ಒಂದು ವರ್ಷದ ಹೂಡಿಕೆಗೆ ಶೇ. 40ಕ್ಕಿಂತ ಹೆಚ್ಚು ಲಾಭದ ಸಾಧ್ಯತೆ ಹೊಂದಿರುವ 11 ಷೇರುಗಳು
ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ಆಶಾದಾಯಕವೆಂದು ಗುರುತಿಸಿರುವ ಈ 11 ಷೇರುಗಳು ಪ್ರಸ್ತುತ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಶೇ. 40ರಿಂದ ಶೇ. 68ರವರೆಗೆ ಏರಿಕೆ ಕಾಣುವ ಸಾಧ್ಯತೆಯನ್ನು ಹೊಂದಿವೆ ಎಂದು ಬ್ರೋಕರೇಜ್ ಸಂಸ್ಥೆಗಳು ಅಂದಾಜಿಸಿವೆ.
ಬೆಂಗಳೂರು: ಇರಾನ್ ಯುದ್ಧ ಮುಗಿಯುವ ಹಂತದಲ್ಲಿದೆ. ರಷ್ಯಾ- ಉಕ್ರೇನ್ ಯುದ್ಧ ಕೂಡಾ ನಿಲ್ಲುವ ಆಶಾಭಾವನೆ ಇದೆ. ಈ ಎರಡೂ ಯುದ್ಧಗಳು ನಿಂತರೆ, ಕಚ್ಚಾ ತೈಲ ಬೆಲೆ $೫೦ಗಿಂತ ಕೆಳಗೆ ಕುಸಿಯುವ ಸಾಧ್ಯತೆ ಇದೆ. ಇದು ದೇಶದ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟಕ್ಕೆ ಮುನ್ನುಡಿ ಹಾಡಬಹುದು ಅನ್ನುವ ಲೆಕ್ಕಾಚಾರ ಎಲ್ಲೆಡೆ ಇದೆ.
ಇಂತಹ ಸಂದರ್ಭದ ಸೃಷ್ಟಿಯಾದರೆ ನೀವು ಯಾವು ಷೇರುಗಳನ್ನು ಖರೀದಿಸಬಹುದು? ಒಂದು ವರ್ಷದಲ್ಲಿ ೪೦% ಶೇಕಡಕ್ಕಿಂತ ಅಧಿಕ ಲಾಭ ತಂದು ಕೊಡಬಹುದು ಅನ್ನುವ ನಿರೀಕ್ಷೆ ಇರುವ ಬ್ರೋಕರೇಜ್ ಸಂಸ್ಥೆಗಳು ಶಿಫಾರಸು ಮಾಡಿರುವ ಷೇರುಗಳ ಪಟ್ಟಿ ಇಲ್ಲಿದೆ.
ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ಆಶಾದಾಯಕವೆಂದು ಗುರುತಿಸಿರುವ ಈ 11 ಷೇರುಗಳು ಪ್ರಸ್ತುತ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಶೇ. 40ರಿಂದ ಶೇ. 68ರವರೆಗೆ ಏರಿಕೆ ಕಾಣುವ ಸಾಧ್ಯತೆಯನ್ನು ಹೊಂದಿವೆ ಎಂದು ಬ್ರೋಕರೇಜ್ ಸಂಸ್ಥೆಗಳು ಅಂದಾಜಿಸಿವೆ.
ರಿಯಲ್ ಎಸ್ಟೇಟ್, ಔಷಧ, ಡಿಜಿಟಲ್ ಜಾಹೀರಾತು, ಇಂಧನ, ವಿಮಾನ ನಿಲ್ದಾಣ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ವಿವಿಧ ವಲಯಗಳ ಕಂಪನಿಗಳು ಈ ಪಟ್ಟಿಯಲ್ಲಿವೆ.
ಬ್ರೋಕರೇಜ್ ಸಂಸ್ಥೆಗಳ ಆಯ್ಕೆಯ 11 ಷೇರುಗಳು
ಕಂಪನಿ ಬ್ರೋಕರೇಜ್ ಸಂಸ್ಥೆ ಗುರಿ ಬೆಲೆ ಅಂದಾಜು ಏರಿಕೆ
Brigade Enterprises Motilal Oswal ₹890 68%
Dalmia Bharat Jefferies ₹2,125 60.4%
Affle 3i Ambit Capital ₹2,005 49.4%
Reliance Industries Jefferies ₹1,710 47%
Shilpa Medicare PL Capital ₹1,230 47%
GMR Airports Jefferies ₹125 44%
DLF PL Capital ₹860 43%
Keystone Realtors ICICI Direct ₹520 43.65%
Reliance Industries Ambit Capital ₹1,651 41.7%
Delhivery Ambit Capital ₹542 40.4%
Redington ICICI Direct ₹500 40.45%
ಬ್ರೋಕರೇಜ್ ಸಂಸ್ಥೆಗಳು ನೀಡಿರುವ ಗುರಿ ಬೆಲೆಗಳು ಅಂದಾಜು ಮಾತ್ರ; ಅವು ಖಚಿತ ಲಾಭದ ಭರವಸೆಯಲ್ಲ. ನೀವು ಹೂಡಿಕೆ ಮಾಡುವುದೇ ಆದರೆ ಹೂಡಿಕೆಗೂ ಮುನ್ನ ಕಂಪನಿಗಳ ಆರ್ಥಿಕ ಸ್ಥಿತಿ, ಸಾಲದ ಪ್ರಮಾಣ, ಲಾಭದ ಬೆಳವಣಿಗೆ ಮತ್ತು ಷೇರಿನ ಪ್ರಸ್ತುತ ಮೌಲ್ಯಮಾಪನವನ್ನು ಪರಿಶೀಲಿಸಬೇಕು. ಈ ವರದಿಯಲ್ಲಿನ ಗುರಿ ಬೆಲೆ ಮತ್ತು ಏರಿಕೆಯ ಸಾಧ್ಯತೆಗಳು ಉಲ್ಲೇಖಿತ ಬ್ರೋಕರೇಜ್ ಶಿಫಾರಸುಗಳ ಆಧಾರಿತವಾಗಿವೆ. ಇವು ಸ್ವತಂತ್ರವಾಗಿ ಪರಿಶೀಲಿಸಿದ ನೈಜ-ಸಮಯದ ಮಾರುಕಟ್ಟೆ ದರಗಳಲ್ಲ. ಹೂಡಿಕೆ ನಿರ್ಧಾರ ಕೈಗೊಳ್ಳುವ ಮೊದಲು ಇತ್ತೀಚಿನ ವರದಿಗಳನ್ನು ಪರಿಶೀಲಿಸುವುದು ಅಗತ್ಯ.