ದಿನ ಭವಿಷ್ಯ: ಇಂದು ಯಾವ ರಾಶಿಗೆ ಶುಭ ಫಲ?
Daily Horoscope: ಇಂದು (ಶನಿವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ಹೊಣೆಗಾರಿಕೆಗಳು.. ಸಮಯಕ್ಕೆ ತಕ್ಕ ಮಾರ್ಗೋಪಾಯ ಅನುಸರಣೆ. ಸರ್ಕಾರಿ ಉದ್ಯೋಗಸ್ಥರ ಸತ್ವಪರೀಕ್ಷೆ ಅನಿವಾರ್ಯ. ಉದ್ಯಮಿಗಳ ವರ್ಗಕ್ಕೆ ಸಮಾಧಾನ. ಮಕ್ಕಳಿಗೆ ಕಲಿಕೆಯಲ್ಲಿ ಉತ್ಸಾಹ ವೃದ್ಧಿ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಶನಿಮಹಾತ್ಮೆ ಓದಿ.
ವೃಷಭ:
ಅವಕಾಶಗಳು ಮತ್ತು ಅದೃಷ್ಟವನ್ನು ಹೊತ್ತು ತಂದ ಶನಿವಾರ.. ವಾಹನ ದುರಸ್ತಿ ಮಾಡುವವರಿಗೆ ಅನುಕೂಲದ ದಿನ. ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಶುಕ್ರದೆಶೆ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಆಹಾರ ಸೇವನೆಯಲ್ಲಿ ಎಚ್ಚರ ಇರಲಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಮಿಥುನ:
ಸಕಾಲಕ್ಕೆ ಕಾರ್ಯ ನಿರ್ವಹಿಸುವ ಚಾಕಚಕ್ಯತೆ.. ಕ್ರಿಯಾಶೀಲತೆಯಿಂದ ಹೆಚ್ವು ಆನಂದ. ಹಳೆಯ ಗೆಳೆಯ ಮತ್ತೆ ಸಂಪರ್ಕಕ್ಕೆ. ಜನಸೇವಾ ಕಾರ್ಯಗಳಲ್ಲಿ ಆಸಕ್ತಿ. ಆರೋಗ್ಯ ವೃದ್ಧಿಯಿಂದ ನೆಮ್ಮದಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
ಕರ್ಕಾಟಕ:
ಶಿಸ್ತು, ಕ್ರಮಬದ್ಧ ಕಾರ್ಯಶೈಲಿಯಿಂದ ಯಶಸ್ಸು.. ಉದ್ಯೋಗಸ್ಥರಿಗೆ ಉತ್ತೇಜನದ ಅನುಭವ. ಉದ್ಯಮಗಳ ಬೆಳವಣಿಗೆಗೆ ಅನುಕೂಲದ ಸನ್ನಿವೇಶ. ಮಹಿಳೆಯರ ಸ್ವೋದ್ಯೋಗ ಯೋಜನೆಗಳಿಗೆ ಕೀರ್ತಿ ರಾತ್ರಿ ಪ್ರಯಾಣದಲ್ಲಿ ಎಚ್ಚರ. ಗಣೇಶ ಪಂಚರತ್ನ, ಹನುಮಾನ್ ಚಾಲೀಸಾ, ಲಕ್ಷ್ಮೀಸ್ತೋತ್ರ ಓದಿ.
ಸಿಂಹ:
ಉನ್ನತ ಉದ್ಯೋಗಸ್ಥರಿಗೆ ಸಹಕಾರ.. ಉದ್ಯಮಕ್ಕೆ ನವಚೈತನ್ಯ ಪ್ರಾಪ್ತಿ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಲೋಕಹಿತ ಚಿಂತನೆಯಿಂದ ನೆಮ್ಮದಿ. ಗಣಪತಿ ಅಥರ್ವಶೀರ್ಷ, ದೇವೀಸ್ತೋತ್ರ, ಸುಬ್ರಹ್ಮಣ್ಯ ಕವಚ ಓದಿ.
