Partner: ಸಂಕ್ರಾಂತಿಗೆ 'ಪಾರ್ಟ್ನರ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ
Partner: ಕನ್ನಡ ಸಿನಿಮಾ 'ಪಾರ್ಟ್ನರ್' ಜನವರಿ 15 ಸಂಕ್ರಾಂತಿ ಹಬ್ಬದಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
Partner: ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ನಟನೆಯ ಕನ್ನಡ ಸಿನಿಮಾ 'ಪಾರ್ಟ್ನರ್' (Partner) ಜನವರಿ 15 ಸಂಕ್ರಾಂತಿ ಹಬ್ಬದಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಇಂದಿನ ಕಾಲಘಟ್ಟದ ಪ್ರೀತಿ, ದಾಂಪತ್ಯ ಹಾಗೂ ಸಂಬಂಧಗಳ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ.
ನಿರ್ದೇಶಕ ಶಿವತೇಜಸ್ ಆಕ್ಷನ್ ಕಟ್ ಹೇಳಿದ್ದಾರೆ. ಹೆಚ್‌ಪಿಆರ್ ಎಂಟರ್‌ಪ್ರೈಸಸ್ ಬ್ಯಾನರ್‌ನಡಿ ಹರೀಶ್ ದೇವಿತಂದ್ರೆ ನಿರ್ಮಾಣ ಮಾಡಿದ್ದಾರೆ. ರಂಗಾಯಣ ರಘು, ಮೂಗು ಸುರೇಶ್, ಗೌರವ್ ಶೆಟ್ಟಿ, ಚಿತ್ಕಳಾ ಬಿರಾದಾರ್ ಹಾಗೂ ಗಿರಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಕುಲ್ ಅಭ್ಯಂಕರ್ ಈ ಸಿನಿಮಾಕ್ಕೆ ಮ್ಯೂಸಿಕ್ ನೀಡಿದ್ದಾರೆ. ಸುಜ್ಞಾನ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ.