ಮಹಿಳೆಯರಿಗೆ ತಿಂಗಳಿಗೆ ರೂ.1,500: ಅರ್ಹ ಕುಟುಂಬಗಳಿಗೆ 300 ಯೂನಿಟ್ ಉಚಿತ ವಿದ್ಯುತ್
Himachal Pradesh: ಹಿಮಾಚಲ ಪ್ರದೇಶ ಸಚಿವ ಸಂಪುಟ ಸಭೆಯಲ್ಲಿ 'ಮುಖ್ಯಮಂತ್ರಿ ಅಪ್ನಾ ಪರಿವಾರ್ ಸುಖಿ ಪರಿವಾರ್ ಯೋಜನೆ'ಯನ್ನು ಪ್ರಾರಂಭಿಸಲು ಶುಕ್ರವಾರ ಅನುಮೋದನೆ ನೀಡಲಾಗಿದೆ.
ಶಿಮ್ಲಾ: ಹಿಮಾಚಲ ಪ್ರದೇಶ ಸಚಿವ ಸಂಪುಟ ಸಭೆಯಲ್ಲಿ 'ಮುಖ್ಯಮಂತ್ರಿ ಅಪ್ನಾ ಪರಿವಾರ್ ಸುಖಿ ಪರಿವಾರ್ ಯೋಜನೆ'ಯನ್ನು ಪ್ರಾರಂಭಿಸಲು ಶುಕ್ರವಾರ ಅನುಮೋದನೆ ನೀಡಲಾಗಿದೆ.
ಈ ಯೋಜನೆಯಡಿ 18 ರಿಂದ 59 ವರ್ಷದೊಳಗಿನ ಅರ್ಹ ಮಹಿಳೆಯರಿಗೆ ತಿಂಗಳಿಗೆ ರೂ.1,500 ಸಹಾಯಧನ ಲಭ್ಯವಾಗಲಿದೆ. ಅರ್ಹ ಕುಟುಂಬಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಕೂಡ ದೊರೆಯಲಿದ್ದು, 3.5 ಲಕ್ಷ ಮಹಿಳಾ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಸಿಎಂ ಸುಖ್ವಿಂದರ್ ಸಿಂಗ್ ಸುಖು ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ನೆರೆಯ ರಾಜ್ಯಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಕೈಗಾರಿಕೆಗಳಿಗೆ ಮಾರಾಟವಾಗುವ ಹೆಚ್ಚುವರಿ ಕಚ್ಚಾ ನೀರಿನ ದರವನ್ನು ನಿರ್ಧರಿಸಲು ಏಕರೂಪದ ರಾಜ್ಯ ನೀತಿಯನ್ನು ಜಾರಿಗೊಳಿಸಲು ಸಚಿವ ಸಂಪುಟ ತೀರ್ಮಾನ ಮಾಡಿದ್ದು, ಪ್ರತಿ 1,000 ಘನ ಅಡಿಗೆ ರೂ.100 ಶುಲ್ಕವನ್ನು ನಿಗದಿಪಡಿಸಲಾಗಿದೆ.
ರಾಜೀವ್ ಗಾಂಧಿ ಸ್ವರೋಜ್‌ಗಾರ್ ಸ್ಟಾರ್ಟ್ಅಪ್ ಯೋಜನೆ 2023ರ ಅಡಿಯಲ್ಲಿ, ಡೀಸೆಲ್ ಬಸ್‌ಗಳನ್ನು ಖರೀದಿಸುವ ಸಬ್ಸಿಡಿಯನ್ನು ಶೇಕಡ 30 ರಿಂದ 40% ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ.