Asian Para Games-2026: ಬರೋಬ್ಬರಿ 114 ಪದಕ ಗೆದ್ದ ಭಾರತ!

Asian Para Games-2026: ಜಪಾನ್‌ನ ಐಚಿ–ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌-2026ಕ್ಕೆ ತೆರೆ ಬಿದ್ದಿದೆ. ಭಾರತವು 114 ಪದಕಗಳನ್ನು ಗೆದ್ದು, ಐತಿಹಾಸಿಕ ಸಾಧನೆ ಮಾಡಿದೆ.

Oct 24, 2026 - 20:06
Asian Para Games-2026: ಬರೋಬ್ಬರಿ 114 ಪದಕ  ಗೆದ್ದ ಭಾರತ!

Asian Para Games-2026: ಜಪಾನ್‌ನ ಐಚಿ–ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌-2026ಕ್ಕೆ ತೆರೆ ಬಿದ್ದಿದೆ. ಭಾರತವು 30 ಚಿನ್ನ, 35 ಬೆಳ್ಳಿ ಹಾಗೂ 49 ಕಂಚು ಸೇರಿದಂತೆ ಒಟ್ಟು 114 ಪದಕಗಳನ್ನು ಗೆದ್ದು, ಐತಿಹಾಸಿಕ ಸಾಧನೆ ಮಾಡಿದೆ. ಇದರೊಂದಿಗೆ ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ.

ಈ ಬಾರಿ ಭಾರತದ ಪರವಾಗಿ 168 ಪ್ಯಾರಾ ಅಥ್ಲೀಟ್‌ಗಳು ಭಾಗವಹಿಸಿದ್ದರು. ಇದು ಏಷ್ಯನ್ ಪ್ಯಾರಾ ಗೇಮ್ಸ್ ಇತಿಹಾಸದಲ್ಲೇ, ದೇಶದ ಅತ್ಯುತ್ತಮ ಪ್ರದರ್ಶನವಾಗಿದೆ.  

2023ರ ಹ್ಯಾಂಗ್‌ಝೌನಲ್ಲಿ ನಡೆದ ಕ್ರೀಡಾಕೂಟದಲ್ಲಿದ್ದ ಭಾರತವು 108 ಪದಕಗಳನ್ನು ಜಯಿಸಿತ್ತು.

ಕರ್ನಾಟಕದ ಕ್ರೀಡಾಪಟುಗಳ ಸಾಧನೆ: 

ಇದೇ 'ಏಷ್ಯನ್ ಪ್ಯಾರಾ ಗೇಮ್ಸ್‌'ನಲ್ಲಿ ರಾಜ್ಯದ ಕ್ರೀಡಾಪಟುಗಳು ಅಮೋಘ ಪ್ರದರ್ಶನ ನೀಡಿದ್ದು, 8 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಸೌಮ್ಯ ಚಿನ್ನದ ಪದಕ, ರಾಧಾ ವೆಂಕಟೇಶ್ ಮತ್ತು ಶರತ್ ಮಾಕನಹಳ್ಳಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ನಿರಂಜನ್ ಮುಕುಂದನ್, ಪಲ್ಲವಿ ಕಾಲುವೆಹಳ್ಳಿ, ಸುಹಾಸ್ ಎಲ್. ಯತಿರಾಜ್, ಸ್ವಾತಿಕ್ ಪಾಟೀಲ್ ಹಾಗೂ ತೇಜಸ್ ನಂದಕುಮಾರ್ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.