ಕನ್ಯಾ:
ಸ್ವಪ್ರಯತ್ನದಿಂದ ಮಾತ್ರ ಉನ್ನತಿ.. ಸಣ್ಣ ಉದ್ಯಮ ಘಟಕಗಳ ಪ್ರಗತಿ ಆರಂಭ. ದೂರದೇಶದಲ್ಲಿರುವ ಮಿತ್ರರಿಂದ ವ್ಯವಹಾರದ ಪ್ರಸ್ತಾವ. ಕೇಟರಿಂಗ್ ವ್ಯವಹಾರಸ್ಥರಿಗೆ ಮಧ್ಯಮ ಫಲ. ವಿವಾಹ ಮಾತುಕತೆಯಲ್ಲಿ ಭಾಗಿ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
ತುಲಾ:
ಪರಿಚಿತರಲ್ಲಿ ಮಿತ್ರತ್ವ ವೃದ್ಧಿ.. ಉತ್ಪಾದನಾ ಕ್ಷೇತ್ರದಲ್ಲಿ ಪೈಪೋಟಿ ಶಮನ. ಉದ್ಯೋಗಾಪೇಕ್ಷಿಗಳಿಗೆ ಅನುಕೂಲ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಅಪರಿಚಿತ ಸ್ಥಳದಲ್ಲಿ ಆಹಾರ ಸೇವಿಸುವಾಗ ಎಚ್ಚರ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ವೃಶ್ಚಿಕ:
ಕೆಲವರಿಗೆ ಅರ್ಧ ದಿನ, ಕೆಲವರಿಗೆ ಇಡೀ ದಿನ ವಿರಾಮ.. ಸರ್ಕಾರಿ ಅಧಿಕಾರಿಗಳಿಗೆ ಸತ್ವಪರೀಕ್ಷೆ. ರಾಜಕಾರಣಿಗಳಿಗೆ ಅನಿಶ್ಚಿತ ಪರಿಸ್ಥಿತಿ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಆಸ್ತಿ ಖರೀದಿ-ಮಾರಾಟ ವ್ಯವಹಾರಸ್ಥರಿಗೆ ಹಾನಿ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಧನು:
ವೈವಿಧ್ಯೀಕರಣದಿಂದ ಉದ್ಯಮಕ್ಕೆ ಲಾಭ.. ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಸಹಾಯ. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ಸಾಮೂಹಿಕ ಪ್ರಯತ್ನದಿಂದ ವಾತಾವರಣ ಶುದ್ಧಿ. ಬೌದ್ಧಿಕ ಶ್ರಮಕ್ಕೆ ಯೋಗ್ಯ ಪ್ರತಿಫಲ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಅಷ್ಡಲಕ್ಷ್ಮೀ ಸ್ತೋತ್ರ ಓದಿ.
ಮಕರ:
ಹೆಸರು ಕೆಡಿಸುವವರ ಮಸಲತ್ತಿಗೆ ಸೋಲು.. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲದ ವಾತಾವರಣ. ಹಿರಿಯರನ್ನು ಸಮ್ಮಾನಿಸುವ ಅವಕಾಶ ಪ್ರಾಪ್ತಿ. ಮಕ್ಕಳ ಓದು ಸುಧಾರಣೆಯತ್ತ ಗಮನ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಸಪ್ತಾಹದ ಮುಖ್ಯ ಕಾರ್ಯಗಳ ಮುಕ್ತಾಯ ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ.. ಸರ್ಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಲಲಿತ ಕಲೆಗಳಲ್ಲಿ ಆಸಕ್ತರಿಗೆ ಆನಂದ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಪ್ರೋತ್ಸಾಹಕ ವಾತಾವರಣದಿಂದ ಮುನ್ನಡೆ.. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಇಲಾಖೆಗಳವರಿಂದ ಉತ್ತಮ ಸಹಕಾರ. ಆವಶ್ಯಕತೆ ಉಳ್ಳವರಿಗೆ ಸಹಾಯ ಮಾಡುವ ಅವಕಾಶ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.