HMD Rise: ಡಿ.2 ರಿಂದ ಹೊಸ 'ಹೆಚ್ಎಂಡಿ ರೈಸ್' ಸ್ಮಾರ್ಟ್‌ಫೋನ್ ಮಾರಾಟ ಶುರು!

HMD Rise: ಅಗ್ಗದ ಹೆಚ್ಎಂಡಿ ರೈಸ್ 4ಜಿ ಸ್ಮಾರ್ಟ್‌ಫೋನ್, ಈಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಡಿ.2 ರಿಂದ ಫ್ಲಿಪ್‌ಕಾರ್ಟ್ ಮೂಲಕ ಗ್ರಾಹಕರ ಖರೀದಿಗೆ ಲಭ್ಯವಿದೆ.

Nov 28, 2026 - 12:51
Nov 28, 2026 - 13:29
HMD Rise: ಡಿ.2 ರಿಂದ ಹೊಸ 'ಹೆಚ್ಎಂಡಿ ರೈಸ್' ಸ್ಮಾರ್ಟ್‌ಫೋನ್ ಮಾರಾಟ ಶುರು!

HMD Rise: ಬಹುನಿರೀಕ್ಷಿತ ಅಗ್ಗದ ಹೆಚ್ಎಂಡಿ ರೈಸ್ 4ಜಿ ಸ್ಮಾರ್ಟ್‌ಫೋನ್, ಈಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಡಿ.2 ರಿಂದ ಫ್ಲಿಪ್‌ಕಾರ್ಟ್ (Flipkart) ಮೂಲಕ ಗ್ರಾಹಕರ ಖರೀದಿಗೆ ಲಭ್ಯವಿದೆ.

ಇದು ರೂ.9,999 ದರವನ್ನು ಪಡೆದಿದೆ. ಈ ವಿಶೇಷ ಕೊಡುಗೆಯು ಮೊದಲ ದಿನಕ್ಕೆ ಮಾತ್ರ ಸೀಮಿತವಾಗಿದೆ. 4GB RAM + 64GB ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಮರಾಲ್ಡ್ ಗೋಲ್ಡ್ (Emerald Gold), ಇಂಡಿಗೋ ಸಿಲ್ವರ್ (Indigo Silver) ಹಾಗೂ ಮಿಡ್‌ನೈಟ್ ಗೋಲ್ಡ್ (Midnight Gold) ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಫೋನ್ ಆಂಡ್ರಾಯ್ಡ್ 16 ಗೋ (Android 16 Go) ಆಪರೇಟಿಂಗ್ ಸಿಸ್ಟಮ್‌ನ್ನು ಒಳಗೊಂಡಿದೆ. ಎರಡು ವರ್ಷಗಳ ಕಾಲ 'ಸೆಕ್ಯೂರಿಟಿ ಅಪ್ಡೇಟ್'ನ್ನು ಬೆಂಬಲಿಸುತ್ತದೆ. 6.51-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಮಧ್ಯ ಭಾಗದಲ್ಲಿ 'ವಾಟರ್‌ಡ್ರಾಪ್' ಶೈಲಿಯ ನಾಚ್ ಇದ್ದು, ಸೆಲ್ಫಿ ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ.

ಯುನಿಸಾಕ್ 9863ಎ (Unisoc 9863A) ಚಿಪ್‌ಸೆಟ್‌ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಬಳಕೆಯೊಂದಿಗೆ ಸ್ಟೋರೇಜ್‍ನ್ನು 128 GB ವರೆಗೆ ವಿಸ್ತರಿಸಬಹುದು.

ಇದು 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, ಇದರ ಬಾಕ್ಸ್‌ನಲ್ಲಿ ಚಾರ್ಜರ್ ಕೂಡ ಲಭ್ಯವಿದೆ. ಹಿಂಭಾಗ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, 13 ಮೆಗಾಪಿಕ್ಸೆಲ್‌ನ ಮೇನ್ ಕ್ಯಾಮೆರಾವಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಕೊಡಲಾಗಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಹಾಗೂ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಕೂಡ ಇದೆ. 

'ಸರ್ವಂ ಎಐ' (Sarvam AI) ಅಭಿವೃದ್ಧಿಪಡಿಸಿದ 'Indus' ತಂತ್ರಜ್ಞಾವಿದ್ದು, ಈ ಎಐ ಪ್ಲಾಟ್‌ಫಾರ್ಮ್ 22 ಭಾರತೀಯ ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.