ಶಿರಸಿಯಲ್ಲಿ 'ತತ್ತ್ವನಿಷ್ಠ' ವಾರ್ಷಿಕೋತ್ಸವ: ಜಿ.ಎಸ್.ಹೆಗಡೆಗೆ ಪ್ರಶಸ್ತಿ ಪ್ರದಾನ
Sirsi: ನಾಳೆ ಶಿರಸಿಯಲ್ಲಿ 'ತತ್ತ್ವನಿಷ್ಠ' ಪತ್ರಿಕೆಯ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.
ಶಿರಸಿ: 'ನಾಡಿನ ನಿಖರ ನುಡಿ’ ಎಂಬ ಧ್ಯೇಯದೊಂದಿಗೆ ಪ್ರಕಟವಾಗುತ್ತಿರುವ 'ತತ್ತ್ವನಿಷ್ಠ' ಪತ್ರಿಕೆಯ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ & ಸಂಗೀತ ಕಾರ್ಯಕ್ರಮ ನ.28 ಶನಿವಾರ ಸಂಜೆ 4 ಗಂಟೆಯಿಂದ ರಂಗಧಾಮದಲ್ಲಿ ನಡೆಯಲಿದೆ.
ಬೆಂಗಳೂರಿನ ಸಪ್ತಕದ ಸ್ಥಾಪಕ ಜಿ.ಎಸ್.ಹೆಗಡೆ ಅವರಿಗೆ 'ತತ್ತ್ವನಿಷ್ಠ ಪ್ರಶಸ್ತಿ' ಪ್ರದಾನ ಮಾಡಲಾಗುತ್ತದೆ. ಪತ್ರಿಕೆಯಲ್ಲಿ ಪ್ರಕಟವಾದ ಆಯ್ದ ಅಂಕಣಗಳ ಸಂಗ್ರಹವಾದ ರವೀಂದ್ರ ಭಟ್ಟ ಸೂರಿ ಅವರ 'ನಡೆಯಲೊಂದು ನುಡಿ' ಕೃತಿಯನ್ನು ಬಿಡುಗಡೆಗೊಳಿಲಾಗುತ್ತದೆ.
ಶಿರಳಗಿಯ ಶ್ರೀಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ.
ವಿಧಾನಸಭೆಯ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರು, ಕೃತಿ ಬಿಡುಗಡೆ ಮಾಡಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಕಾಳ ವೈದ್ಯ, ಭೀಮಣ್ಣ ಟಿ ನಾಯ್ಕ, ಶಿವರಾಮ ಹೆಬ್ಬಾರ, ದಿನಕರ ಕೆ.ಶೆಟ್ಟಿ, ರೂಪಾಲಿ ಎಸ್ ನಾಯ್ಕ, ಗೋಪಾಲಕೃಷ್ಣ ವೈದ್ಯ, ಉಪೇಂದ್ರ ಪೈ, ಜಿ.ಎಂ.ಹೆಗಡೆ ಮುಳಖಂಡ, ಶ್ರೀನಿವಾಸ ಹೆಬ್ಬಾರ, ಶ್ರೀನಿವಾಸ ಭಟ್ಟ ಧಾತ್ರಿ, ಅನಂತಮೂರ್ತಿ ಹೆಗಡೆ ಹಾಗೂ ವಿ.ಪಿ.ಹೆಗಡೆ ವೈಶಾಲಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ಸಂಜೆ ನಡೆಯಲಿದ್ದು, ಸುರತ್ಕಲ್‌ನ ನಿಹಾರಿಕಾ ದೇರಾಜೆ ಗಾಯನ, ಭಾರವಿ ದೇರಾಜೆ ತಬಲಾ ಹಾಗೂ ವರ್ಗಾಸರದ ಅಜಯ್ ಹೆಗಡೆ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ರವೀಂದ್ರ ಭಟ್ಟ ಸೂರಿ ಮತ್ತು ಗಣೇಶ ಜೋಶಿ ಸಂಕೊಳ್ಳಿ ಕಾರ್ಯಕ್ರಮ ನಿರ್ವಹಿಸಲಿದೆ.