ದಿನ ಭವಿಷ್ಯ: ಇವತ್ತು ಯಾರಿಗೆ ಶುಭ ಫಲ?
Daily Horoscope: ಇಂದು (ಬುಧವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ವಿಜಯದಶಮಿಯ ಸಂಭ್ರಮ.. ಕೆಲವು ಉದ್ಯಮಗಳ ಸೀಮೋಲ್ಲಂಘನ. ಹೊಸ ಹೂಡಿಕೆಗಳಲ್ಲಿ ಲಾಭದ ಸೂಚನೆ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಸಚ್ಚಾರಿತ್ರ್ಯ ಮೆರೆದ ನಾಯಕರಿಗೆ ವಿಜಯ. ಗಣೇಶ ಕವಚ, ಶಿವಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಈ ಬುಧವಾರ ಅದ್ಭುತ ಫಲಗಳು.. ಖಾದಿ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ಶ್ರಮಿಕ ವರ್ಗಕ್ಕೆ ಅನುಕೂಲವಾದ ವಾತಾವರಣ. ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
ಮಿಥುನ:
ದಸರಾ ಸಂಭ್ರಮ ಮುಕ್ತಾಯದ ಹಂತದಲ್ಲಿ.. ದೂರ ಪ್ರಯಾಣ ಮಾಡುವುದು ಬೇಡ. ಛದ್ಮವೇಷಧಾರಿಗಳ ಕುರಿತು ಎಚ್ಚರ ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಹಿರಿಯರ ಜೀವನೋತ್ಸಾಹ ವೃದ್ಧಿ ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಆದಿತ್ಯ ಹೃದಯ ಓದಿ.
ಕರ್ಕಾಟಕ:
ಮಾಧ್ಯಮದಲ್ಲಿರುವವರು ಎಚ್ಚರ.. ಉದ್ಯಮಗಳಿಗೆ ಅನಾಯಾಸವಾಗಿ ನೆರವು. ಮಹಿಳಾ ಉದ್ಯಮಿಗಳಿಗೆ ಏಳಿಗೆಯ ಸೂಚನೆ. ಹಿರಿಯರಿಗೆ ಮನೋಬಲದಿಂದ ಆರೋಗ್ಯ ಪ್ರಾಪ್ತಿ. ಮಕ್ಕಳ ಕಲಾಸಕ್ತಿಗೆ ಪೋಷಣೆ. ಗಣೇಶ ದ್ವಾದಶನಾಮ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
ಸಿಂಹ:
ಸಮಯಕ್ಕೆ ಸರಿಯಾಗಿ ಸ್ಪಂದಿಸುತ್ತಿರಿ.. ಹಲವು ವ್ಯವಹಾರಗಳತ್ತ ಗಮನ ಕೊಡಲು ಒತ್ತಡ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಸಿವಿಲ್ ಎಂಜಿನಿಯರರಿಗೆ ಅನುಕೂಲದ ದಿನ. ವ್ಯಾಜ್ಯ ಮುಂದುವರಿಸದಿರಲು ನಿರ್ಧಾರ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಕನ್ಯಾ:
ಹಬ್ಬದ ವಿಜೃಂಭಣೆ ಮುಕ್ತಾಯ.. ಪ್ರತಿಭೆ ಹಾಗೂ ಕಾರ್ಯನಿಷ್ಠೆಗೆ ಉನ್ನತರ ಮೆಚ್ಚುಗೆ. ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆಯ ಭರವಸೆ. ದೂರದೂರಿಗೆ ಪ್ರಯಾಣ ಮುಂದಕ್ಕೆ. ಅಧ್ಯಾಪಕರ ಆತಂಕ ನಿವಾರಣೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ತುಲಾ:
ವಿವಾಹಾಪೇಕ್ಷಿಗಳಿಗೆ ಶುಭಸೂಚನೆ.. ಲೇವಾದೇವಿ ವ್ಯವಹಾರ ಬೇಡ. ಸಂಸಾರದಲ್ಲಿ ನೆಮ್ಮದಿ ಸ್ಥಾಪನೆಗೆ ಪ್ರಯತ್ನ. ಹಬ್ಬದ ಸಂಭ್ರಮ ಮುಕ್ತಾಯದ ಹಂತದಲ್ಲಿ. ದೂರದ ಬಂಧುಗಳ ಆಗಮನ. ಗಣೇಶ ಅಷ್ಟಕ, ದತ್ತಪಂಜರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ವೃಶ್ಚಿಕ:
ದೇವಾರಾಧನೆಯಿಂದ ಅವರ್ಣನೀಯ ಆನಂದಾನುಭವ.. ಉದ್ಯೋಗಸ್ಥರ ಸ್ಥಾನ ಗೌರವ ವೃದ್ಧಿ. ಸರ್ಕಾರಿ ಅಧಿಕಾರಿಗಳಿಗೆ ಸ್ವಲ್ಪ ನೆಮ್ಮದಿ. ದೇಶವಿರೋಧಿ ಶಕ್ತಿಗಳಿಗೆ ತಕ್ಕ ಪಾಠ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಧನು:
ದೇವಾನುಗ್ರಹದಿಂದ ಪ್ರತಿಭೆ, ಕೌಶಲ ಬೆಳಕಿಗೆ.. ಉದ್ಯೋಗ ಘಟಕದ ಕಾರ್ಯ ನಿರ್ವಹಣೆಗೆ ಹೊಸ ರೂಪ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಬಂಧುಗಳ ಮನೆಯಲ್ಲಿ ಹಬ್ಬ ಮುಕ್ತಾಯ. ಹಿರಿಯರ ಆರೋಗ್ಯದ ಕುರಿತು ಕಾಳಜಿ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಮಕರ:
ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸುವ ಪ್ರಯತ್ನ.. ವೃತ್ತಿಪರರಿಗೆ ಸಮಯದ ಒತ್ತಡ. ಬಂಧುವರ್ಗದಲ್ಲಿ ಸಾಮರಸ್ಯ ಸ್ಥಾಪನೆ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಮಕ್ಕಳಿಗೆ ಸ್ವಚ್ಛತೆಯ ಕುರಿತು ಬೋಧನೆ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಉದ್ಯೋಗಸ್ಥರಿಗೆ ಹಿತವಾದ ಅನುಭವ.. ಸರ್ಕಾರಿ ನೌಕರರಿಗೆ ಜವಾಬ್ದಾರಿಗಳ ಹೊರೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತೃಪ್ತಿಯ ಅನುಭವ. ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ. ಗಣಪತಿ ಅಥರ್ವಶೀರ್ಷ, ವೇದಸಾರ ಶಿವಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಅಧಿಕಾರಿ ವರ್ಗದವರಿಂದ ಸರ್ವವಿಧ ಸಹಾಯ.. ಉದ್ಯಮಗಳು ಉತ್ಸಾಹದಲ್ಲಿ ಮುನ್ನಡೆ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿಗೆ ಪ್ರಯತ್ನ. ಹಳೆಯ ಒಡನಾಡಿಗಳ ಭೇಟಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.