Telugu Actor Giri Babu Passes Away: ತೆಲುಗಿನ ಹಿರಿಯ ನಟ ಗಿರಿ ಬಾಬು ನಿಧನ

Telugu Actor Giri Babu Passes Away: ತೆಲುಗಿನ ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ಗಿರಿ ಬಾಬು ಶನಿವಾರ ವಿಧಿವಶರಾಗಿದ್ದಾರೆ.

Nov 14, 2026 - 19:52
Nov 14, 2026 - 19:53
Telugu Actor Giri Babu Passes Away: ತೆಲುಗಿನ ಹಿರಿಯ ನಟ ಗಿರಿ ಬಾಬು ನಿಧನ
ಚಿತ್ರಕೃಪೆ: https://telugucinema.com/

ಹೈದರಾಬಾದ್: ತೆಲುಗಿನ ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ಗಿರಿ ಬಾಬು (83), ಕೊಂಡಾಪುರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ. ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ಜೂನ್ 8, 1946ರಂದು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ರವಿನೂತಲ ಗ್ರಾಮದಲ್ಲಿ ಜನಿಸಿದರು. ಅವರ ನಿಜವಾದ ಹೆಸರು ಯೆರ್ರ ಶೇಷಗಿರಿ ರಾವ್. ಬಾಲ್ಯದಿಂದಲೂ ರಂಗಭೂಮಿಯ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡಿದ್ದರು. 'ಜಗಮೇ ಮಾಯ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

ಐದು ದಶಕಗಳಿಗೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ, 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕ, ಖಳನಾಯಕ, ಪೋಷಕ ನಟ ಹಾಗೂ ಹಾಸ್ಯ ಕಲಾವಿದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸೂಪರ್ ಸ್ಟಾರ್ ಕೃಷ್ಣ ಅವರೊಂದಿಗೆ ಸುಮಾರು 180 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ನಟನೆಯ ಹೊರತಾಗಿ ಗಿರಿ ಬಾಬು ನಿರ್ಮಾಪಕರಾಗಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. 'ಜಯಭೇರಿ ಆರ್ಟ್' ನಿರ್ಮಾಣ ಸಂಸ್ಥೆ ಮೂಲಕ ಸಿಂಹ ಗರ್ಜನ, ಮೇರುಪುದಾದಿ ಹಾಗೂ ಇಂದ್ರಜಿತ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ರಣರಂಗಂ ಮತ್ತು ನೀ ಸುಖಮೇನೆ ಕೊರುಕುನ್ನ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಬಿ.ವಿ.ನಂದಿನಿ ರೆಡ್ಡಿ ನಿರ್ದೇಶನದ 2023ರ ತೆಲುಗಿನ ಕೌಟುಂಬಿಕ ಚಿತ್ರ 'ಅನ್ನಿ ಮಂಚಿ ಶಕುನಮುಲೆ' ಅವರ ಕೊನೆಯ ಚಿತ್ರವಾಗಿದೆ. 

ಗಿರಿ ಬಾಬು ಪತ್ನಿ ಶ್ರೀದೇವಿ, 2016ರಲ್ಲಿ ಅನಾರೋಗ್ಯದಿಂದ ನಿಧನರಾದರು. ಅವರು ಮಕ್ಕಳಾದ ಮಾಧವಿ, ಬೋಸ್ ಬಾಬು ಹಾಗೂ ಹಾಸ್ಯನಟ ರಘು ಬಾಬು ಅವರನ್ನು ಅಗಲಿದ್ದಾರೆ. 

ಜುಬಿಲಿ ಹಿಲ್ಸ್‌ನ ಫಿಲ್ಮ್ ಚೇಂಬರ್‌ನಲ್ಲಿ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳ ಅಂತಿಮ ದರ್ಶನಕ್ಕಾಗಿ ಸಂಜೆ 7 ರಿಂದ ರಾತ್ರಿ 9 ಗಂಟೆಯವರೆಗೆ ಅವರ ಪಾರ್ಥಿವ ಶರೀರವನ್ನು ಇಡಲಾಗಿದೆ. ನಾಳೆ ಸಂಜೆ 3 ರಿಂದ 4 ಗಂಟೆ ಮಧ್ಯೆ ಪ್ರಕಾಶಂ ಜಿಲ್ಲೆಯ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.