ಡಿ.8 ರಂದು ಪುತ್ತೂರು ದೀಪೋತ್ಸವ: ಸಂಪ್ರದಾಯಬದ್ಧವಾಗಿ ಚಪ್ಪರ ಮುಹೂರ್ತ

Puttur Deepotsava: ಡಿ.8 ರಂದು ಪುತ್ತೂರು ದೀಪೋತ್ಸವ ನಡೆಯಲಿದ್ದು, ಸಂಪ್ರದಾಯಬದ್ಧವಾಗಿ ಚಪ್ಪರ ಮುಹೂರ್ತವು ಬುಧವಾರ ನೆರವೇರಿತು.

Nov 19, 2026 - 10:52
Nov 19, 2026 - 10:52
ಡಿ.8 ರಂದು ಪುತ್ತೂರು ದೀಪೋತ್ಸವ: ಸಂಪ್ರದಾಯಬದ್ಧವಾಗಿ ಚಪ್ಪರ ಮುಹೂರ್ತ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ದೀಪೋತ್ಸವ ಮಹೋತ್ಸವವು ಡಿ.8 ರಂದು ನಡೆಯಲಿದೆ. ಇದರ ಪೂರ್ವಭಾವಿಯಾಗಿ 'ಪುತ್ತೂರು ದೀಪೋತ್ಸವ ಸಮಿತಿ' ವತಿಯಿಂದ ಬುಧವಾರ ಚಪ್ಪರ ಮುಹೂರ್ತ ಕಾರ್ಯಕ್ರಮವು ಜರುಗಿತು.

ದೇಗುಲದ ಸಂಪ್ರದಾಯ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ, ಮಧ್ಯಾಹ್ನ 12.39ರ ಶುಭ ಮುಹೂರ್ತದಲ್ಲಿ ಚಪ್ಪರ ಮುಹೂರ್ತವನ್ನು ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ವಾಮನ ಪೈ, ಈಶ್ವರ ಮುರಳಿ, ಶಿವ ಭಟ್ (ಜ್ಯುವೆಲ್ಲರ್ಸ್) ಮತ್ತು ಜಯಕುಮಾರ್ ನಾಯರ್ ಉಪಸ್ಥಿತರಿದ್ದರು.

ಪುತ್ತೂರು ದೀಪೋತ್ಸವ ಸಮಿತಿ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಸ್ವಾಗತ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ದೀಪೋತ್ಸವ ಸಮಿತಿ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ, ಶುಭಾಶ್ ರೈ, ಸಂತೋಷ್ ಕುಮಾರ್ ರೈ, ಉಜಿರ್ ಶೆಟ್ಟಿ, ಮಹೇಶ್ ಸವಣೂರು, ಗೌರಿ ಬನ್ನೂರು, ಸುಮಂಗಲ ಶೆಟ್ಟಿ, ಅಮಿತಾ ಶೆಟ್ಟಿ, ನಯನ ಎಂ ರೈ, ಜಯಶ್ರೀ ಕೆ.ಎಂ. ನಾಯ್ಕ್, ಹರಿಣಾಕ್ಷಿ ಜೆ ಶೆಟ್ಟಿ, ವೇದಾವತಿ ರಾಜೇಶ್, ಜಯಂತಿ ನಾಯಕ್, ರವೀಂದ್ರನಾಥ ರೈ ಸೇರಿದಂತೆ ಹಲವು ಗಣ್ಯರು ಹಾಗೂ ಸಮಿತಿಯ ಪದಾಧಿಕಾರಿಗಳು ಕೂಡ ಹಾಜರಿದ್ದರು.

ಪುತ್ತೂರು ದೀಪೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು, ಈ ಮಹೋತ್ಸವದ ಸಂಭ್ರಮವನ್ನು ಹೆಚ್ಚಿಸುವಂತೆ ಸಮಿತಿಯು ಕೋರಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.