ರತಿಕಾ ರಾವಲ್, ಹರ್ಮನ್‌ಪ್ರೀತ್ ಕೌರ್, ತೇಜಲ್ ಹಸಬ್ನಿಸ್/ ಹರ್ಲೀನ್ ಡಿಯೋಲ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ನಂದನಿ ಶರ್ಮಾ/ ಕ್ರಾಂತಿ ಗೌಡ್ ಹಾಗೂ ಶ್ರೀಚರಣಿ/ ಸಯಾಲಿ ಸತ್ಘರೆ.
ಜಿಂಬಾಬ್ವೆ: ಶಾರ್ನ್ ಮೇಯರ್ಸ್, ಚಿಯೆಝಾ ಧುರುರು, ಚಿಪೊ ಮುಗೇರಿ-ಟಿರಿಪನೊ, ಮಾಡೆಸ್ಟರ್ ಮುಪಾಚಿಕ್ವಾ, ಜೋಸೆಫೀನ್ ಎನ್ಕೊಮೊ (ನಾಯಕಿ), ನ್ಯಾಶಾ ಗ್ವಾಂಜುರಾ, ಬೆಲೋವ್ಡ್ ಬಿಜಾ, ಕೆಲ್ಲಿಸ್ ನ್ಡ್ಲೊವು, ಲೋರಿನ್ ಫಿರಿ, ನೋಮ್ವೆಲೋ ಸಿಬಂದಾ ಮತ್ತು ಕುಡ್ಜಾಯ್ ಚಿಗೋರಾ / ತೆಂದಾಯ್ ಮಕುಶಾ.