ನಾಳೆ ಪಡುಮಲೆ ದೇಗುಲದ ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಸಮರ್ಪಣೆ

Padumale temple: ನಾಳೆ ಪಡುಮಲೆ ದೇಗುಲದ ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಸಮರ್ಪಣೆ ಮಾಡಲಾಗುತ್ತಿದೆ.

Nov 14, 2026 - 15:18
Nov 14, 2026 - 15:19
ನಾಳೆ ಪಡುಮಲೆ ದೇಗುಲದ ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಸಮರ್ಪಣೆ

ಪುತ್ತೂರು: ಪಡುಮಲೆಯ ಶ್ರೀ ಪೂಮಾಣಿ-ಕಿನ್ನಿಮಾಣಿ ಹಾಗೂ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಧ್ವಜಸ್ತಂಭವು (ಕೊಡಿಮರ) ಕಳೆದ ವರ್ಷದ ಜಾತ್ರೋತ್ಸವದ ಸಂದರ್ಭದಲ್ಲಿ ತುಂಡಾಗಿದ್ದು, ಮುಂಬರುವ ಜಾತ್ರೋತ್ಸವದ ಮೊದಲು ನೂತನ ಧ್ವಜಸ್ತಂಭ ಪ್ರತಿಷ್ಠಾಪಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ.

ಪೆರ್ಲಂಪಾಡಿಯ ದಾನಿಯೊಬ್ಬರು ಸೇವಾರೂಪದಲ್ಲಿ ಉಚಿತವಾಗಿ ನೀಡಿರುವ ಸಾಗುವಾನಿ ಮರವನ್ನು ಈಗಾಗಲೇ ಕ್ಷೇತ್ರಕ್ಕೆ ತಂದು, ವಾಸ್ತುಶಿಲ್ಪದ ಪ್ರಕಾರ ಕೆತ್ತನೆ ಮಾಡಿ ಸಿದ್ಧಪಡಿಸಲಾಗಿದೆ. ನಾಳೆ (ನ.15) ಭಾನುವಾರ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಶುದ್ಧ ಎಳ್ಳೆಣ್ಣೆಯಲ್ಲಿ ನೆನೆಸಿಡುವ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಸುಮಾರು 94 ವರ್ಷಗಳ ಹಿಂದೆ, ಅಂದರೆ 1932ರಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಹಳೆಯ ಧ್ವಜಸ್ತಂಭದಲ್ಲಿ  ಕಳೆದ ವರ್ಷದವರೆಗೂ ಧ್ವಜಾರೋಹಣದೊಂದಿಗೆ ಜಾತ್ರೋತ್ಸವ ನಡೆಯುತ್ತಿತ್ತು. ಇದೀಗ, ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಸಮರ್ಪಿಸುವ ಅಪರೂಪದ ಸೇವೆಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಪಡುವನ್ನೂರು ಹಾಗೂ ಬಡಗನ್ನೂರು ಗ್ರಾಮಗಳ ಪ್ರತಿಯೊಂದು ಮನೆಯಿಂದ ಕನಿಷ್ಠ ಒಂದು ಲೀಟರ್ ಎಳ್ಳೆಣ್ಣೆಯನ್ನು ಸಮರ್ಪಿಸುವಂತೆ ಆಡಳಿತ ಸಮಿತಿಯು ಮನವಿ ಮಾಡಿದೆ.

ಎಳ್ಳೆಣ್ಣೆಯನ್ನು ಕ್ಷೇತ್ರದಿಂದಲೇ ಪೂರೈಸಲಾಗುತ್ತಿದ್ದು, ಅರ್ಧ ಲೀಟರ್‌ಗೆ ರೂ.250, ಒಂದು ಲೀಟರ್‌ಗೆ ರೂ.500 ಮತ್ತು 2 ಲೀಟರ್‌ಗೆ ರೂ.1,000 ನಿಗದಿಪಡಿಸಲಾಗಿದೆ.

ಭಕ್ತರು ಭಾನುವಾರ ಬೆಳಗ್ಗೆ ಕ್ಷೇತ್ರಕ್ಕೆ ಆಗಮಿಸಿ, ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಸಮರ್ಪಿಸುವುದರೊಂದಿಗೆ, ಧಾರ್ಮಿಕ ಸೇವೆಯಲ್ಲಿ ಭಾಗವಹಿಸಬೇಕೆಂದು ಆಡಳಿತ ಸಮಿತಿ ಕೋರಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.